ಕಲಬುರ್ಗಿ: 2025ರಲ್ಲಿ ಬಿಜೆಪಿ ಮಾತೃಸಂಸ್ಥೆ ಆರ್‌ಎಸ್‌ಎಸ್‌ಗೆ 100 ವರ್ಷಗಳು ತುಂಬಲಿವೆ. ಆ ಹೊತ್ತಿಗೆಸಂದರ್ಭದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲೆಂದೇಸಿಎಎ, ಎನ್ಆರ್‌ಸಿ, ಎನ್‌ಪಿಆರ್ಜಾರಿಗೊಳಿಸಲಾಗುತ್ತಿದೆ ಎಂದು ಸಿಪಿಎಂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಮನೆ ಮನೆಗೆ ತೆರಳಿ ಜಾಗೃತಿ ಮಾಡಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಹಾಳಾಗಿದೆ ಕೇಂದ್ರ ಸರ್ಕಾರದ ಪ್ರಕಾರ 4.8 ಜಿಡಿಪಿ ಇದೆ. ಆದರೆ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಕಾರ ಭಾರತದ ಆರ್ಥಿಕ ವ್ಯವಸ್ಥೆ ಕುಸಿದಿದ್ದು, ಜಿಡಿಪಿ ಶೇ 2.8 ಇದೆ ಎಂದು ಮಾಹಿತಿ ನೀಡಿದರು.

ಅಟೊಮೊಬೈಲ್ ಮತ್ತು ಜವಳಿ ಉದ್ಯಮದಲ್ಲಿ 30 ಲಕ್ಷ ಉದ್ಯೋಗಗಳು ಕಡಿತಗೊಂಡಿವೆ ದೂರಿದರು. ಈ ಸರ್ಕಾರದ ಆಡಳಿತದಲ್ಲಿ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಶ್ರೀಮಂತರು ಶ್ರೀಮಂತರಾಗಿ ಬೆಳೆಯುತ್ತಿದ್ದಾರೆ. ಗೃಹಸಚಿವ ಅಮಿತ್ ಶಾ ಬ್ರಿಟಿಷರ ಹಾಗೆ ಆಡಳಿತ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿಎಎ ವಾಪಸ್ ತೆಗೆದುಕೊಳ್ಳುವುದಿಲ್ಲವೆಂದು ಹೇಳುತ್ತಾರೆ. ಬ್ರಿಟಿಷರು ಇದೇ ತರಹ ಮಾತಾಡುತ್ತಿದ್ದರು ಎಂದು ವಿಮರ್ಶಿಸಿದರು.

ಎನ್ಆರ್ಸಿ, ಎನ್ಪಿಆರ್ ಕುರಿತು ಸಾರ್ವಜನಿಕರ ಮನೆ ಮನೆಗೆ ಸರ್ಕಾರದವರು ಬಂದು ವಾಸಸ್ಥಳದ ಕುರಿತು ಏನೇ ಕೇಳಿದರೂ ಉತ್ತರ ಕೊಡಬೇಡಿ. ಯಾವುದೇ ದಾಖಲಾತಿ ನೀಡಬೇಡಿ ಎಂದು ಹೇಳುವ ಸಲುವಾಗಿ ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ಅಸಹಕಾರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರಬೋಸರ ಜನ್ಮದಿನದಂದು ಪ್ರಾರಂಭ ಮಾಡಿ ಜ.26ನೇ ದಿವಸವನ್ನು ಸಂವಿಧಾನ ಶಪಥ ದಿನವನ್ನಾಗಿ ಆಚರಿಸಲಾಗುವುದು. ಹುತಾತ್ಮ ದಿನದಂದು (ಜನವರಿ 30) ಗಾಂಧಿ ಕೊಂದವರ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಯೆಚೂರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.