ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಸೇವೆಯೇ ಭಗವಂತನ ಪೂಜ: ರಾಮಾಚಾರ್ಯ ಘಂಟಿ

Published 8 ಜನವರಿ 2024, 16:26 IST
Last Updated 8 ಜನವರಿ 2024, 16:26 IST
ಅಕ್ಷರ ಗಾತ್ರ

ಕಲಬುರಗಿ: ‘ಸಮಾಜ ಸೇವೆಯೇ ಭಗವಂತನ ನಿಜವಾದ ಪೂಜೆ’ ಎಂದು ಉತ್ತರಾದಿ ಮಠದ ಅಧಿಕಾರಿ ರಾಮಾಚಾರ್ಯ ಘಂಟಿ ಅಭಿಪ್ರಾಯಪಟ್ಟರು.

ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಜಯತೀರ್ಥ ವೆಲ್‌ಫೇರ್ ಹಾಗೂ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೋಮವಾರ ನಡೆದ ‘ವಿಪ್ರ ಚೈತನ್ಯ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸಮಾಜ ಸೇವೆಯಲ್ಲಿಯೇ ದೇವರನ್ನು ಕಾಣಬೇಕು. ಬಡವರಿಗೆ ಸಹಾಯ ಮಾಡುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಬೇಕು. ಸಮಾಜದಲ್ಲಿನ ಉಳ್ಳವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು. ವಿದ್ಯಾವಂತರ ಸಂಖ್ಯೆ ಬೆಳೆದಂತೆ ಬಡತನ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾಧಕರನ್ನು ಗುರುತಿಸಿ ತಂದೆ ಮತ್ತು ತಾಯಿಯ ಹೆಸರಿನಲ್ಲಿ ಪ್ರಶಸ್ತಿ ಕೊಡುತ್ತಿರುವ ಬಾಲಕೃಷ್ಣ ಲಾತೂರಕರ್ ಹಾಗೂ ರವಿ ಲಾತೂರಕರ್ ಅವರ ಕಾರ್ಯ ಶ್ಲಾಘನೀಯ ಎಂದರು.

ಹಿರಿಯ ವಿದ್ವಾಂಸ ವಸಂತ ಮಾಧವಾಚಾರ್ಯರಿಗೆ ದಿ.ಭೀಮಸೇನರಾವ ಲಾತೂರಕರ್ ಸ್ಮರಣಾರ್ಥ ಹಾಗೂ ಸುಧಾ ಕರಲಗಿಕರ್ ಅವರಿಗೆ ಶಾಂತಾಬಾಯಿ ಲಾತೂರಕರ್ ಸ್ಮರಣಾರ್ಥ ವಿಪ್ರ ಚೈತನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಾಂತ ನಗರದ ಹನುಮಾನ ಮಂದಿರದ ಅರ್ಚಕ ಗುಂಡಾಚಾರ್ಯ ನರಿಬೋಳ, ಗೋ ಪ್ರೇಮಿ ಕಿಶೋರ ದೇಶಪಾಂಡೆ ಪ್ರಸನ್ನದನಾಚಾರ್ಯ ಜೋಶಿ, ಸಾಹಿತಿ ಸ್ವಾಮಿರಾವ ಕುಲಕರ್ಣಿ, ಭುರ್ಲಿ ಪ್ರಹ್ಲಾದ, ವ್ಯಾಸರಾಜ, ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಅಧ್ಯಕ್ಷೆ ಜ್ಯೋತಿ ಲಾತೂರಕರ್, ಉಷಾ ಲಾತೂರಕರ್, ಛಾಯಾ ಮುಳುರ, ಜಾನಕಿ ದೇಶಪಾಂಡೆ, ಶಾಂತಿ ದೇಸಾಯಿ, ಅನಿಲ ಕುಲಕರ್ಣಿ, ಸುರೇಶ ಕುಲಕರ್ಣಿ, ವಿನೂತ ಜೋಶಿ ಹಾಗೂ ಇತರರು ಪಾಲ್ಗೊಂಡಿದ್ದರು.

ಟ್ರಸ್ಟ್‌ ಅಧ್ಯಕ್ಷ ಬಾಲಕೃಷ್ಣ ಲಾತೂರಕರ್ ಅಧ್ಯಕ್ಷತೆ ವಹಿಸಿದ್ದರು. ಸಾಕ್ಷಿ ಲಾತೂರಕರ್, ಮಾಧುರಿ ಥಿಟೆ ಪ್ರಾರ್ಥಿಸಿದರು. ಟ್ರಸ್ಟ್ ಕಾರ್ಯದರ್ಶಿ ರವಿ ಲಾತೂರಕರ್ ನಿರೂಪಿಸಿದರು. ಪತ್ರಕರ್ತ ಶಾಮಸುಂದರ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT