ಬುಧವಾರ, ಫೆಬ್ರವರಿ 1, 2023
16 °C

ಕಲಬುರಗಿ ಮೂಲಕ ನಾಂದೇಡ್‌–ಯಶವಂತಪುರ ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಬೀದರ್–ಕಲಬುರಗಿ ಮಾರ್ಗವಾಗಿ ನಾಂದೇಡ್‌–ಯಶವಂತಪುರ ವಿಶೇಷ ರೈಲು ಡಿಸೆಂಬರ್‌ ತಿಂಗಳಲ್ಲಿ ಆಯ್ದ ಎಂಟು ದಿನಗಳ ಕಾಲ ಸಂಚರಿಸಲಿದೆ.

ನಾಂದೇಡ್ ಮತ್ತು ಯಶವಂತಪುರ ನಡುವೆ ವಿಶೇಷ ರೈಲು (07093) ಸೋಮವಾರ ಮಧ್ಯಾಹ್ನ 1.05ಕ್ಕೆ ನಾಂದೇಡ್‌ನಿಂದ ಹೊರಟು ಮರುದಿನ (ಮಂಗಳವಾರ) ಬೆಳಿಗ್ಗೆ 11ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ ಎಂದು ದಕ್ಷಿಣ ಮಧ್ಯೆ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಶವಂತಪುರದಿಂದ (07094) ಮಂಗಳವಾರ ಸಂಜೆ 4.15ಕ್ಕೆ ಹೊರಟು ಮರುದಿನ (ಬುಧವಾರ) ಮಧ್ಯಾಹ್ನ 1ಕ್ಕೆ ನಾಂದೇಡ್‌ ತಲುಪಲಿದೆ.

ನಾಂದೇಡ್‌–ಯಶವಂತಪುರ ವಿಶೇಷ ರೈಲು ಪೂರ್ಣ, ಪರ್ಬಣಿ, ಉದಗಿರ್, ಭಾಲ್ಕಿ, ಬೀದರ್, ಹುಮನಾಬಾದ್, ಕಲಬುರಗಿ, ವಾಡಿ, ರಾಯಚೂರು, ಮಂತ್ರಾಲಯ ರೋಡ್‌, ಆದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದುಪುರ ಮತ್ತು ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯ ವಕ್ತಾರ ಚ. ರಾಕೇಶ್ ತಿಳಿಸಿದ್ದಾರೆ.

ನಾಂದೇಡ್‌–ಯಶವಂತಪುರ ಮಾರ್ಗದಲ್ಲಿ ಡಿ.5, 12, 19 ಮತ್ತು 26ರಂದು ಹಾಗೂ ಯಶವಂತಪುರ–ನಾಂದೇಡ್ ಮಾರ್ಗದಲ್ಲಿ ಡಿ.6, 13, 20 ಮತ್ತು 27ರಂದು ಸಂಚರಿಸಲಿದೆ. ಈ ರೈಲು 2ಎಸಿ, 3ಎಸಿ, ಸ್ಲೀಪರ್ ಕ್ಲಾಸ್ ಮತ್ತು ಸಾಮಾನ್ಯ ಬೋಗಿಗಳು ಹೊಂದಿರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು