ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಶುಲ್ಕ ಹೆಚ್ಚಳಕ್ಕೆ ವಿರೋಧ

Last Updated 14 ನವೆಂಬರ್ 2020, 16:23 IST
ಅಕ್ಷರ ಗಾತ್ರ

ಕಲಬುರ್ಗಿ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶುಲ್ಕಗಳನ್ನು ಹೆಚ್ಚಿಸಿದ ಸರ್ಕಾರದ ಕ್ರಮವನ್ನು ಇಲ್ಲಿನ ವೈಟ್‌ಸ್ಪಾಕ್ರ್ಸ್ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವೇದಿಕೆ ಖಂಡಿಸಿದೆ.‌

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶುಲ್ಕ ಹೆಚ್ಚಿಸುವ ಪ್ರಸ್ತಾವವನ್ನು ಮುಂದಿಟ್ಟಾಗ ಕಳೆದ ತಿಂಗಳಿನಲ್ಲಿ ಅದಕ್ಕೆ ಬಲವಾದ ವಿರೋಧ ಬಂದರು ಕೂಡ, ರಾಜ್ಯ ಸರ್ಕಾರ ಖಾಸಗಿ ಕಾಲೇಜುಗಳ ಪರ ನಿಂತಿರುವುದು ಅತ್ಯಂತ ವಿಷಾದಕರ ಸಂಗತಿ. ಕೋವಿಡ್ ಹೆಚ್ಚುತ್ತಿರುವ ಇಂತಹ ಕಷ್ಟಕರ ಸಂದರ್ಭದಲ್ಲಿ ಬಹುತೇಕ ಜನ ಉದ್ಯೋಗ ಕಳೆದುಕೊಂಡಿದ್ದಾರೆ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶುಲ್ಕ ಹೆಚ್ಚಿಸಿರುವುದು ಅತ್ಯಂತ ಖಂಡನೀಯ ಎಂದು‌ ವೇದಿಕೆಯ ಜಿಲ್ಲಾ ಸಂಚಾಲಕ ಎಸ್‌.ಎಚ್‌. ಹಣಮಂತ ಕಿಡಿ ಕಾರಿದ್ದಾರೆ.

‘ವೈದ್ಯಕೀಯ ಶಿಕ್ಷಣವೇ ಮಾನವ ಕುಲಕ್ಕೆ ಸೇವೆ ಸಲ್ಲಿಸುವಂಥದ್ದು. ಇದು ಖಾಸಗಿ ಲಾಭಕ್ಕೆ ಹಾಗೂ ಲಾಭದ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಆದರೆ, ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಒಂದು ಜವಾಬ್ದಾರಿಯುತವಾಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ತಮ್ಮ ಜೀವವನ್ನೇ ಲೆಕ್ಕಿಸದೆ ಕೋವಿಡ್ ವಿರುದ್ಧ ಹೋರಾಡಿದರು. ಈ ಸಂದರ್ಭದಲ್ಲಿ ಸಾವಿರಾರು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೋವಿಡ್‍ ಪೀಡಿತರಾದರು. ಹಲವರು ಪ್ರಾಣ ಕಳೆದುಕೊಂಡರು. ಇಂಥ ಸೇವೆಗೂ ಸರ್ಕಾರ ಬೆಲೆ ಕೊಟ್ಟಿಲ್ಲ’ ಎಂದು ವೇದಿಕೆ ಸದಸ್ಯ ವಿಶಾಲ ದೊಡ್ಡಮನಿ ಬೇಸರ ವ್ಯಕ್ತಪಡಿಸಿದರು.

‘ಈಗ ಸರ್ಕಾರಿ ವೈದ್ಯಕೀಯ ಸೀಟು, ಖಾಸಗಿ ಕಾಲೇಜುಗಳಲ್ಲಿ ಶೇ 15 ಹಾಗೂ ಖಾಸಗಿ ಸಂಸ್ಥೆಯ ಸೀಟುಗಳ ಶುಲ್ಕ ಶೇ 25 ಹೆಚ್ಚಳವಾಗಿದೆ. ಅಂದರೆ, ಸರ್ಕಾರಿ ವೈದ್ಯಕೀಯ ಸೀಟಿಗೆ ₹ 1.12 ಲಕ್ಷದಿಂದ ₹ 1.29 ಲಕ್ಷ ಹೆಚ್ಚಾಗಿದೆ. ಖಾಸಗಿ ವೈದ್ಯಕೀಯ ಸೀಟಿಗೆ ₹ 7.86 ಲಕ್ಷದಿಂದ ₹ 10 ಲಕ್ಷ ಏರಿದೆ. ಅದೇ ರೀತಿ ದಂತ ವೈದ್ಯಕೀಯ ಸರ್ಕಾರಿ ಸೀಟನ್ನು ₹ 83,356ಕ್ಕೂ ಹಾಗೂ ಖಾಸಗಿ ದಂತ ವೈದ್ಯಕೀಯ ಸೀಟನ್ನು ₹ 6.66 ಲಕ್ಷಕ್ಕೆ ಏರಿಸಿದ್ದಾರೆ. ಇದನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ಮಾಡಲಗುವುದು ಎಂದೂ ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT