ಗುರುವಾರ , ಆಗಸ್ಟ್ 18, 2022
25 °C

ಚಿತ್ತಾಪುರ: ವಿಹಿಂಪ, ಬಜರಂಗ ದಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೇಡಂ: ಚಿತ್ತಾಪುರ ಪಟ್ಟಣದಲ್ಲಿರುವ ಅಶ್ವಾರೂಢ ಬಸವೇಶ್ವರ ಪುತ್ಥಳಿಗೆ ಬಟ್ಟೆ ಕಟ್ಟಿ ಅವಮಾನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿಶ್ವಹಿಂದು ಪರಿಷದ್ ತಾಲ್ಲೂಕು ಘಟಕ ಮತ್ತು ಭಜರಂಗದಳ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಉಪವಿಭಾಗಾಧಿಕರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಬಸವೇಶ್ವರ ಪುತ್ಥಳಿಗೆ ಅನ್ಯ ಕೋಮಿನ ಯುವಕ ಯಾರದೋ ಕುಮ್ಮಕ್ಕಿನಿಂದ ಕಪ್ಪು ಮತ್ತು ಕೆಂಪು ಬಟ್ಟೆಯಿಂದ ಮುಖಕ್ಕೆ ಕಟ್ಟಿರುವುದನ್ನು ವಿಶ್ವಹಿಂದು ಪರಿಷದ್ ಖಂಡಿಸುತ್ತದೆ. ನಾಡಿನ ಸಂತರ ಮತ್ತು ಮಹಾತ್ಮರ ಹಾಗೂ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಗುರಿ ಇಟ್ಟುಕೊಂಡು ಇಂತಹ ದುಷ್ಕೃತ್ಯಕ್ಕೆ ಅನ್ಯ ಕೋಮಿನ ಜನರು ಕೈಹಾಕುತ್ತಿದ್ದಾರೆ. ಈ ಪ್ರಕರಣದಲ್ಲಿ ಬಂಧಿತನಾದ ಯುವಕನು ಬುದ್ಧಿಮಾಂದ್ಯನೆಂದು ಬಿಂಬಿಸಲಾಗುತ್ತಿದೆ. ಆದರೆ ಅವನ ನಡವಳಿಕೆ ಮತ್ತು ಧರಿಸಿರುವ ಬಟ್ಟೆಯನ್ನು ಧರಿಸಿದ್ದು ಗಮನಿಸಿದ್ದರೆ, ಅವನ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ವಿಶ್ವ ಹಿಂದು ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಜಿಲ್ಲಾ ಸಹ-ಕಾರ್ಯದರ್ಶಿ ಅವಿನಾಶ ಮಡಿವಾಳ, ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಮುಸ್ತಾಜರ್, ಭಜರಂಗದಳ ತಾಲ್ಲೂಕು ಸಂಯೋಜಕ ಸಚಿನ್ ಮಿನಕೇರಿ, ರವಿಗೌಡ ಪೋಲಿಸ್ ಪಾಟೀಲ, ಬಸವರಾಜ ಕೋಸಗಿ, ಹೂವಪ್ಪ ಮಾಲಿ, ಬಸವರಾಜ ಬಜಾರ್, ಪ್ರಕಾಶ, ರವಿ ಹಡಪದ, ಕಾಶಿನಾಥ ಭಜಂತ್ರಿ, ಭೀಮಾಶಂಕರ ಹೂಗಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.