ಭಾನುವಾರ, ಸೆಪ್ಟೆಂಬರ್ 25, 2022
29 °C

ಭೂಮಿಯಿಂದ ಸದ್ದು: ಭೂಕಂಪನ ದೃಢಪಟ್ಟಿಲ್ಲ ಎಂದ ತಹಶೀಲ್ದಾರ್ ಅಂಜುಮ್ ತಬಸ್ಸುಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ವಿವಿಧೆಡೆ ಬುಧವಾರ ತಡರಾತ್ರಿ ಭೂಮಿಯಿಂದ ಸದ್ದು ಬಂದಿದೆ. ಆದರೆ ಭೂಕಂಪನ‌ ಮಾಪನ ಕೇಂದ್ರಗಳಲ್ಲಿ ಇದು ದೃಢಪಟ್ಟಿಲ್ಲ ಎಂದು ತಹಶೀಲ್ದಾರ್ ಅಂಜುಮ್ ತಬಸ್ಸುಮ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬುಧವಾರ ತಡರಾತ್ರಿ ಚಿಮ್ಮಾಈದಲಾಯಿ, ದಸ್ತಾಪುರ, ಐಪಿ ಹೊಸಳ್ಳಿ, ನೀಮಾ ಹೊಸಳ್ಳಿ, ಅಣವಾರ, ಗೌಡನಹಳ್ಳಿ, ಸುಲೇಪೇಟ ಮೊದಲಾದ ಕಡೆ ಭೂಮಿಯಿಂದ ಸದ್ದು ಬಂದಿದೆ ಎಂದು ಜನ ತಿಳಿಸಿದ್ದರು.‌ ಈ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಭೂವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಭೂಕಂಪ ತಜ್ಞರನ್ನು ಸಂಪರ್ಕಿಸಿದ್ದೇವೆ, ಭೂಕಂಪದ ಯಾವುದೇ ದತ್ತಾಂಶ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ ಎಂದರು.

ಶರಣಸಿರಸಗಿಯ ಭೂಕಂಪನ‌ ಮಾಪನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ ಮೇಲೆ ಅವರು ದತ್ತಾಂಶ ಪರಿಶೀಲಿಸಿದ್ದು ಯಾವುದೇ ಭೂಕಂಪನ ಅಥವಾ ಲಘುಕಂಪನ ದಾಖಲಾಗಿಲ್ಲ ಎಂದರು.

‘ಜನರು ವಿನಾಕಾರಣ ಗಾಬರಿಗೊಳ್ಳಬಾರದು. ಸರ್ಕಾರ, ವಿಜ್ಞಾನಿಗಳು ನಿಮ್ಮ ಜತೆಗಿದ್ದಾರೆ’ ಎಂದು ಅಭಯ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು