ಸೋಮವಾರ, ಆಗಸ್ಟ್ 15, 2022
24 °C

ಸ್ಥಳ ನಿಯುಕ್ತಿಗಾಗಿ ಶಿಕ್ಷಕರ ತಾತ್ಕಾಲಿಕ ಕೌನ್ಸಿಲಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಇಡಿ, ಬಿ.ಪಿ.ಇಡಿ ತರಬೇತಿ ಹೊಂದಿದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-2 ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಗೆ ಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಲು ಬ್ಲಾಕ್ ವಾರು, ವಿಷಯವಾರು ಹಾಗೂ ಮಾಧ್ಯಮವಾರು ತಾತ್ಕಾಲಿಕ ಕೌನ್ಸೆಲಿಂಗ್ ಆದ್ಯತಾ ಪಟ್ಟಿಗಳನ್ನು ಕಚೇರಿಯ ವೆಬ್‌ಸೈಟ್‌ ddpikalaburagi.in/seniority.aspx ಇದರಲ್ಲಿ ಪ್ರಕಟಿಸಲಾಗಿದೆ.

ಸಂಬಂಧಪಟ್ಟ ಶಿಕ್ಷಕರು ಈ ತಾತ್ಕಾಲಿಕ ಕೌನ್ಸೆಲಿಂಗ್ ಆದ್ಯತಾ ಪಟ್ಟಿಯನ್ನು ಗಮನಿಸಿ ಈ ಪಟ್ಟಿ ಕುರಿತು ಏನಾದರೂ ಆಕ್ಷೇಪಣೆ  ಇದ್ದಲ್ಲಿ ಸೆಪ್ಟೆಂಬರ್ 2ರವರೆಗೆ ಕಚೇರಿಯ ಅವಧಿಯಲ್ಲಿ ಖುದ್ದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಹಾಜರಾಗಿ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಆಯಾ ಬ್ಲಾಕಿನಲ್ಲಿ ಅರ್ಹತೆ ಹೊಂದಿರುವ ಶಿಕ್ಷಕರುಗಳಲ್ಲಿ ಅಂಗವಿಕಲ ಶಿಕ್ಷಕರುಗಳು ಇದ್ದಲ್ಲಿ ಅವರುಗಳಿಗೆ ಕೌನ್ಸೆಲಿಂಗ್‍ದಲ್ಲಿ ಆದ್ಯತೆ ನೀಡಿ ಸಾಮಾನ್ಯ ಶಿಕ್ಷಕರಿಗೆ ಜೇಷ್ಠತೆ ಆಧಾರದ ಮೇರೆಗೆ ಆದ್ಯತೆ ನೀಡಲಾಗಿದೆ.

ಸ್ಥಳ ನಿಯುಕ್ತಿಗಾಗಿ ಸೆಪ್ಟೆಂಬರ್ 3ರಂದು ಬೆಳಿಗ್ಗೆ 11 ಗಂಟೆಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಕೌನ್ಸೆಲಿಂಗ್ ನಡೆಸಲಾಗುವುದು. ಸಂಬಂಧಿಸಿದ ಶಿಕ್ಷಕರು ಹಾಜರಾಗುವ ಸಮಯದಲ್ಲಿ ತಮ್ಮ ಎಲ್ಲ ಮೂಲ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಈ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು