ಅಫಜಲಪುರ: ಯಾವುದೇ ದೇಶದ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಶಿಕ್ಷಕರೇ ದೇಶದ ಭದ್ರ ಬುನಾದಿಯ ರೂವಾರಿಗಳಾಗಿದ್ದಾರೆ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.
ಇಲ್ಲಿನ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಶಿಕ್ಷಣ ಮಹಾ ವಿದ್ಯಾಲಯ ಹಾಗೂ ಶಿಕ್ಷಕರ ತರಬೇತಿ ಕೇಂದ್ರ ಸಹಯೋಗದಲ್ಲಿ ಭಾನುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕರಾದವರು ವೃತ್ತಿ ಘನತೆಯನ್ನು ಕಾಯ್ದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಮಾದರಿಯಾಗಿ ಜೀವನ ನಡೆಸಬೇಕು ಎಂದು ತಿಳಿಸಿದರು.
ಸಂಸ್ಥಾನ ಹಿರೇಮಠದ ಪೀಠಾಧಿಪತಿ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿದರು.
ನಿವೃತ್ತ ಉಪನ್ಯಾಸಕರಾದ ಶಿವಾನಂದ ಹಸರಗುಂಡಗಿ ಹಾಗೂ ಮುಖ್ಯಶಿಕ್ಷಕ ಎಸ್.ಜಿ.ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಸೂರ್ಯಕಾಂತ ನಾಕೇದಾರ, ನಿರ್ದೇಶಕ ಸದಾಶಿವ ಮೇತ್ರಿ, ಸಿದ್ದರಾಮಪ್ಪ ಮನಮಿ, ಪುರಸಭೆ ಉಪಾಧ್ಯಕ್ಷರಾದ ಕಮಲಾಬಾಯಿ ಗಾಡಿವಡ್ಡರ, ಪ್ರಾಚಾರ್ಯರಾದ ಶಶಿಕಲಾ ಖಜೂರಿ, ಪ್ರಮುಖರಾದ ಎಂ.ಎಸ್.ಗಣಾಚಾರಿ, ಮಲ್ಲಯ್ಯ ಕರಬಂಟನಾಳ, ಗಂಗಾಧರ ಕಾಂಬಳೆ, ಎಲ್.ಜಿ.ಸಿದ್ದು, ಸುರೇಶ ಗಣಿಯಾರ, ವಿಠ್ಠಲ ಮುಂಜಿ, ಶಿವರಾಜ ದೇಸಾಯಿ, ರಾಜಶೇಖರ ಕಲಶೆಟ್ಟಿ, ಎಂ.ವೀರಣಗೌಡ, ಗುರುಶಾಂತ ಹೂಗಾರ, ಗುಂಡಯ್ಯ ಸ್ವಾಮಿ, ಚಿದಾನಂದ ಹಿರೇಮಠ, ಶ್ರೀಮಂತ ವಾಡಿ, ಶ್ರೀಕಾಂತ ಪಾಟೀಲ, ಡಿ.ಎಂ.ನದಾಫ್ ಇದ್ದರು. ವಿದ್ಯಾರ್ಥಿ ಕೃಷ್ಣಾ ಸ್ವಾಗತಿಸಿ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.