ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ| ಜನರ ಹೊರೆ ಹೆಚ್ಚಿಸುವ ಬಜೆಟ್: ತೇಲ್ಕೂರ

Published : 9 ಜುಲೈ 2023, 7:34 IST
Last Updated : 9 ಜುಲೈ 2023, 7:34 IST
ಫಾಲೋ ಮಾಡಿ
Comments

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಜನರ ಹೊರೆ ಹೆಚ್ಚಿಸುವ ಬಜೆಟ್ ಇದಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬಜೆಟ್ ಮಾರಕವಾಗಿದೆ. ಅದರ ಜೊತೆಗೆ ಮೊದಲ ವರ್ಷವೇ ಸಾಲದ ಹೊರೆ ಹೆಚ್ಚಳ ಮಾಡಿಕೊಳ್ಳಲಾಗಿದೆ.

ಮುಂಬಾಗಿಲಿನಿಂದ ಕೆಲವು ಯೋಜನೆಗಳನ್ನು ಕೆಲವು ಜನರಿಗೆ ಕೊಟ್ಟು ಹಿಂಬಾಗಿಲಿನಿಂದ ಎಲ್ಲದಿಂದ ವಿವಿಧ ಮೂಲಗಳಿಂದ ವಸೂಲಿ ಮಾಡುವ ತಂತ್ರ ಬಜೆಟ್‌ನಲ್ಲಿ ಅಡಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ರಾಜಕುಮಾರ ಪಾಟೀಲ ತೇಲ್ಕೂರ ಟೀಕಿಸಿದ್ದಾರೆ.

‘ಕೆಕೆಆರ್‌ಡಿಬಿಗೆ ನಮ್ಮ ಸರ್ಕಾರವೂ ₹ 5 ಸಾವಿರ ಕೋಟಿ ನೀಡಿದೆ. ಅದರಲ್ಲಿ ಯಾವ ವಿಶೇಷವೂ ಇಲ್ಲ. ನಾವು ಅಧಿಕಾರದಲ್ಲಿದ್ದ ವೇಳೆ ಪ್ರತ್ಯೇಕ ಕೈಗಾರಿಕಾ ನೀತಿ, ತೊಗರಿ ಮಂಡಳಿಯ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದರು. ಇದೀಗ ತಮ್ಮದೇ ಸರ್ಕಾರವಿದೆ ಯಾಕೆ ಕೈಗಾರಿಗೆ ನೀತಿ ಬಗ್ಗೆ ಧ್ವನಿ ಎತ್ತಲಿಲ್ಲ. ತೊಗರಿ ಮಂಡಳಿಯ ಬಲವರ್ಧನೆಯ ಮಾತೇ ಇಲ್ಲ’ ಎಂದಿದ್ದಾರೆ.

ಸೇಡಂ ಕ್ಷೇತ್ರದ ಕಾಗಿಣಾ ಏತ ನೀರಾವರಿಯ ಬಗ್ಗೆ ಚಕಾರವೆತ್ತಿಲ್ಲ. ಜೊತೆಗೆ ಹಲವು ಕಾರ್ಯಕ್ರಗಳಿಗೆ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ಇದರ ವಿರುದ್ಧ ಪಕ್ಷದಿಂದ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT