ಕಲಬುರಗಿ: ‘ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯು(ಎಸ್ಐಆರ್) ದೇಶದ ವಾಸಿಗಳ ವಿರುದ್ಧವೇ ಆಡಳಿತರೂಢ ಸರ್ಕಾರ ಸಾರಿದ ಯುದ್ಧವಲ್ಲದೇ ಮತ್ತೇನೂ ಅಲ್ಲ’ ಎಂದು ಚಿಂತಕ ಶಿವಸುಂದರ ಪ್ರತಿಪಾದಿಸಿದರು.

ನಗರದ ಶರಣಬಸವ ವಿವಿ ಆವರಣದ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಶರಣ ಬಸವ ವಿದ್ಯಾವರ್ಧಕ ಸಂಘ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಭಾನುವಾರ ಆಯೋಜಿಸಿದ್ದ ‘ಎಸ್ಐಆರ್– ಒಂದು ಚಿಂತನೆ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಜಗತ್ತಿನಲ್ಲಿ ಇದೀಗ ಹಲವು ಯುದ್ಧಗಳು ನಡೆಯುತ್ತಿವೆ. ನಮ್ಮ ದೇಶದಲ್ಲೂ ಒಂದು ಯುದ್ಧ ನಡೆಯುತ್ತಿದೆ. ಅದುವೇ ಎಸ್ಐಆರ್; ಈ ದೇಶದ ಸರ್ಕಾರ ಈ ದೇಶದ ಬಲಹೀನ ಜನರ ವಿರುದ್ಧ ಸಾರಿದ ಯುದ್ಧವಾಗಿದೆ. ಈ ಯುದ್ಧದಲ್ಲಿ ರಕ್ತ ಸುರಿಯುತ್ತಿಲ್ಲ; ಆದರೆ, ಜನರ ಅಸ್ತಿತ್ವವೇ ನಾಶವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ದೇಶದ ಮತದಾರರ ಪಟ್ಟಿ ಶುದ್ಧೀಕರಿಸುವುದು ತಪ್ಪಲ್ಲ; ಅದು ಕಾಲಕಾಲಕ್ಕೆ ಪರಿಷ್ಕರಣೆ ಆಗಲೇಬೇಕು. ಈಗಾಗಲೇ ದೇಶದ 13 ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಮುಗಿದಿದೆ. ಬಿಹಾರದಲ್ಲಿ 65 ಲಕ್ಷ, ತಮಿಳುನಾಡಿನಲ್ಲಿ 74 ಲಕ್ಷ, ಪಶ್ಚಿಮ ಬಂಗಾಳದಲ್ಲಿ 75 ಲಕ್ಷದಷ್ಟು ಮಂದಿ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ 6.50 ಕೋಟಿಯಷ್ಟು ಮಂದಿಯನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅವರ ಮತಹಾಕುವ ಅಧಿಕಾರ ಕಸಿಯಲಾಗಿದೆ. ಸಮಸ್ಯೆ ಇಲ್ಲಿಗೆ ಮುಗಿಯಲ್ಲ; ಇಲ್ಲಿಂದಲೇ ಶುರುವಾಗುತ್ತದೆ’ ಎಂದರು.

‘2002ರಲ್ಲಿ ಆಗಿನ ಎನ್ಡಿಎ ಸರ್ಕಾರವು ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿದೆ. ದೇಶವಾಸಿಗಳೆಲ್ಲರ ಪಟ್ಟಿ ತಯಾರಿಸಿ ಅದನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಪಟ್ಟಿ ಸಿದ್ಧಪಡಿಸುತ್ತದೆ. ಬಳಿಕ ದೇಶದ ಜನಸಂಖ್ಯೆಗೆ ಒಂದು ಅಗ್ನಿಪರೀಕ್ಷೆ ಕೊಡಲಾಗುತ್ತದೆ. ದೇಶದ ಜನರೆಲ್ಲರೂ ಸರ್ಕಾರ ಹೇಳುವ 11 ದಾಖಲೆಗಳಲ್ಲಿ ಒಂದು ದಾಖಲೆ ಕೊಟ್ಟು ಈ ದೇಶದ ನಾಗರಿಕ ಎಂದು ಸಾಬೀತು ಮಾಡಿದರೆ, ಅವರನ್ನು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಪಟ್ಟಿಗೆ ಸೇರಿಸಲಾಗುತ್ತದೆ. ಅದರ ಆಧಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತದೆ. ಎನ್ಆರ್ಸಿ ಪಟ್ಟಿಯಲ್ಲಿದ್ದವರು ಮಾತ್ರವೇ ನಾಗರಿಕರು. ಅವರಿಗೆ ಮಾತ್ರವೇ ಮತದಾನದ ಹಕ್ಕು, ಸೌಲಭ್ಯಗಳು ಸಿಗಲಿವೆ. ಇದು 2002ರ ತಿದ್ದುಪಡಿಯ ಸಾರಾಂಶ’ ಎಂದು ವಿವರಿಸಿದರು.

‘2002ರ ನಂತರ ಈ ಷರತ್ತಿನನ್ವಯ ನಾವು ದೇಶದ ನಾಗರಿಕರು ಯಾರು ಎಂಬುದನ್ನು ಪರಿಶೀಲಿಸಿಲ್ಲ. ಆದ್ದರಿಂದ ನಾವು ಎಸ್ಐಆರ್ ಪಟ್ಟಿಯನ್ನು ಮತಪಟ್ಟಿ ಪರಿಷ್ಕರಣೆಗೆ ಮಾತ್ರವಲ್ಲದೇ, ಈ ದೇಶದ ನಾಗರಿಕತ್ವ ಪರಿಶೀಲನೆಗೆ ಬಳಸುವುದಾಗಿ ಸುಪ್ರೀಂ ಕೋರ್ಟ್ನಲ್ಲಿ ಭಾರತ ಚುನಾವಣಾ ಆಯೋಗವೇ ಹೇಳಿದೆ. ಹೀಗಾಗಿ ಎಸ್ಐಆರ್ ಬರೀ ಮತಪಟ್ಟಿ ಪರಿಷ್ಕರಣೆ ಅಲ್ಲ; ನಮ್ಮೆಲ್ಲರ ನಾಗರಿಕತ್ವ ಪರಿಶೀಲನೆಯೂ ಆಗಿದೆ. ಹೀಗಾಗಿ ಎಸ್ಐಆರ್ನಿಂದ ಹೊರಗುಳಿಯುವುದರ ಅರ್ಥ ಬಹುತೇಕ ದೇಶದ ಜನರ ನಾಗರಿಕತ್ವ ಕಿತ್ತುಕೊಳ್ಳುವುದೇ ಆಗಿದೆ’ ಎಂದು ಅಭಿಪ್ರಾಯಪಟ್ಟರು.

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಸ್ವಾಗತಿಸಿದರು. ಚಿಂತಕಿ ಮೀನಾಕ್ಷಿ ಬಾಳಿ ವಂದಿಸಿದರು. ಚಿಂತಕ ಪ್ರೊ.ಆರ್.ಕೆ.ಹುಡಗಿ, ಮುಖಂಡ ಸಾಜೀದ್ ಅಹ್ಮದ್, ಅಫ್ಜಲ್ ಮಹಮ್ಮದ್ ವೇದಿಕೆಯಲ್ಲಿದ್ದರು.

ಹಲವೆಡೆ ಮತಹಕ್ಕು ಹೊಂದುವುದು ಅಪರಾಧ. ಅಂತೆಯೇ ಅರ್ಹರು ಮತದಾರರ ಪಟ್ಟಿಯಿಂದ ಹೊರಗುಳಿಯುವಂತೆ ಮಾಡುವ ಹುನ್ನಾರವೂ ಸಲ್ಲದು. ಅದರ ವಿರುದ್ಧ ಜಾಗೃತಿ ಅಗತ್ಯ
ಬಸವರಾಜ ದೇಶಮುಖ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ

‘ಎಸ್ಐಆರ್ ಅಪಾಯಕಾರಿ; ಜಾಗೃತಿ ಅತ್ಯಗತ್ಯ’

‘ದೇಶವಾಸಿಗಳನ್ನು ಮತದಾರರ ಪಟ್ಟಿಯಲ್ಲಿ ಒಳಗೊಳ್ಳುವುದು ಹೇಗೆ ಎಂಬುದಕ್ಕಿಂತಲೂ ಪಟ್ಟಿಯಿಂದ ಹೊರಗೆ ಇಡುವುದು ಹೇಗೆ ಎಂಬುದನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಎಸ್ಐಆರ್ ಮಾನದಂಡಗಳನ್ನು ಚುನಾವಣಾ ಆಯೋಗ ರೂಪಿಸಿದೆ. ಇದು ಭಾರತದ ಒಟ್ಟು ಸಂರಚನೆ ಸಂವಿಧಾನದ ಗುಣಕ್ಕೆ ತದ್ವಿರುದ್ಧವಾಗಿ ಸಂಭವಿಸುತ್ತಿರುವ ಪ್ರಸಂಗ’ ಎಂದು ಬೆಂಗಳೂರಿನ ಚಿಂತಕ ಕೆ.ಪ್ರಕಾಶ್ ಎಚ್ಚರಿಸಿದರು. ‘ಹಿಂದೂಗಳು ಕ್ರೈಸ್ತರು ಮುಸ್ಲಿಮರು ಬೌದ್ಧರು ಸಿಖ್ರು ಎಲ್ಲರೂ ಒಳಗೊಂಡರಷ್ಟೇ ಅದು ಭಾರತೀಯತೆ ಎನಿಸುತ್ತದೆ. ಅಂಥ ಭಾರತೀಯತೆಗೆ ಎಸ್ಐಆರ್ ಅಪಾಯಕಾರಿ. ಇದನ್ನು ವಿರೋಧಿಸಬೇಕಿದೆ ಜಾಗೃತಿ ಮೂಡಿಸಬೇಕಿದೆ ಹೋರಾಟ ನಡೆಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.