ಕಲಬುರಗಿ: ನಗರದ ಹಲವೆಡೆ ಸ್ವಾತಂತ್ರ್ಯ ಹೋರಾಟಗಾರ, ದೇಶದ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ಪುಣ್ಯತಿಥಿಯನ್ನು ಭಾನುವಾರ ಆಚರಿಸಿ, ಗೌರವ ಸಲ್ಲಿಸಲಾಯಿತು

ಟೌನ್ಹಾಲ್ ಮುಂಭಾಗದ ಬಾಬೂಜಿ ಅವರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ವಿವಿಧ ಸಂಘ–ಸಂಸ್ಥೆಗಳು, ಶೈಕ್ಷಣಿಕ ಕೇಂದ್ರಗಳಲ್ಲಿಯೂ ಬಾಬು ಜಗಜೀವನರಾಂ ಅವರ ಭಾವಚಿತ್ರವನ್ನು ಇರಿಸಿ ನಮನ ಸಮರ್ಪಿಸಲಾಯಿತು.

ದೇಶದ ಆಹಾರ ಕೊರತೆಯನ್ನು ನೀಗಿಸುವಲ್ಲಿ ಬಾಬೂಜಿ ಅವರು ತೆಗೆದುಕೊಂಡ ಹಸಿರು ಕ್ರಾಂತಿ, ಕಾರ್ಮಿಕ ಸಚಿವರಾಗಿ ಮಾಡಿದ್ದ ಕೆಲಸಗಳು ಸೇರಿದಂತೆ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು.

ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಜಿ.ಪಂ ಸಿಇಒ ಭಂವರಸಿಂಗ್ ಮೀನಾ, ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಅವರು ಬಾಬೂಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಬಾಬು ಜಗಜೀವನರಾಂ ಜಿಲ್ಲಾ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರಂಜೀತಕುಮಾರ ಆರ್. ಮೂಲಿಮನಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಪ್ರಮುಖರಾದ ನಿಲಕಂಠರಾವ ಮೂಲಗೆ, ಪರಶುರಾಮ ನಾಟೇಕರ್, ರಾಜು ವಾಡೇಕರ್, ಶಿವಕುಮಾರ, ಪರಮೇಶ್ವರ ಖಾನಾಪೂರ, ಸಿದ್ದಾರ್ಥ ಕೋರವಾರ, ದತ್ತು ಭಾಸಗಿ, ಮಂಜುನಾಥ ನಾಲವಾರಕರ್ ಸೇರಿದಂತೆ ಹಲವರು ಗೌರವ ಸಲ್ಲಿಸಿದರು.

‘ಬಾಬು ಜಗಜೀವನರಾಂ ದೇಶದ ಪ್ರಧಾನಿಯಾಗಬೇಕಾಗಿತ್ತು’

ಕಲಬುರಗಿ: ‘ಡಾ. ಬಾಬು ಜಗಜೀವನರಾಂ ಎಲ್ಲಾ ರೀತಿಯ ಅರ್ಹತೆಗಳು ಇದ್ದರೂ ಅವರು ದಲಿತರು ಎಂಬ ಕಾರಣಕ್ಕಾಗಿ ಕೆಲವು ಸಮಾನತೆ ಬಯಸದಿರುವ ಮನಸ್ಸುಗಳು ಅವರನ್ನು ಪ್ರಧಾನಿಯಾಗಲು ಬಿಡಲಿಲ್ಲ’ ಎಂದು ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ ತಿಳಿಸಿದರು.

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 39ನೇ ಪುಣ್ಯಸ್ಮರಣೆಯ ಪ್ರಯುಕ್ತವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ‘ಜಗಜೀವನರಾಂ ಅವರು ರೈಲ್ವೆ ಇಲಾಖೆಯಲ್ಲಿನ ಬಡ್ತಿ ಮೀಸಲಾತಿ ನಿರ್ಣಯ ಹಾಗೂ ಅದನ್ನು ಕಾರ್ಯರೂಪಕ್ಕೆ ತಂದರು. ಇದು ಸುಪ್ರೀಂಕೋರ್ಟ್ ಮೆಟ್ಟಿಲು ಕೂಡಾ ಹತ್ತಿತ್ತು. ಇದರ ಸಂಬಂಧವಾಗಿ ಜಗಜೀವನರಾಂ ಅವರು ತಾವೇ ಸುಪ್ರೀಂಕೋರ್ಟಿನ ಕಟಕಟೆಯಲ್ಲಿ ನಿಂತು ಪರಿಶಿಷ್ಟರಿಗೆ ಬಡ್ತಿ ಮೀಸಲಾತಿಯ ಬಗ್ಗೆ ವಿವರಣೆ ನೀಡಿ ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಟ್ಟರು. ವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ಬಡ್ತಿ ಮೀಸಲಾತಿಗೆ ತನ್ನ ಒಪ್ಪಿಗೆಯನ್ನು ಸೂಚಿಸಿತು’ ಎಂದರು.

ಶೋಷಿತ ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಲಕ್ಕಪ್ಪ ಎಸ್.ಜವಳಿ, ಮುಖಂಡರಾದ ಪರಶುರಾಮ ನಾಟಿಕರ, ಬಾಬೂಜಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರಂಜಿತ್ ಮೂಲಿಮನಿ, ಶಿವಕುಮಾರ ಆಜಾದಪೂರ, ಪ್ರಕಾಶ್ ಮಾಳಗೆ, ರಮೇಶ ಹಣಕುಣಿ, ದಿಗಂಬರ ತ್ರಿಮೂರ್ತಿ, ಶಾಂತಕುಮಾರ, ಶರಣು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.