ದೇವಲ ಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನದ ಹಿಂದಿರುವ ಭೀಮಾ ನದಿಯ ಅಷ್ಟ ತೀರ್ಥಗಳಲ್ಲಿ ಒಂದಾಗಿರುವ ಪಾಪನಾಶ ತೀರ್ಥದಲ್ಲಿ ಸ್ನಾನ ಮಾಡಲು ಇವರು ಬಂದಿದ್ದರು. ಸಕ್ಷಮ ಕೋಳಿ ಸ್ನಾನ ಮಾಡುವಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಅವರಿಗೆ ಈಜು ಬರುತ್ತಿರಲಿಲ್ಲ. ಈಜು ಗೊತ್ತಿದ್ದ ಪ್ರಕಾಶ್ ವಾಘ್ಮೋರೆ ಅವರು ಸಕ್ಷಮ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಸಕ್ಷಮ ಅವರು ಪ್ರಕಾಶ ಅವರ ಕೊರಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಇಬ್ಬರೂ ನೀರು ಪಾಲಾಗಿದ್ದಾರೆ ಎಂದು ಪ್ರಕಾಶ ಅವರ ದೊಡ್ಡಪ್ಪ ರಾಜು ವಾಘ್ಮೋರೆ ತಿಳಿಸಿದ್ದಾರೆ.