ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ: ಇಬ್ಬರು ಆರೋಪಿಗಳ ಬಂಧನ

Last Updated 9 ಮೇ 2021, 4:33 IST
ಅಕ್ಷರ ಗಾತ್ರ

ಕಲಬುರ್ಗಿ: ಇತ್ತೀಚೆಗೆ ಆಳಂದ ರಸ್ತೆಯ ರಾಜ್ಯ ಮಹಿಳಾ ನಿಲಯದ ಆವರಣದಲ್ಲಿ ನಡೆದ ಶೀತಲಕುಮಾರ್ ಪಾಟೀಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಖಾದ್ರಿ ಚೌಕ್ ಸಿಲ್ವರ್ ಅಪಾರ್ಟ್‌ಮೆಂಟ್‌ ನಿವಾಸಿಗಳಾದ ಶೇಖ್ ಮೆಹಬೂಬ್ ಶೇಖ್ ಅಬ್ದುಲ್ ಘನಿ (35) ಮತ್ತು ಆತನ ತಮ್ಮ ಶೇಖ್ ಅಮ್ಜದ್ (32) ಬಂಧಿತರು. ಶೀತಲಕುಮಾರ್ ಆರೋಪಿಗಳ ಸಹೋದರಿ ಆಫ್ರೀನ್ ಜೊತೆ ಆಕೆಯ ಮಕ್ಕಳನ್ನು ಕರೆತರಲು ಸಹಾಯ ಮಾಡಿದ್ದರಿಂದ ಹಾಗೂ ಆಸ್ತಿ ವಿವಾದದಿಂದ ಹರಿತವಾದ ಕುಡುಗೋಲಿನಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಆರ್‌.ಜಿ. ನಗರ ಠಾಣೆ ಪ್ರಭಾರ ಪೊಲೀಸ್‌ ಇನ್‌ಸ್ಪೆಕ್ಟರ್ ಪಂಡಿತ ಸಗರ ತಿಳಿಸಿದ್ದಾರೆ.

ಆರೋಪಿಗಳ ತಾಯಿ ಕುಲಸುಂಬಿ, ವೀರೇಶ ಹಾಗೂ ಹಸೀನಾ ಎಂಬುವರು ಪರಾರಿಯಾಗಿದ್ದು, ಅವರ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸ್‌ ಕಮಿಷನರ್‌ ಎನ್. ಸತೀಶಕುಮಾರ್, ಎ ಉಪವಿಭಾಗದ ಎಸಿಪಿ ಅಂಶುಕುಮಾರ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಪಂಡಿತ ಸಗರ, ಹೆಡ್‌ ಕಾನ್‌ಸ್ಟೆಬಲ್ ಸಿಕ್ರೇಶ್ವರ, ರಮೇಶ ಚವ್ಹಾಣ, ಕಿಶೋರ ಜಾಧವ, ಮುಜಾಹಿದ್ ಕೊತ್ವಾಲ್ ಕಾರ್ಯಾಚರಣೆ ನಡೆಸಿದರು.

ಮಾಳಿಗೆ ಮೇಲೆ ಮಲಗಿದ್ದಾಗ ಮನೆ ಕಳ್ಳತನ
ಕಲಬುರ್ಗಿ:
ಇಲ್ಲಿನ ಕೋಟನೂರ ಮಠದ ಹಿಂಭಾಗದ ಯಲ್ಲಾಲಿಂಗ ಕಾಲೊನಿಯಲ್ಲಿ ಬೇಸಿಗೆ ಕಾರಣಕ್ಕಾಗಿ ಮಾಳಿಗೆ ಮೇಲೆ ಮಲಗಿರುವದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿ 40 ಗ್ರಾಂ ಚಿನ್ನಾಭರಣ ಮತ್ತು ₹ 10 ಸಾವಿರ ನಗದು ಕಳವು ಮಾಡಿದ್ದಾರೆ.

ಈರಣ್ಣ ಬಿರಾದಾರ ಎಂಬುವರು ಮನೆಯಲ್ಲಿ ಕಳ್ಳತನವಾಗಿದೆ. ಬೇಸಿಗೆ ಧಗೆಯಿಂದ ಪಾರಾಗಲು ಈರಣ್ಣ, ಪತ್ನಿ ಸಿದ್ದಮ್ಮ ಮತ್ತು ಇಬ್ಬರು ಮಕ್ಕಳು ಮಾಳಿಗೆ ಮೇಲೆ ಮಲಗಿದ್ದರು. ಇದೇ ಸಮಯ ಸಾಧಿಸಿ ಮನೆಗೆ ನುಗ್ಗಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT