ಶನಿವಾರ, ಅಕ್ಟೋಬರ್ 16, 2021
22 °C

ಚಿತ್ತಾಪುರ: ಭಾರಿ ಮಳೆ, ಸಿಡಿಲು ಬಡಿದು ಇಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ದಿಗ್ಗಾಂವ ಗ್ರಾಮದಲ್ಲಿ ಸಿಡಿಲು ಅಪ್ಪಳಿಸಿ ಇಬ್ಬರು ಮೃತಪಟ್ಟಿದ್ದಾರೆ.

ಬಸವರಾಜ ಶರಣಪ್ಪ ಶಹಾಬಾದಿ (56) ಹಾಗೂ ಅರ್ಜುನ ಸಾಬಣ್ಣ ಕೊಳ್ಳೂರ (52) ಎಂಬುವವರು ಸಿಡಿಲು ಅಪ್ಪಳಿಸಿ ಸಾವನ್ನಪ್ಪಿದ್ದಾರೆ.

ಬಸವರಾಜ ಅವರ ಮೃಹದೇಹ ಮಂಗಳವಾರ ರಾತ್ರಿ ಪತ್ತೆಯಾಗಿದೆ. ಅರ್ಜುನ ಮೃತದೇಹ ಬುಧವಾರ ಪತ್ತೆಯಾಗಿದೆ. ಶವ ಪರೀಕ್ಷೆ ನಡೆಸಿ ಮೃತದೇಹ ಕುಟುಂಬದವರಿಗೆ ನೀಡಲಾಗಿದೆ.

ಕೂಲಿ ಕೆಲಸಕ್ಕೆಂದು ಹೋಗಿದ್ದಾಗ ಅಡವಿಯಲ್ಲಿ ಮಳೆ ಬರುವಾಗ ಈ ಘಟನೆ ಜರುಗಿದೆ. ಬುಧವಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವು ಕಚ್ಚಿ ಸಾವು
ಚಿತ್ತಾಪುರ:
ತಾಲ್ಲೂಕಿನ ಭಂಕಲಗಾ ಗ್ರಾಮದಲ್ಲಿ ಮಂಗಳವಾರ ಶರಣಪ್ಪ ಮಲ್ಲಪ್ಪ (55) ಎಂಬುವರಿಗೆ ಹಾವು ಕಚ್ಚಿ ಮೃತಪಟ್ಟಿದ್ದಾರೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು