ಶನಿವಾರ, ಸೆಪ್ಟೆಂಬರ್ 26, 2020
25 °C

ಐಪಿಹೊಸಳ್ಳಿ-ಸುಲೇಪೇಟದಲ್ಲಿ ಕಂಪನ, ವಿಚಿತ್ರ ಸದ್ದಿನೊಂದಿಗೆ ಉರುಳಿತು ಮನೆ ಗೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರ್ಗಿ): ತಾಲ್ಲೂಕಿನ ಐಪಿಹೊಸಳ್ಳಿ ಮತ್ತು ಸುಲೇಪೇಟದಲ್ಲಿ ಗುರುವಾರ ಭೂಮಿ ಅದುರಿದ ಅನುಭವವಾಗಿದೆ.

ಐಪಿಹೊಸಳ್ಳಿಯಲ್ಲಿ ಬೆಳಗಿನ 2 ಗಂಟೆಗೆ ಮತ್ತು 6.30ಕ್ಕೆ ಭೂಮಿ ಅದುರಿದಂತಾಗಿ ಸ್ಫೋಟಕ ರೀತಿಯ ಸದ್ದು ಕೇಳಿಸಿದೆ ಎಂದು ಮುಖಂಡ ನವಾಜ್ ಪಟೇಲ ತಿಳಿಸಿದ್ದಾರೆ. ಭೂಮಿ ಅದುರಿದ್ದರಿಂದ ಮನೆಯ ಗೋಡೆಯೊಂದು ಉರುಳಿದೆ ಎಂದು ಅವರು ತಿಳಿಸಿದ್ದಾರೆ.

ತಾಲ್ಲೂಕಿನ ಸುಲೇಪೇಟದಲ್ಲಿ ಬೆಳಗಿನ ಜಾವ 6.50ಕ್ಕೆ ಭೂಮಿ ಅದುರಿದ ಅನುಭವವಾಗಿದೆ. ಬೆಳಿಗ್ಗೆ‌ ಎದ್ದು ಮನೆಯಲ್ಲಿನ ದಿವಾನದ ಮೇಲೆ ಕುಳಿತಾಗ ಭೂಮಿ ಅದುರಿದ ಅನುಭವವಾಯಿತು ನಮ್ಮ‌ಮನೆಯವೆಲ್ಲಾ ಸದಸ್ಯರು ಹಾಗೂ ನೆರೆಹೊರೆಯವರು ಇದು ಖಾತ್ರಿಪಡಿಸಿದರು ಎಂದು ಸುಲೇಪೇಟದ ಉದ್ಯಮಿ ಮಹಾರುದ್ರಪ್ಪ ದೇಸಾಯಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು