ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಭಾರತ್ ರೈಲು ಟಿಕೆಟ್‌ ದರ ಪ್ರಕಟ: ಕಲಬುರಗಿಯಿಂದ ಬೆಂಗಳೂರಿಗೆ ಎಷ್ಟು?

Published 14 ಮಾರ್ಚ್ 2024, 10:35 IST
Last Updated 14 ಮಾರ್ಚ್ 2024, 10:35 IST
ಅಕ್ಷರ ಗಾತ್ರ

ಕಲಬುರಗಿ: ಬೆಂಗಳೂರಿನ ಬೈಯಪ್ಪನಹಳ್ಳಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಕಲಬುರಗಿ ನಡುವೆ ಸಂಚರಿಸುವ ಎಸ್‌ಎಂವಿಬಿ – ಕೆಎಲ್‌ಬಿಜಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್ ದರ ಪ್ರಕಟವಾಗಿದೆ.

ಉಪಹಾರ ಸೇರಿ ಬೈಯಪ್ಪನಹಳ್ಳಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಕಲಬುರಗಿವರೆಗಿನ ಚೇರ್ ಕಾರ್‌‌ (ಸಿಸಿ) ಪ್ರಯಾಣಕ್ಕೆ ₹ 1,465 ನಿಗದಿ ಮಾಡಲಾಗಿದೆ. ಎಕ್ಸಿಕ್ಯೂಟಿವ್ ಚೇರ್ ಕಾರ್‌ (ಇಸಿ) ಪ್ರಯಾಣಕ್ಕೆ ₹369 ಕ್ಯಾಟರಿಂಗ್, ಇತರೆ ಶುಲ್ಕ ಸೇರಿ ಒಟ್ಟು ₹ 2,700 ನಿಗದಿಪಡಿಸಲಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಯಲಹಂಕವರೆಗಿನ 18 ಕಿ.ಮೀ. ಚೇರ್ ಕಾರ್‌‌ (ಸಿಸಿ) ಪ್ರಯಣಕ್ಕೆ ₹705 ನಿಗದಿ ಮಾಡಲಾಗಿದೆ.

ಕಲಬುರಗಿಯಿಂದ ಬೆಂಗಳೂರುವರೆಗಿನ ಎಕ್ಸಿಕ್ಯೂಟಿವ್ ಚೇರ್ ಕಾರ್‌ (ಇಸಿ) ಪ್ರಯಾಣಕ್ಕೆ ₹434 ಕ್ಯಾಟರಿಂಗ್, ಇತರೆ ಶುಲ್ಕಗಳು ಸೇರಿ ಒಟ್ಟು ₹ 2,765 ನಿಗದಿಪಡಿಸಲಾಗಿದೆ. ಚೇರ್ ಕಾರ್‌ಗೆ ₹ 1,540 ನಿಗದಿಪಡಿಸಲಾಗಿದೆ. ಆದರೆ, ವಾಡಿ ಮತ್ತು ಧರ್ಮಾವರಂ ನಿಲ್ದಾಣಗಳ ಟಿಕೆಟ್ ದರವು ಐಆರ್‌ಸಿಟಿಸಿಯಲ್ಲಿ ಪ್ರದರ್ಶನವಾಗುತ್ತಿಲ್ಲ.

ಕಲಬುರಗಿಯಿಂದ ಬೆಳಿಗ್ಗೆ 5 .15ಕ್ಕೆ ಹೊರಡುವ ರೈಲು ರಾಯಚೂರಿಗೆ 6.53, ಮಂತ್ರಾಲಯಂ ರೋಡ್ 7.08, ಗುಂತಕಲ್ 8.25, ಅನಂತಪುರ 9.28, ಯಲಹಂಕ 12.45, ಬೈಯಪ್ಪನಹಳ್ಳಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ 2 ಗಂಟೆಗೆ ತಲುಪಲಿದೆ.

ಬೈಯ್ಯಪ್ಪನಹಳ್ಳಿಯಿಂದ ಮಧ್ಯಾಹ್ನ 2.40ಕ್ಕೆ ಹೊರಟು ಯಲಹಂಕಕ್ಕೆ 3.08, ಅನಂತಪುರ 5.58, ಗುಂತಕಲ್ 7, ಮಂತ್ರಾಲಯಂ ರೋಡ್ ರಾತ್ರಿ 8.15, ರಾಯಚೂರು 8.45 ಮತ್ತು ಕಲಬುರಗಿಗೆ ರಾತ್ರಿ 11.30ಕ್ಕೆ ತಲುಪಲಿದೆ.

ಕಲಬುರಗಿಯಿಂದ ಟಿಕೆಟ್ ದರ ಪಟ್ಟಿ (₹ಗಳಲ್ಲಿ)

ನಿಲ್ದಾಣಗಳು : ಚೇರ್ ಕಾರ್‌‌ : ಎಕ್ಸಿಕ್ಯೂಟಿವ್ ಚೇರ್ ಕಾರ್‌

ರಾಯಚೂರಿಗೆ : 520 : 1,005

ಮಂತ್ರಾಲಯಂ ರೋಡ್ : 570 : 1,105

ಗುಂತಕಲ್ : 860 : 1,590

ಅನಂತಪುರ : 970 : 1,805

ಯಲಹಂಕ : 1,510 : 2,710

ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ : 1,540 : 2,765

ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಟಿಕೆಟ್ ದರ ಪಟ್ಟಿ (₹ಗಳಲ್ಲಿ)

ನಿಲ್ದಾಣಗಳು : ಚೇರ್ ಕಾರ್‌‌ : ಎಕ್ಸಿಕ್ಯೂಟಿವ್ ಚೇರ್ ಕಾರ್‌

ಯಲಹಂಕ : 380 : 705

ಅನಂತಪುರ : 690 : 1,340

ಗುಂತಕಲ್ : 810 : 1,570

ಮಂತ್ರಾಲಯಂ ರೋಡ್ : 1,175 : 2,110

ರಾಯಚೂರು : 1,225 : 2,205

ಕಲಬುರಗಿ : 1,465 : 2,700

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT