ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ವೀರಭದ್ರೇಶ್ವರ ರಥೋತ್ಸವ

Last Updated 5 ಮೇ 2022, 2:55 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ವೀರಭದ್ರೇಶ್ವರ ರಥೋತ್ಸವ ಬುಧವಾರ ಸಂಜೆ 6 ಗಂಟೆಗೆ ರಾಷ್ಟ್ರಿಯ ಹೆದ್ದಾರಿ 167ರಲ್ಲಿ ವೈಭವದಿಂದ ಜರುಗಿತು.

ತೇರು ಕದಲುತ್ತಿದ್ದಂತೆ ಭಕ್ತರು ಹೂವು, ಹಣ್ಣು ಎಸೆದು ನಮಸ್ಕರಿಸಿದರು.

ಜಾತ್ರೆ ಪ್ರಯುಕ್ತ ಮೇ1 ಮತ್ತು 2ರಂದು ಪಲ್ಲಕ್ಕಿ ಮೆರವಣಿಗೆ, ಮೂರನೇ ದಿನದಂದು ಹುಗ್ಗಿಹಬ್ಬ, 4ನೇ ದಿನ ಬೆಳಿಗ್ಗೆ ಉಚ್ಚಾಯಿ ಮೆರವಣಿಗೆ ಮತ್ತು ಕೆಂಡ ಹಾಯುವುದು ನಡೆಸುವ ಮೂಲಕ ಭಕ್ತರು ಹರಕೆ ತೀರಿಸಿದರು.

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ದೇವಾಲಯದಿಂದ ಬಸವಣ್ಣ ಕಟ್ಟೆವರೆಗೆ ಹೂವಿನಿಂದ ಅಲಂಕರಿಸಿದ್ದ ತೇರು ಎಳೆಯಲಾಯಿತು.

ಜಾತ್ರಾ ಮಹೋತ್ಸವದಲ್ಲಿ ಶಾಸಕ ಡಾ. ಅವಿನಾಶ ಜಾಧವ, ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್, ಗ್ರಾ.ಪಂ. ಅಧ್ಯಕ್ಷೆ ಗೋಪಾಲ ಭೋಯಿ, ಚಂದ್ರಶೇಖರ ಜೊನ್ನಲ್, ನಾಗರಾಜ ಶೇವತಕರ್, ವಿಶ್ವನಾಥ ಈದಲಾಯಿ, ಜಗನ್ನಾಥ ಈದಲಾಯಿ, ಬಸವರಾಜ ಕಾಂಟ್ಲಿ, ಶರಣಪ್ಪ ಒರಡೆ, ಶಾಂತಕುಮಾರ ಪಲ್ಲೇದ್, ಮಹಿಪಾಲರೆಡ್ಡಿ ಪಾಟೀಲ, ವೀರಾರೆಡ್ಡಿ ಪಾಟೀಲ, ಸುದರ್ಶನರೆಡ್ಡಿ ಪಾಟೀಲ, ಭೀಮಶೆಟ್ಟಿ ಮುಕ್ಕಾ, ಜಗದೀಶ ಸಜ್ಜನ್, ವಿಜಯಕುಮಾರ ಪರೀಟ್, ರಮೇಶ ಜೊನ್ನಲ್, ರಾಘವೇಂದ್ರ ಗುತ್ತೇದಾರ, ಬ್ರಹ್ಮಯ್ಯ ಸುನಾರ್ ಇದ್ದರು.

ಗುರುವಾರ ಬೆಳಿಗ್ಗೆ 9 ಗಂಟೆಗೆ ಜಂಗಿ ಪೈಲ್ವಾನರ ಕುಸ್ತಿ ಪಂದ್ಯಾವಳಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT