ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ: ಮತದಾರರಿಗೆ ನೀರು, ನೆರಳಿನ ವ್ಯವಸ್ಥೆ

Published 7 ಮೇ 2024, 16:18 IST
Last Updated 7 ಮೇ 2024, 16:18 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ 250 ಮತಗಟ್ಟೆಗಳಲ್ಲಿ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆಯಿತು ಎಂದು ಚುನಾವಣೆಯ ಸಹಾಯಕ ನಿರ್ದೇಶಕ ಜಾವಿದ್ ಕೆ.ಕರಣಗಿ, ತಹಶೀಲ್ದಾರ್‌ ಸಂಜುಕುಮಾರ ದಾಸರ್ ತಿಳಿಸಿದ್ದಾರೆ.

ಎಲ್ಲ ಮತಗಟ್ಟೆಗಳಲ್ಲೂ ನೆರಳು, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ಸರದಿ  ಮಾಡಲಾಗಿತ್ತು. ಮಧ್ಯಾಹ್ನ 2 ಗಂಟೆವರೆಗೂ ಬಿರುಸಿನಿಂದ ಮತದಾನ ನಡೆಯುತು. ಬಿಸಿಲಿನ ಕಾರಣ ಸಂಜೆ 4ಗಂಟೆ ಬಳಿಕ ಮತಗಟ್ಟೆಗೆ ಆಗಮಿಸಿದರು.

ಮತಗಟ್ಟೆ ಒಳಗಡೆ ಮೊಬೈಲ್ ನಿಷೇಧ ಮಾಡಲಾಗಿತ್ತು.

ಪಟ್ಟಣದ ಸರ್ಕಾರಿ ಎಂಜಿಪಿ ಶಾಲೆ ಮತಗಟ್ಟೆ ಸಂಖ್ಯೆ 161, ಸರ್ಕಾರಿ ಉರ್ದು ಎಚ್‌ಪಿಎಸ್ ಮತಗಟ್ಟೆ ಸಂಖ್ಯೆ 164, ತೋಟಗಾರಿಕೆ ಕಛೇರಿ ಮತಗಟ್ಟೆ ಸಂಖ್ಯೆ 170 ಹಾಗೂ ನದಿಸಿನ್ನೂರು ಸರ್ಕಾರಿ ಪ್ರೌಢಶಾಲೆ ಮತಗಟ್ಟೆ ಸಂಖ್ಯೆ 170, ಫಿರೋಜಬಾದ್ ಗ್ರಾಮ ಪಂಚಾಯಿತಿ ಮತಗಟ್ಟೆ ಸಂಖ್ಯೆ 244 ರಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಮತ್ತು  ಮಹಿಳಾ ಮತದಾರರನ್ನು ಆಕರ್ಷಿಸಲು ಸಖಿ ಪಿಂಕ್ ಬೂತ್ ಸ್ಥಾಪಿಸಲಾಗಿತ್ತು. ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿ ಎಲ್ಲರೂ ಮಹಿಳೆಯರೇ ಆಗಿದ್ದರು.

ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮ ಪಂಚಾಯತಿ ಮತಗಟ್ಟೆಯಲ್ಲಿ 86 ವರ್ಷದ ವೃದ್ಧೆ ಮತದಾನ ಮಾಡಿದರು
ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮ ಪಂಚಾಯತಿ ಮತಗಟ್ಟೆಯಲ್ಲಿ 86 ವರ್ಷದ ವೃದ್ಧೆ ಮತದಾನ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT