ಮಂಗಳವಾರ, ಜೂನ್ 15, 2021
27 °C
ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ 30 ಕಪ್ಪು ಶಿಲೀಂದ್ರ ಸೋಂಕು ಶಂಕಿತರು

ಸಕಾಲಕ್ಕೆ ಸಿಗದ ಚಿಕಿತ್ಸೆ: ಕಲಬುರ್ಗಿಯಲ್ಲಿ ಕಪ್ಪು ಶಿಲೀಂಧ್ರಕ್ಕೆ ವೃದ್ಧೆ ಬಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಜೇವರ್ಗಿ ತಾಲ್ಲೂಕಿನ ಕಾಸಬೋಸಗಾ ಗ್ರಾಮದ ವೃದ್ಧೆ ಪ‍್ರಮೀಳಾ (68) ಶುಕ್ರವಾರ ಮೃತಪಟ್ಟರು.

ಕೊರೊನಾದಿಂದ ಈಚೆಗೆ ಗುಣಮುಖರಾಗಿದ್ದ ಅವರು, ವಿವಿಧ ಅಂಗಾಂಗ ವೈಫಲ್ಯದಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಬ್ಲ್ಯಾಕ್‌ ಫಂಗಸ್‌ ತಗುಲಿದ ಶಂಕೆ ವ್ಯಕ್ತವಾಗಿದೆ.

‘ಬ್ಲ್ಯಾಕ್‌ ಫಂಗಸ್‌ ತಗುಲಿದ್ದನ್ನು ಜಿಮ್ಸ್‌ನಲ್ಲಿ ಬೇಗ ಖಚಿತಪಡಿಸಲಿಲ್ಲ. ವೈದ್ಯರು ವರದಿಗಾಗಿ ಕಾದು ಕುಳಿತರು. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಈ ಸಾವು ಸಂಭವಿಸಿದೆ’ ಎಂದು ಪ್ರಮೀಳಾ ಅವರ ಕುಟುಂಬದವರು ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್‌ ಶಶಿ, ‘ಜಿಲ್ಲೆಯಲ್ಲಿ ಈವರೆಗೆ 30 ಬ್ಲ್ಯಾಕ್‌ ಫಂಗಸ್‌ ಸೋಂಕಿತರು ಇರುವ ಶಂಕೆ ಇದೆ. ಎಲ್ಲರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ, ಯಾರ ವರದಿಯ ಫಲಿತಾಂಶವೂ ಬಂದಿಲ್ಲ. ಅಲ್ಲದೇ ಈ ಸೋಂಕಿತರಿಗೆ ನೀಡಬೇಕಾದ ಇಂಜಕ್ಷನ್‌ ಕೊರತೆ ಕೂಡ ಉಂಟಾಗಿದೆ’ ಎಂದಿದ್ದಾರೆ.

ಕೋವಿಡ್‌ನಿಂದ ನಾಲ್ವರು ಸಾವು 

ಕಲಬುರ್ಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಶುಕ್ರವಾರದ ಬುಲೆಟಿನ್‌ ತಿಳಿಸಿದೆ. ಇದರೊಂದಿಗೆ ಒಟ್ಟು ಮೃತಪಟ್ಟವರ ಸಂಖ್ಯೆ 698ಕ್ಕೆ ತಲುಪಿದೆ. ನಗರದ ರೇವಣಸಿದ್ಧೇಶ್ವರ ಕಾಲೊನಿಯ 67 ವರ್ಷದ ಮಹಿಳೆ, ಜೇವರ್ಗಿ ತಾಲ್ಲೂಕಿನ ಕೂಡಲಗಿಯ 34 ವರ್ಷದ ಮಹಿಳೆ, ಅಕ್ಕಮಹಾದೇವಿ ಕಾಲೊನಿಯ 78 ವರ್ಷದ ಪುರುಷ ಹಾಗೂ ಮಹಾದೇವ ನಗರದ 41 ವರ್ಷದ ಪುರುಷ ಮೃತಪಟ್ಟವರು.

‌352 ಪಾಸಿಟಿವ್‌

ಜಿಲ್ಲೆಯಲ್ಲಿ ಮತ್ತೆ 352 ಮಂದಿಗೆ ಕೊರೊನಾ ಸೋಂಕು ಅಂಟಿಕೊಂಡಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 58,427ಕ್ಕೆ ಏರಿದೆ. ಇನ್ನೂ 6059 ಸಕ್ರಿಯ ಪ್ರಕರಣಗಳಿವೆ. ಅಲ್ಲದೇ, 979 ಮಂದಿ ಶುಕ್ರವಾರ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 51,670ಕ್ಕೆ ತಲುಪಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು