ಮೂರಕ್ಕೇರಿದ ಸಾವಿನ ಸಂಖ್ಯೆ: ಪ್ರಸಕ್ತ ವರ್ಷ ಪ್ರವಾಹದಲ್ಲಿ ಸಿಲುಕಿ ತಾಲ್ಲೂಕಿನ ಪೊತಂಗಲ ಬಳಿ ಕಾಗಿಣಾ ನದಿಯಲ್ಲಿ ಸೇಡಂ ತಾಲ್ಲೂಕಿನ ಯಡಗಾದ ನಿವಾಸಿಯೊಬ್ಬರು ನದಿ ದಾಟುವಾಗ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಬಳಿಕ ಚಿಮ್ಮನಚೋಡದಲ್ಲಿ ವ್ಯಕ್ತಿಯೊಬ್ಬರು ನದಿಯ ಪ್ರವಾಹದ ಹಿನ್ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದರೆ, ಬುಧವಾರ ಕರ್ಚಖೇಡದಲ್ಲಿ ಗೃಹಿಣಿ ನೀರು ಪಾಲಾಗಿದ್ದಾರೆ. ಒಂದು ವಾರದ ಹಿಂದೆ ಇರಗಪಳ್ಳಿಯ ಜೋಡೆತ್ತುಗಳು ಹಾಗೂ ಬಂಡಿ ನೀರು ಪಾಲಾಗಿದ್ದವು.