ಭಾನುವಾರ, ಜೂನ್ 26, 2022
22 °C

‘ಮಹಿಳೆಗೆ ಶಿಕ್ಷಣ ರಕ್ಷಾ ಕವಚ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ‘ಮಹಿಳೆಯರಿಗೆ ಶಿಕ್ಷಣ ರಕ್ಷಾಕವಚ ಇದ್ದಂತೆ’ ಎಂದು ಕವಯಿತ್ರಿ ಜ್ಯೋತಿ ಡಾ. ಧನರಾಜ ಬೊಮ್ಮಾ ತಿಳಿಸಿದರು.

ಅವರು ಇಲ್ಲಿನ ಚಂದಾಪುರದ ಹಾರಕೂಡ ಚನ್ನಬಸವೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿನಿಯರು ಸಾಧಕ ಮಹಿಳೆಯರ ಜೀವನ ಸಾಧನೆಗಳಿಂದ ಪ್ರೇರಿತರಾಗಬೇಕು. ಜತೆಗೆ ಸತತ ಪರಿಶ್ರಮದಿಂದ ಸಾಧನೆ ಮಾಡಲು ಮುಂದಾಗಬೇಕು’ ಎಂದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಡಳಿತಾಧಿಕಾರಿ ಗೀತಾರಾಣಿ ಐನೋಳ್ಳಿ ಅಧ್ಯಕ್ಷತೆವಹಿಸಿದ್ದರು. ಪಿಯು ಕಾಲೇಜಿನ ಪ್ರಾಂಶುಪಾಲ ಚನ್ನವೀರ ಕಲ್ಲೂರು, ಸ್ವಾತಿ, ಕೃಷ್ಣಾ ಕಟ್ಟಿ, ಸುರೇಶ ಬಂಟನಳ್ಳಿ, ಮಧುಕರರಾವ್, ಡಾ. ಹಣಮಂತ, ರಿಯಾಜುದ್ದಿನ್, ಕರಬಸಯ್ಯ ಮಠಪತಿ ಇದ್ದರು. ಉಪನ್ಯಾಸಕಿ ಅರುಣಾ ಶಿವಪ್ರಸಾದ ಪ್ರಾಸ್ತಾವಿಕ ಮಾತನಾಡಿದರು. ವಿನುತಾ ಸ್ವಾಗತಿಸಿದರು. ರಕ್ಷಿತಾ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು