ಚಿಂಚೋಳಿ: ಹಾರಕೂಡ ಚನ್ನಬಸವ ಶಿವಯೋಗಿಗಳ 75ನೇ ಜಾತ್ರೆಯ ಅಮೃತ ಮಹೋತ್ಸವದ ಅಂಗವಾಗಿ ತೇರ್ ಮೈದಾನದಲ್ಲಿ ನಡೆದ ಜಂಗಿ ಪೈಲ್ವಾನರ ಕುಸ್ತಿಯ ಅಂತಿಮ ಪಂದ್ಯಾಟ ಡ್ರಾನಲ್ಲಿ ಅಂತ್ಯಗೊಂಡಿತು.

ಬೆಳಿಗ್ಗೆ 9ಗಂಟೆಯಿಂದ ಆರಂಭವಾದ ಕುಸ್ತಿ ಪಂದ್ಯಾಟಗಳು ಮಧ್ಯಾಹ್ನ 12.30ರವರೆಗೂ ನಡೆದವು. ಕೊನೆಗೆ 5 ತೊಲ ಬೆಳ್ಳಿ ಕಡಗದ ಅಂತಿಮ ಕುಸ್ತಿ ಪಂದ್ಯಾಟ ಕುಸ್ತಿಪಟುಗಳಾದ ಸಾಲೇಬೀರನಹಳ್ಳಿಯ ಹಣಮಂತ ಮತ್ತು ಭಾಲ್ಕಿಯ ಕಿರಣ ಅವರ ಮಧ್ಯೆ ನಡೆಯಿತು.

ಇಬ್ಬರು ಸಾಕಷ್ಟು ಸೆಣಸಾಟ ನಡೆಸಿದರೂ ಯಾರೊಬ್ಬರೂ ಸೋಲಲಿಲ್ಲ ಇದರಿಂದ ಕೊನೆಗೆ ಪಂದ್ಯಾಟ ಡ್ರಾ ಎಂದು ಘೋಷಿಸಿ ಇಬ್ಬರಿಗೂ ಬಹುಮಾನವನ್ನು ಶ್ರೀಮಠದ ಚನ್ನವೀರ ಶಿವಾಚಾರ್ಯರು ಪ್ರದಾನ ಮಾಡಿದರು. ಶ್ರೀಗಳು ಅತ್ಯಂತ ಉತ್ಸಾಹದಿಂದ ಪಂದ್ಯಾಟ ವೀಕ್ಷೀಸಿದರು.

ಬಹುಮಾನ ವಿತರಣೆಯಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಗೌತಮ ಪಾಟೀಲ, ಜಗನ್ನಾಥ ಕಟ್ಟಿ, ಅವಿರೋಧ ಕಟ್ಟಿಮನಿ, ಗಿರಿರಾಜ ಸಜ್ಜನ, ಅಶೋಕ ಪಾಟೀಲ, ಜಗನ್ನಾಥ ರಾಜಾಪುರ, ಕೆ.ಎಂ.ಬಾರಿ ಮೊದಲಾದವರು ಇದ್ದರು.

ಇದಕ್ಕೂ ಮೊದಲು ನಡೆದ ಉತ್ತಮ ಪಶುಗಳ ಪ್ರದರ್ಶನ ವೀಕ್ಷಿಸಿದ ಚನ್ನವೀರ ಶಿವಾಚಾರ್ಯರು, ಮಹಮದ್ ಮಸ್ತಾನ ಅವರ ಎತ್ತುಗಳು(ಪ್ರಥಮ), ನಿಸಾರ ಅಹಮದ್, ಶರಣಕುಮಾರ ಸಿಂಧೆ ಎತ್ತುಗಳು (ದ್ವಿತೀಯ), ಪೋಲಕಪಳ್ಳಿಯ ಅಮೃತ ದೇಶಮುಖ್ ಹಾಗೂ ಚಂದಾಪುರ ತಾಂಡಾದ ಖೀರುಪವಾರ ಎತ್ತುಗಳು (ತೃತೀಯ) ಬಹುಮಾನಕ್ಕೆ ಆಯ್ಕೆಮಾಡಿ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿದರು. ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲಾ ರೈತರಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ರಾಜಶೇಖರ ಮಜ್ಜಗಿ, ವೀರೇಶ ಯಂಪಳ್ಳಿ, ಶಂಕರಗೌಡ ಅಲ್ಲಾಪುರ, ಸಂತೋಷ ಗಡಂತಿ, ಸುಭಾಷ ಸೀಳಿನ್, ನಾಗರಾಜ ಮಲಕೂಡ, ರಾಜು ಪಟಪಳ್ಳಿ, ಮಲ್ಲಿಕಾರ್ಜುನ ಅಲ್ಲಾಪುರ, ಸಂತೋಷ ಕಡಗದ, ಮಹಾಂತೇಶ ಮಠಪತಿ, ಮೊದಲಾದವರು ಇದ್ದರು.

ಶುಕ್ರವಾರ ಸಂಜೆ ತೇರ ಮೈದಾನದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಚಿಂಚೋಳಿ ಚಂದಾಪುರ ಅವಳಿ ಪಟ್ಟಣದ ಭಕ್ತರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರೆಯ ಅಂಗವಾಗಿ ಹಾರಕೂಡ ಚನ್ನಬಸವೇಶ್ವರ ಹವ್ಯಾಸಿ ಕಲಾವಿದರ ಸಂಘದ ವತಿಯಿಂದ ಶಂಕರ ಹೂವಿನ ಹಿಪ್ಪರಗಿ ರಚಿಸಿದ ‘ಸತ್ಯ ಮುಚ್ಚಿಟ್ಟ ಸರದಾರ’ ಎಂಬ ಸಾಮಾಜಿಕ ನಾಟಕ ಸಂಘದ ಅಧ್ಯಕ್ಷ ಶಾಮರಾವ್ ಕೊರವಿ ಉಪಾಧ್ಯಕ್ಷ ಜಗನ್ನಾಥ ಕಟ್ಟಿ, ಮುಖಂಡ ಲಕ್ಷ್ಮಣ ಅವುಂಟಿ ನೇತೃತ್ವದಲ್ಲಿ ಕಲಾವಿದರು ಅಭಿನಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.