ಕಲಬುರ್ಗಿ: ವಿದ್ಯಾರ್ಥಿನಿ ಅಪಹರಿಸಿದ್ದವನಿಗೆ 10 ವರ್ಷ ಶಿಕ್ಷೆ

7

ಕಲಬುರ್ಗಿ: ವಿದ್ಯಾರ್ಥಿನಿ ಅಪಹರಿಸಿದ್ದವನಿಗೆ 10 ವರ್ಷ ಶಿಕ್ಷೆ

Published:
Updated:

ಕಲಬುರ್ಗಿ: ಪರೀಕ್ಷೆ ಬರೆಯಲು ಹೊರಟಿದ್ದ 17 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ಓಂಕಾರ ಅಲಿಯಾಸ ಉಮೇಶ ಎಂಬಾತನಿಗೆ ಇಲ್ಲಿಯ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಹಾಗೂ ಒಟ್ಟಾರೆ 2.25 ಲಕ್ಷ ದಂಡ ವಿಧಿಸಿದೆ.

ಕಾಳಗಿಗೆ ಪರೀಕ್ಷೆ ಬರೆಯಲು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಕೋಡ್ಲಿ ಕ್ರಾಸ್‌ ಹತ್ತಿರ ನಿಂತಿದ್ದರು. ಆಗ ಅಲ್ಲಿಗೆ ಬಂದ ಆರೋಪಿ ಓಂಕಾರ, ‘ನೀನು ನನ್ನನ್ನು ಬಿಟ್ಟು ಬೇರೆಯವರೊಂದಿಗೆ ಹೇಗೆ ಜೀವನ ಸಾಗಿಸುತ್ತಿಯಾ ಎಂದು ಪ್ರಶ್ನಿಸಿ, ಮದುವೆಯಾಗುವ ಉದ್ದೇಶದಿಂದ ಒಬ್ಬ ವಿದ್ಯಾರ್ಥಿನಿಯನ್ನು ಹೆದರಿಸಿ ದ್ವಿಚಕ್ರವಾಹನದಲ್ಲಿ ಅಪಹರಿಸಿದ್ದ’ ಎಂದು ರಟಕಲ್‌ ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಪ್ಪ ಎಸ್‌. ಅವರು, ಆರೋಪಿಗೆ ಐಪಿಸಿಯ ವಿವಿಧ ಕಲಂಗಳು ಮತ್ತು ಪೋಕ್ಸೊ ಕಾಯ್ದೆಯಡಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದರು.

ನೊಂದ ವಿದ್ಯಾರ್ಥಿನಿಗೆ ಜಿಲ್ಲಾ ಕಾನೂನು ನೆರವು ಸಮಿತಿಯಿಂದ ₹1 ಲಕ್ಷ ಹಾಗೂ ಆರೋಪಿ ಕಟ್ಟುವ ದಂಡದಲ್ಲಿ ₹1 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ವಕೀಲ (ಪೋಕ್ಸೊ) ಎಲ್‌.ವಿ. ಚಟ್ನಾಳಕರ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !