ಕಲಬುರಗಿ: ಇಲ್ಲಿನ ಜಗತ್ ವೃತ್ತದಲ್ಲಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಚೇರಿಯಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ತಗುಲಿ ಮಹತ್ವದ ದಾಖಲೆಗಳು ಭಸ್ಮವಾಗಿವೆ.
ಜಿ.ಪಂ. ಸಿಇಒ ಅವರ ಕಚೇರಿ ಹಾಗೂ ಪಕ್ಕದಲ್ಲಿನ ಲೆಕ್ಕಪತ್ರಗಳ ದಾಖಲೆ ಇರಿಸಿದ್ದ ಕೊಠಡಿಗೆ ಬೆಂಕಿ ಬಿದ್ದಿದೆ.
ರಾತ್ರಿ 9ರ ಸುಮಾರಿಗೆ ಕಚೇರಿಯಿಂದ ಬರುತ್ತಿದ್ದ ಹೊಗೆ ನೋಡಿದ ಜನರು ಅಗ್ನಿಶಾಮಕ ದಳಕ್ಕೆ ಮೂಲಕ ಮಾಹಿತಿ ನೀಡಿದ್ದಾರೆ. ಕೂಡಲೇ ಎರಡು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ.
ಜಿ.ಪಂ. ಕಚೇರಿಗೆ ಬೆಂಕಿ ಬಿದ್ದ ಬಗ್ಗೆ ರಾತ್ರಿ 9.30ರ ಸುಮಾರಿಗೆ ಮಾಹಿತಿ ಬಂತು. ತಕ್ಷಣ ಬೆಂಕಿಯನ್ನು ನಂದಿಸಲಾಯಿತು ಎಂದು ಅಗ್ನಿಶಾಮಕ ಅಧಿಕಾರಿ ಅಂಕೋಶ್ ಅರ್ಜುನ್ ಮಾಹಿತಿ ನೀಡಿದರು.
ಕೋಣೆಗೆ ಬೆಂಕಿ ಬಿದ್ದಿದ್ದೆ, ಇದರಿಂದ ಅಪಾರ ಪ್ರಮಾಣದ ಮಹತ್ವದ ದಾಖಲೆಗಳು ನಾಶವಾಗಿರಬಹುದು ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.