ಗುಲ್ಬರ್ಗ: ಹಾವೇರಿ ಕೆಜೆಪಿ ಸಮಾವೇಶ, ಸಾರ್ವತ್ರಿಕ ಚುನಾವಣೆ ಸಮೀಪಿಸುವ ನಿರೀಕ್ಷೆಯಿಂದ ಜಿಲ್ಲೆಯ ವಿವಿಧ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿದೆದರುತ್ತಿದೆ. ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ತೊಡಗುವ ಮೂಲಕ ರಾಜಕೀಯ ಭವಿಷ್ಯಕ್ಕಾಗಿ ತಡಕಾಡುತ್ತಿರುವುದು ಕಂಡುಬರುತ್ತಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಹಾಗೂ ಮಾಜಿ ಸಚಿವ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷಗಳು ಉದಯವಾದುದರಿಂದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ನಲ್ಲೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಇದರ ಪರಿಣಾಮವೆಂಬಂತೆ ಗುಲ್ಬರ್ಗ ಗ್ರಾಮೀಣ, ಗುಲ್ಬರ್ಗ ಉತ್ತರ, ಗುಲ್ಬರ್ಗ ದಕ್ಷಿಣ ಕ್ಷೇತ್ರಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ.

ಗುಲ್ಬರ್ಗ ಗ್ರಾಮೀಣ: ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಚಿವ ರೇವುನಾಯಕ ಬೆಳಮಗಿ ಕೆಜೆಪಿ ಸೇರುವುದು ಬಹುತೇಕ ಖಚಿತವಾಗಿದ್ದರಿಂದ ಬಿಜೆಪಿಯಿಂದ ಯಾರು ಎನ್ನುವ ಪ್ರಶ್ನೆ ಉದ್ಭವವಾಗಿದೆ. ಬೆಳಮಗಿ ವಿರುದ್ಧ ಸೋಲು ಅನುಭವಿಸಿದ್ದ ಕಾಂಗ್ರೆಸ್ನ ಚಂದ್ರಿಕಾ ಪರಮೇಶ್ವರ ಜಾಗಕ್ಕೆ ಮಾಜಿ ಸಚಿವರಾದ ಜಿ. ರಾಮಕೃಷ್ಣ, ಬಾಬುರಾವ ಚವ್ಹಾಣ, ಯುವ ಮುಖಂಡ ಅಂಬಾರಾಯ ಅಷ್ಟಗಿ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್ ಪಕ್ಷದಿಂದಲೂ ಹಲವು ಆಕಾಂಕ್ಷಿಗಳಿದ್ದಾರೆ.

ಗುಲ್ಬರ್ಗ ದಕ್ಷಿಣ: ಬಿಜೆಪಿಯಿಂದ ಹಾಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ, ಕಾಂಗ್ರೆಸ್ನಿಂದ ಕೈಲಾಸನಾಥ ಪಾಟೀಲ, ಕೆಜೆಪಿಯಿಂದ ಸತೀಶ ಗುತ್ತೇದಾರರ ಹೆಸರುಗಳು ಕೇಳಿಬರುತ್ತಿವೆ ಎಂದು ಆಯಾ ಪಕ್ಷದ ಮೂಲಗಳು ತಿಳಿಸಿವೆ. ಹಾಲಿ ಶಾಸಕಿ ಅರುಣಾ ಪಾಟೀಲ ರೇವೂರರ (ಜೆಡಿಎಸ್) ಪುತ್ರ ದತ್ತಾತ್ರೇಯ ಪಾಟೀಲರಿಗೆ (ಅಪ್ಪುಗೌಡ) ಎಲ್ಲ ಪಕ್ಷಗಳಿಂದಲೂ ಬುಲಾವ್ ಬಂದಿದೆ ಎಂದು ಮೂಲಗಳು ತಿಳಿಸಿವೆ. ಕೊನೆ ಗಳಿಗೆಯಲ್ಲಿ ಯಾವುದೇ ಬದಲಾವಣೆ ಆಗಬಹುದೆಂಬ ನಿರೀಕ್ಷೆ ಈ ಮೂಲಗಳದು.

ಗುಲ್ಬರ್ಗ ಉತ್ತರ: ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಖಮರುಲ್ ಇಸ್ಲಾಂ ಜೊತೆ ಯುವ ಮುಖಂಡ ನಾಸಿರ್ ಹುಸೇನ್ ಹೆಸರು ಬಲವಾಗಿ ಕೇಳಿಸುತ್ತಿದೆ. ಯಡಿಯೂರಪ್ಪನವರ ಕಟ್ಟಾ ಬೆಂಗಲಿಗರೆಂದೇ ಗುರುತಿಸಿಕೊಂಡಿರುವ ಬಿಜೆಪಿ ಮುಖಂಡ ಉದ್ಯಮಿ ಬಿ.ಜಿ. ಪಾಟೀಲ ಕೆಜೆಪಿಗೆ ಹೋಗಿರುವುದರಿಂದ ಬಿಜೆಪಿಯಲ್ಲಿ ಸಾಕಷ್ಟು ಆಕಾಂಕ್ಷಿಗಳು ಹುಟ್ಟಿಕೊಳ್ಳಬಹುದೆಂದು ಆ ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಾಗಿ ತೆರೆಮರೆಯ ಹುಡುಕಾಟ ನಡೆಸಿದ್ದು, ಮುಸ್ಲಿಂ ಮತದಾರರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳಿಂದಲೂ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಮೊದಲ ಪ್ರಾಶಸ್ತ್ಯ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಕಲ್ಯಾಣರಾವ ಅಂಬಲಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ರೈತರಿಗೆ ಸುಗ್ಗಿ ಕಾಲದಲ್ಲಿ `ಹಿಗ್ಗು' ಇರುವಂತೆ ರಾಜಕಾರಣಿಗಳಿಗೆ ಇದು `ಸುಗ್ಗಿ' ಕಾಲ. ಪಕ್ಷಾಂತರಿಗಳಿಗೆ ಇದು ಸಕಾಲ. ಎಲ್ಲೆಲ್ಲೂ ಪಕ್ಷಾಂತರ ಪರ್ವದ ಸುದ್ದಿಯೇ ಪ್ರಮುಖವಾಗಿ ಕೇಳಿ ಬರುತ್ತಿದೆ. ಹಾವೇರಿ ಸಮಾವೇಶದ ನಂತರ ಬಿಜೆಪಿ ಸರ್ಕಾರದ ನಡೆಯನ್ನು ಅನುಸರಿಸಿ ಚಟುವಟಿಕೆ ಇನ್ನಷ್ಟು ಚುರುಕಾಗುವ ನಿರೀಕ್ಷೆಯನ್ನು ಮುಖಂಡರು ಇಟ್ಟುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.