ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲ್ಬರ್ಗ ಒನ್‌: ₨ 17 ಕೋಟಿ ‘ದಾಖಲೆ ಬಿಲ್’ ಸಂಗ್ರಹ

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ಹತ್ತು ಹಲವು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ 2010ರಲ್ಲಿ ಆರಂಭಿಸಲಾಗಿದ್ದ ‘ಗುಲ್ಬರ್ಗ ಒನ್’ ಕೇಂದ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 2013ರಲ್ಲಿ ಬರೋಬ್ಬರಿ ₨ 17 ದಾಖಲೆ ಬಿಲ್ ಸಂಗ್ರಹವಾಗಿದೆ!

ವಿದ್ಯುತ್‌, ಆಸ್ತಿ ತೆರಿಗೆ, ಮೊಬೈಲ್ ಸೇರಿದಂತೆ ಅನೇಕ ಬಿಲ್‌ಗಳನ್ನು ಪಾವತಿಸಲು ಸಾರ್ವಜನಿ ಕರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ 2010ರ ಮೇ 14ರಂದು ಕರ್ನಾಟಕ ಸರ್ಕಾರದ ಇ–ಆಡಳಿತ ಇಲಾಖೆ ಸಹಭಾಗಿತ್ವ ದಲ್ಲಿ ನಗರದ ಮಿನಿ ವಿಧಾನಸೌಧದಲ್ಲಿ ‘ಗುಲ್ಬರ್ಗ ಒನ್‌’ ಕೇಂದ್ರಕ್ಕೆ ಚಾಲನೆ ನೀಡಲಾಗಿತ್ತು.

ಇದಾದ ಬಳಿಕ ಹೊರವರ್ತುಲ ರಸ್ತೆಯ ಖರ್ಗೆ ಪೆಟ್ರೋಲ್‌ ಪಂಪ್‌ ಹತ್ತಿರದ ಕೆಎಚ್‌ಬಿ ಕಾಂಪ್ಲೆಕ್ಸ್‌, ಸೂಪರ್‌ ಮಾರ್ಕೆಟ್‌ನ ಮಿಲಿಯನ್‌ ಚೌಕ್‌ ಹಾಗೂ 2012ರ ನವೆಂಬರ್‌ 1ರಂದು ಪಾಲಿಕೆ ವಲಯ ಕಚೇರಿ–3ರಲ್ಲಿ ‘ಗುಲ್ಬರ್ಗ ಒನ್‌’ ಕೇಂದ್ರಗಳನ್ನು ಆರಂಭಿಸಲಾಗಿತ್ತು.
ಪ್ರಾರಂಭದಲ್ಲಿ ಅಂದರೆ, 2010ರಲ್ಲಿ ಸುಮಾರು 7 ಸಾವಿರ ಬಿಲ್‌ಗಳು ಪಾವತಿಯಾ ಗಿದ್ದು, ₨ 39.38 ಲಕ್ಷ ಸಂಗ್ರಹವಾಗಿತ್ತು. ಪ್ರತಿ ವರ್ಷ ಬೇರೆ ಬೇರೆ ಸೇವೆಗಳನ್ನು ಈ ಕೇಂದ್ರ ಗಳಲ್ಲಿ ಅಳವಡಿಸಿದ್ದರಿಂದ 2013ರಲ್ಲಿ ₨17 ಕೋಟಿ ಮೊತ್ತದ ಬಿಲ್‌ ಪಾವತಿಯಾಗಿವೆ.

ಲಭ್ಯವಿರುವ ಸೇವೆಗಳು: ವಿದ್ಯುತ್‌ ಬಿಲ್‌, ಆಸ್ತಿ ತೆರಿಗೆ (ಪಾಲಿಕೆ ವ್ಯಾಪ್ತಿ), ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿ ಮತ್ತು ಮೊಬೈಲ್‌ (ಸೆಲ್‌ಒನ್‌), ಏರ್‌ಟೆಲ್ ಸ್ಥಿರ ದೂರವಾಣಿ ಮತ್ತು ಮೊಬೈಲ್, ವೊಡಾಫೋನ್‌, ಐಡಿಯಾ, ಎಂಟಿಎಸ್‌ ಪೊಸ್ಟ್‌ಪೇಡ್‌ ಬಿಲ್‌ಗಳು, ಸರ್ಕಾರಿ ನೌಕರಿಗಾಗಿ ಅರ್ಜಿ, ಕೆಎಸ್‌ಆರ್‌ಟಿಸಿ ಟಿಕೆಟ್‌ ಬುಕ್ಕಿಂಗ್‌, ಆರ್‌ಟಿಒ ಸೇವೆ (ಆರ್‌ಸಿ ಪ್ರತಿ ಹಾಗೂ ಡಿಎಲ್‌ ಪ್ರತಿ), ಐಎನ್‌ಜಿ ವೈಶ್ಯ ಜೀವವಿಮಾ ಕಂತುಗಳ ಪಾವತಿ, ಪಿಯು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಪೊಲೀಸ್‌ ದೃಢೀಕರಣ ಪತ್ರ ಪಡೆಯಲು ಹಾಗೂ ವಿದ್ಯಾಭ್ಯಾಸ ಪ್ರಮಾಣಪತ್ರ ಪರಿಶೀಲನೆಗೆ ಸಂಬಂಧಪಟ್ಟ ಬಿಲ್‌ಗಳ ರಶೀದಿಯೊಂದಿಗೆ ನಗದು, ಚೆಕ್‌ ಅಥವಾ ಡಿ.ಡಿ ಮೂಲಕ ಬಿಲ್‌ ಪಾವತಿಸಬಹುದು.

‘ತಂತ್ರಜ್ಞಾನ ಮುಂದುವರಿದಂತೆ ಸಾರ್ವಜನಿಕ ರಿಗೆ ಸಮಯ ಸಾಲುತ್ತಿಲ್ಲ. ಕಚೇರಿಗಳಲ್ಲಿ ಕೆಲಸ ನಿರ್ವಹಿಸುವವರು, ಶಾಲಾ–ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರು, ಖಾಸಗಿ ಕಂಪೆನಿ ಉದ್ಯೋಗಿಗಳಿಗೆ ಬಿಡುವು ಇರುವುದಿಲ್ಲ. ಈ ಕಾರಣಕ್ಕಾಗಿಯೇ ‘ಗುಲ್ಬರ್ಗ ಒನ್‌’ ಕೇಂದ್ರ ಸ್ಥಾಪಿಸಲಾಗಿದ್ದು, ವರ್ಷದ 365 ದಿನ ತೆರೆದಿರುತ್ತದೆ. ಬೆಳಿಗ್ಗೆ 8 ರಿಂದ ರಾತ್ರಿ 8ರ ವರೆಗೆ ಸಾರ್ವಜನಿಕರಿಗೆ ಸೇವೆ ಒದಗಿಸಲಾಗುತ್ತಿದೆ’ ಎಂದು ‘ಗುಲ್ಬರ್ಗ ಒನ್‌’ ಯೋಜನೆಯ ವ್ಯವಸ್ಥಾಪಕ ಮಂಜುನಾಥ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT