ಗುಲ್ಬರ್ಗ: ಸುಮಾರು ಒಂದು ತಿಂಗಳಿಂದ ನಗರದ ಮುಖ್ಯರಸ್ತೆ ಹಾಗೂ ಜನನಿಬಿಡ ರಸ್ತೆಗಳಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್ ಪೈಪ್ಗಳು ಮಾರಾಟವಾಗುತ್ತಿರುವುದು ನಿಮ್ಮ ಕಣ್ಣಿಗೂ ಬಿದ್ದಿರಬಹುದು. ನಗರದ ಜಿಲ್ಲಾ ಕೋರ್ಟ್ ಸಂಕೀರ್ಣದ ಎದುರು, ಸೇಡಂ ರಸ್ತೆ, ಸೂಪರ್ಮಾರ್ಕೆಟ್ ಮತ್ತಿತರ ಪ್ರದೇಶದ ಪಾದಾಚಾರಿ ಮಾರ್ಗದಲ್ಲಿ ಮಾರಾಟವಾಗುವ ಈ ಪ್ಲಾಸ್ಟಿಕ್ ಪೈಪ್ಗಳನ್ನು ಗಮನಿಸದವರೇ ಇಲ್ಲ ಎನ್ನಬಹುದು.

ಮನೆ ತೊಳೆಯುವುದಕ್ಕೆ, ಕೈತೋಟಕ್ಕೆ ನೀರುಣಿಸುವುದಕ್ಕೆ, ವಾಹನ, ಶೌಚ, ಸ್ನಾನಗೃಹಗಳ ಸ್ವಚ್ಛತೆಗೆ ಬಳಸಬಹುದಾಗಿರುವ ಮುಂಭಾಗದಲ್ಲಿ ಹಿಡಿಕೆಯಿರುವ ಪ್ಲಾಸ್ಟಿಕ್ ಪೈಪ್ಗಳನ್ನು ಬಹುಶಃ ಎಲ್ಲ ವಾಹನಸವಾರರು ಹಾಗೂ ದಾರಿಹೋಕರು ಗಮನಿಸಿರಲೇಬೇಕು. ಈ ಹಿಡಿಕೆ ಹೊಂದಿರುವ ಪ್ಲಾಸ್ಟಿಕ್ ಪೈಪ್ಗಳಿಗೆ ಮಾರಾಟಗಾರರ ಪರಿಭಾಷೆಯಲ್ಲಿ ಹೇಳುವುದಾದರೆ `ಸರ್ವಿಸ್ ಗನ್~ ಎಂದು ಕರೆಯಬಹುದು.

10 ಅಡಿ ಉದ್ದದ ಸರ್ವಿಸ್ ಗನ್ಗಳನ್ನು ರೂ. 100, 10 ಅಡಿ ಉದ್ದದ ಸರ್ವಿಸ್ ಗನ್ಗಳನ್ನು ರೂ. 200ಕ್ಕೊಂದರಂತೆ ಮಾರಾಟ ಮಾಡುತ್ತಿದ್ದು, ದಿನಕ್ಕೆ 20ರಿಂದ 25 ಪೈಪ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿನ ಜನ ಖರೀದಿಸದಿದ್ದರೂ ಪರವಾಗಿಲ್ಲ. ಏನಿರಬಹುದು ಎಂದು ಒಂದು ಬಾರಿ ನೋಡಿ ಹೋಗುವ ಸೌಜನ್ಯವನ್ನು ತೋರುತ್ತಿದ್ದಾರೆ ಎಂಬುದು ಮಾರಾಟಗಾರರ ಅನಿಸಿಕೆ.

ಬಣ್ಣದ ಈ `ಸರ್ವಿಸ್ ಗನ್~ಗಳ ಮಾರಾಟದ ಹಿಂದೆ ಜಿಯಾವುಲ್ಲಾ (35) ಎಂಬಾತನ ಬಣ್ಣಗೆಟ್ಟ ಬದುಕು ಇರುವುದು ಬಹಳ ಜನಕ್ಕೆ ತಿಳಿದಿರಲಿಕ್ಕಿಲ್ಲ. ಮೂಲತಃದಾವಣಗೆರೆಯ ಆಜಾದ್ ನಗರದ `ಜಿಯಾವುಲ್ಲಾ~ ಅವರದು ತಾಯಿ, ಹೆಂಡತಿ ನಾಲ್ಕು ಜನ ಮಕ್ಕಳ ತುಂಬು ಸಂಸಾರ. ಈಗ್ಗೆ ಏಳು ತಿಂಗಳ ಹಿಂದೆ ದಾವಣಗೆರೆ ನಗರದ ಕೋರ್ಟ್ ಹತ್ತಿರ `ಫ್ಯಾಶನ್ ಸೆಂಟರ್~ ಎಂಬ ಬಟ್ಟೆ ಅಂಗಡಿಯ ಶೋರೂಂ ಹೊಂದಿದ್ದರು. ಆದರೆ ಅಂಗಡಿಯ ವೆಚ್ಚ ಭರಿಸಲಾರದೆ ವ್ಯಾಪಾರದಲ್ಲಿ ಕೈಸುಟ್ಟುಕೊಂಡು ಮತ್ತೆ ಮೊದಲಿನ ಫುಟ್ಪಾತ್ ವ್ಯಾಪಾರವನ್ನೇ ಅವಲಂಬಿಸಿದ್ದಾರೆ.

ಕಾಲಕ್ಕೆ ತಕ್ಕಂತೆ ತಮ್ಮ ಫುಟ್ಪಾತ್ ವ್ಯಾಪಾರವನ್ನು ಬದಲಿಸುವ ಮೂಲಕ ಸಂಸಾರದ ನೊಗವನ್ನು ಸಾಗಹಾಕುತ್ತಿರುವ ಇವರು ಮಳೆಗಾಲ ಆರಂಭವಾದಾಗಿನಿಂದ ನಾಡಿನ ವಿವಿಧೆಡೆ `ಸರ್ವಿಸ್ ಗನ್~ಗಳ ಮಾರಾಟ ಮಾಡುತ್ತ ಗುಲ್ಬರ್ಗಕ್ಕೆ ಬಂದು ತಲುಪಿದ್ದಾರೆ. ಹುಟ್ಟಿನಿಂದ ಮುಸ್ಲಿಂ ಜನಾಂಗದವರಾಗಿದ್ದರೂ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ವಾಸಿಸುತ್ತಿರುವುದರಿಂದ ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುತ್ತಾರೆ.

ನಾ ಚಿಕ್ಕವನಿರುವಾಗಲೇ ನನ್ನ ತಂದೆ ತೀರಿ ಹೋದರು. ಆಗ ನಾನು ಶಾಲೆಗೆ ಹೋದರೆ ಮನೆ ಸಂಸಾರ ನಡೆಯುತ್ತಿರಲಿಲ್ಲ. ಹೀಗಾಗಿ ನಾನು ಶಾಲೆಯ ಮುಖ ನೋಡಲಿಲ್ಲ. ಹಮಾಲಿ ಕೆಲಸದಿಂದ ಹಿಡಿದು, ಬಟ್ಟೆ, ಪೈಪ್ ಹಾಗೂ ಇನ್ನಿತರ ವ್ಯಾಪಾರ ಮಾಡುತ್ತ ಜೀವನ ಸಾಗಿಸುತ್ತಿದ್ದೇನೆ. ಹೇಳುತ್ತ ಹೋದರೆ ನನ್ನ ಬದುಕಿನದೇ ಒಂದು ಸಿನಿಮಾ ಕಥೆಯಾಗುತ್ತದೆ. ಫುಟ್ಪಾತ್ ಮೇಲೆ ಮಾರಾಟ ಮಾಡುವ ಎಲ್ಲ ವ್ಯಾಪಾರದಲ್ಲೂ ಲಾಭವಿದೆ. ಆದರೆ ಬಟ್ಟೆ ಮಾರಾಟದಲ್ಲಿ ತೃಪ್ತಿ ಸಿಕ್ಕಷ್ಟು ನನಗೆ ಬೇರೆ ಯಾವುದೇ ವಸ್ತುಗಳ ಮಾರಾಟದಲ್ಲಿ ತೃಪ್ತಿ ಸಿಕ್ಕಿಲ್ಲ ಎನ್ನುತ್ತಾರೆ ಜಿಯಾವುಲ್.

ಈ ಸರ್ವಿಸ್ ಗನ್ಗಳನ್ನು ಬೆಂಗಳೂರಿನಿಂದ ಖರೀದಿ ಮಾಡಿಕೊಂಡು ಬಂದು ಮಾರಾಟ ಮಾಡಲಾಗುತ್ತಿದೆ. ಗುಲ್ಬರ್ಗದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ನಮ್ಮೂರು ದಾವಣಗೆರೆ ರಾಜ್ಯದ ಪ್ರಮುಖ ವ್ಯಾಪಾರ ಕೇಂದ್ರವೇನೋ ನಿಜ. ಆದರೆ ಅದು ಶ್ರೀಮಂತರಿಗೆ ಮಾತ್ರ. ನಮ್ಮಂತಹ ಬಡಪಾಯಿಗಳಿಗೆ ದುಡಿದು ತಿನ್ನದೆ ಗತಿಯಿಲ್ಲ ಎಂದು ಹೊಟ್ಟೆಪಾಡಿಗಾಗಿ ತಾವು ದಾವಣಗೆರೆ ಬಿಟ್ಟು ಬಂದುದನ್ನು ನೆನಪಿಸಿಕೊಳ್ಳುತ್ತಾರೆ.

ಒಂದು ದಿನಕ್ಕೆ ಎರಡು ನೂರು ರೂಪಾಯಿ ಆದಾಯ ಬರುತ್ತಿದ್ದು, ಇದರಲ್ಲಿಯೇ ನನ್ನ ಮತ್ತು ನನ್ನ ತಮ್ಮನ ಹೊಟ್ಟೆ ಬಟ್ಟೆಯ ಜೊತೆಗೆ ಊರಲ್ಲಿರುವ ಇತರ ಕುಟುಂಬದ ಸದಸ್ಯರ ಭಾರವೂ ಹೊರಬೇಕಾಗಿದೆ. ನಾನು ಮಾರಾಟ ಮಾಡುತ್ತಿರುವ ಈ ವಸ್ತುಗಳು ಪ್ರಚಾರಕ್ಕಾಗಿ ಅಲ್ಲ. ಎಲ್ಲವೂ ಪೇಠ್ (ಹೊಟ್ಟೆ)ಗಾಗಿ ಎಂದು ಅತ್ಯಂತ ವಿನೀತನಾಗಿ ನುಡಿಯುತ್ತಾರೆ. `ಕೈ ಕೆಸರಾದರೆ ಬಾಯಿ ಮೊಸರು~ ಎಂಬ ಗಾದೆ ಮಾತಿಗೆ ಜಿಯಾವುಲ್ಲಾ ಜೀವನ ಪ್ರೀತಿ ಹೇಳಿ ಮಾಡಿಸಿದಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.