ಸೋಮವಾರ, ಆಗಸ್ಟ್ 2, 2021
27 °C
ಸಕ್ರಿಯ ಪ್ರಕರಣಗಳ ಸಂಖ್ಯೆ 137ಕ್ಕೆ ಏರಿಕೆ; ಸಿದ್ದಾಪುರ ಭಾಗಕ್ಕೂ ವ್ಯಾಪಿಸಿದ ಕೊರೊನಾ

ಪೊಲೀಸ್‌ ಸಿಬ್ಬಂದಿ ಸೇರಿ 25 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಜಿಲ್ಲೆಯಲ್ಲಿ ಮಂಗಳವಾರವೂ ಕಾನ್‌ಸ್ಟೆಬಲ್‌ ಸೇರಿದಂತೆ 25 ಮಂದಿಗೆ ಕೋವಿಡ್‌ 19 ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಢವಾಗಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 209ಕ್ಕೇರಿದ್ದು ಅದರಲ್ಲಿ 69 ಮಂದಿ ಗುಣಮಖರಾಗಿ ಬಿಡುಗಡೆಯಾಗಿದ್ದಾರೆ.

ಮಡಿಕೇರಿ ಐ.ಟಿ.ಐ ಜಂಕ್ಷನ್ ಬಳಿ ವಾಸವಿರುವ, ಬಾಗಲಕೋಟೆ ಪ್ರಯಾಣದ ಇತಿಹಾಸವುಳ್ಳ ಪೊಲೀಸ್ ಇಲಾಖೆ 32 ವರ್ಷದ ಪುರುಷ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.

ಗೋಣಿಕೊಪ್ಪಲು ಎಚ್.ಸಿ.ಪುರದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 37 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ. ಕರಡಿಗೋಡು ನಿವಾಸಿ ಕೇರಳದ ಕಣ್ಣೂರು ಪ್ರಯಾಣದ ಇತಿಹಾಸವುಳ್ಳ 56 ವರ್ಷದ ಪುರುಷ, ನೆಲ್ಲಿಹುದಿಕೇರಿ, ಮಾದಪ್ಪ ಕಾಲೊನಿಯ 58 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಪಿರಿಯಾಪಟ್ಟಣ ತಾಲ್ಲೂಕು, ಚೆನ್ನಕಲ್ ಕೊಪ್ಪ ಗ್ರಾಮದ ನಿವಾಸಿಯಾದ ಜ್ವರ ಲಕ್ಷಣಗಳಿದ್ದ 15 ವರ್ಷದ ಹುಡುಗನಿಗೆ ಸೋಂಕು ದೃಢಪಟ್ಟಿದೆ.

ಕುಶಾಲನಗರದ ದಂಡಿನಪೇಟೆಯ (ಕುಸುಮ ಸ್ಟೋರ್ ಬಳಿ) ನಿವಾಸಿ, ಜ್ವರ ಲಕ್ಷಣಗಳಿದ್ದ 22 ವರ್ಷದ ಮಹಿಳೆಗೂ ಕೊರೊನಾ ಸೋಂಕು ತಗುಲಿದೆ. ಕುಶಾಲನಗರದ ದಂಡಿನಪೇಟೆಯ (ರೋಟರಿ ಹಾಲ್ ಬಳಿ) ನಿವಾಸಿ, 48 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆ, ಕುಶಾಲನಗರದ ಕೂಡ್ಲೂರು ನಿವಾಸಿ ಉಕ್ರೈನ್‌ ವಾಪಸ್ಸಾಗಿದ್ದ 18 ವರ್ಷದ ಯುವಕನಿಗೂ ಸೋಂಕಿದೆ.

ತೊರೆನೂರು ನಿವಾಸಿ ಬೆಂಗಳೂರಿನಿಂದ ವಾಪಸ್ಸಾಗಿದ್ದ 25 ವರ್ಷದ ಪುರುಷ, ವಿರಾಜಪೇಟೆ ತಾಲ್ಲೂಕು 1ನೇ ರುದ್ರಗುಪ್ಪೆ (ತೋತೇರಿ) ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 38 ವರ್ಷದ ಪುರುಷ, ಕುಶಾಲನಗರದ ತೊರೆನೂರು ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 25 ವರ್ಷದ ಪುರುಷ, ಮಡಿಕೇರಿಯ ಪುಟಾಣಿ ನಗರ ನಿವಾಸಿ, ಮಂಗಳೂರಿನಿಂದ ಹಿಂದಿರುಗಿದ್ದ 54 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಕುಶಾಲನಗರದ ಜನತಾ ಕಾಲೊನಿಯ 17 ವರ್ಷದ ಹುಡುಗ, ವಿರಾಜಪೇಟೆ ತಾಲ್ಲೂಕಿನ ಹಳೇ ಸಿದ್ದಾಪುರದ 70 ವರ್ಷದ ವೃದ್ಧ, 43 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಕೊಡಗರಗಳ್ಳಿ ಗ್ರಾಮದ ಕೂರ್ಗ್ ಹಳ್ಳಿ ಎಸ್ಟೇಟ್‌ನಲ್ಲಿ ವಾಸವಿದ್ದ 20 ವರ್ಷದ ಯುವಕ, ಸಿದ್ದಾಪುರದ ಎಂ.ಜಿ.ರಸ್ತೆಯ 47 ವರ್ಷದ ಮಹಿಳೆ, ಗೋಣಿಕೊಪ್ಪಲು ಎಚ್.ಸಿ.ಪುರ ನಿವಾಸಿ, 43 ವರ್ಷದ ಪುರುಷರೊಬ್ಬರಿಗೆ ಸೋಂಕಿದೆ.

ಪೊನ್ನಂಪೇಟೆಯ ಹುದಿಕೇರಿ ರಸ್ತೆಯ ಮುಗುಟಗೇರಿ ನಿವಾಸಿಗೂ ಕೊರೊನಾ ವಕ್ಕರಿಸಿದೆ. ಈ ಹಿಂದೆ ಕೋವಿಡ್ ಸೋಂಕು ದೃಢಪಟ್ಟ ಹುಂಡಿ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ವಿರಾಜಪೇಟೆ ತಾಲ್ಲೂಕಿನ ಬಾಡಗ ಬಾಣಂಗಾಲದ 10 ವರ್ಷದ ಬಾಲಕ, 15 ವರ್ಷದ ಬಾಲಕ ಮತ್ತು 33 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಶನಿವಾರಸಂತೆಯ ಗುಂಡೂರಾವ್ ಬಡಾವಣೆಯ ಪಾಸಿಟಿವ್‌ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 20 ವರ್ಷದ ಹುಡುಗನಿಗೆ ಸೋಂಕು ದೃಢಪಟ್ಟಿದೆ.

ಮಡಿಕೇರಿಯ ಮಹದೇವಪೇಟೆಯ (ರವಿ ಪ್ರೆಸ್ ಮಿಲ್ ಹತ್ತಿರ) ನಿವಾಸಿಯಾದ ಜ್ವರ ಲಕ್ಷಣವಿದ್ದ 52 ವರ್ಷದ ಪುರುಷರಿಗೆ ಸೋಂಕು ದೃಡಪಟ್ಟಿದೆ. ಕುಶಾಲನಗರದ ತೊರೆನೂರು ಗ್ರಾಮದಲ್ಲಿ (ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ) ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 36 ವರ್ಷದ ಪುರುಷರೊಬ್ಬರಿಗೆ ಸೋಂಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು