ಮಂಗಳವಾರ, ಜೂಲೈ 7, 2020
22 °C
ನಿರಾಶ್ರಿತರಿಗೆ ಮನೆ ಕೊಡಿಸುವುದಾಗಿ ₹ 25 ಸಾವಿರ ಲಂಚಕ್ಕೆ ಬೇಡಿಕೆ

ಎಸಿಬಿ ಬಲೆಗೆ ನಗರಸಭೆ ಬಿಲ್‌ಕಲೆಕ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ನಿರಾಶ್ರಿತರೊಬ್ಬರಿಗೆ ಮನೆ ಕೊಡಿಸುವುದಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ನಗರಸಭೆಯ ಬಿಲ್‌ಕಲೆಕ್ಟರ್‌ ಎ.ಜಿ.ಲೋಹಿತ್‌ಕುಮಾರ್‌ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ) ಬಲೆಗೆ ಬಿದ್ದಿದ್ದಾರೆ.

 

ಇಂದಿರಾ ನಗರದ ಎಚ್‌.ಎಸ್‌.ಗಣೇಶ್‌ ಅವರ ಮನೆಯು 2018ರ ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಕುಸಿದಿತ್ತು. ಜೂನ್‌ 4ರಂದು ವಿತರಣೆ ಮಾಡಿದ್ದ ಮನೆಯಲ್ಲಿ ಗಣೇಶ್‌ ಅವರಿಗೂ ಮನೆ ನಿಗದಿಯಾಗಿತ್ತು. ಲೋಹಿತ್‌ಕುಮಾರ್‌, ನಾನೇ ಮನೆ ಕೊಡಿಸಿದ್ದೇನೆಂದು ಹೇಳಿ, ₹ 25 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಮುಂಗಡವಾಗಿ ₹ 5 ಸಾವಿರ ಪಡೆದುಕೊಂಡಿದ್ದು, ಶುಕ್ರವಾರ ಉಳಿಕೆ ₹ 20 ಸಾವಿರ ಲಂಚವನ್ನು ಎಪಿಎಂಸಿ ಆವರಣದಲ್ಲಿ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬಂಧಿತನಿಂದ ₹ 20 ಸಾವಿರ ಹಣ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಮೈಸೂರು ವಲಯ ಎಸ್‌ಪಿ ರಶ್ಮಿ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಭ್ರಷ್ಟಾಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು