ಶುಕ್ರವಾರ, ಮೇ 14, 2021
32 °C

ಬೀಟೆ ನಾಟಾ ಸಾಗಣೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಬೀಟೆ ಮರವನ್ನು ಅಕ್ರಮವಾಗಿ ಕಡಿದು ಸಾಗಿಸಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಕಾರು ಸಹಿತ ತಾಲ್ಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಭಾನುವಾರ ಬಂಧಿಸಿದರು.

ಜಿಲ್ಲೆಯ ಮೂರ್ನಾಡಿನ ನಿವಾಸಿ ಪಿ.ಎನ್. ತನ್ವೀರ್ ಬಂಧಿತ ಆರೋಪಿ.

ತಾಲ್ಲೂಕಿನ ಮಾಲ್ದಾರೆ ಕಳ್ಳಲ್ಲದಲ್ಲಿ ಭಾನುವಾರ ಬೆಳಿಗ್ಗೆ 4.30ರ ಸಮಯದಲ್ಲಿ ಕಾರ್ಯಾಚರಣೆ ನಡೆಸಿ ಅಂದಾಜು ₹2 ಲಕ್ಷ ಮೌಲ್ಯದ ಬೀಟೆ ನಾಟಾಗಳನ್ನು ಸಾಗಿಸಲು ಬಳಸಿದ ಕಾರನ್ನು ಆರೋಪಿ ಸಹಿತ ಬಂಧಿಸಿದ್ದಾರೆ.

ಆರೋಪಿಯು ನಾಟಾಗಳನ್ನು ಮೈಸೂರಿಗೆ ಸಾಗಿಸಲು ಯತ್ನಿಸುತ್ತಿದ್ದ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು