ಗುರುವಾರ , ಜನವರಿ 23, 2020
19 °C

ಹರಳು ಕಲ್ಲು ಸಾಗಾಟ: ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಭಾಗಮಂಡಲ ವಲಯದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಬೆಲೆ ಬಾಳುವ ಹರಳು ಕಲ್ಲು ಸಾಗಾಟ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಮನೆ, ತೋಟಗಳಲ್ಲಿ ಅಡಗಿಸಿಟ್ಟಿದ್ದ 16.44 ಕೆ.ಜಿ ಹರಳು ಕಲ್ಲು ವಶಕ್ಕೆ ಪಡೆಯಲಾಗಿದೆ. ಮೇಕೇರಿ ಗ್ರಾಮದ ಎಂ.ಕೆ.ಸಲೀಂ, ತ್ಯಾಗರಾಜ ಕಾಲೊನಿ ಎಂ.ಡಿ.ಶರಿಫ್ ಬಂಧಿತರು.

ಮಡಿಕೇರಿ ನಿವಾಸಿ ಅನಿಲಕುಮಾರ್, ತ್ಯಾಗರಾಜ ಕಾಲೊನಿಯ ಮಹಮ್ಮದ್ ಆಲಿ, ಎಂ.ಪಿ.ಸುಲ್ತಾನ್, ಬೆಟ್ಟಗೇರಿಯ ರಾಶಿದ್ ಹಾಗೂ ತಣ್ಣಿಮಾನಿ ಗ್ರಾಮದ ಮಿಟ್ಟು, ಪಾಪು, ಪುಟ್ಟ, ಈ.ಆರ್.ಅಬ್ದುಲ್‌ ಕುಂಞತ್‌ ತಲೆಮರೆಸಿಕೊಂಡಿದ್ದಾರೆ. 

ಖಚಿತ ಮಾಹಿತಿ ಮೇರೆಗೆ ಮಡಿಕೇರಿಯ ಗಣಪತಿ ಬೀದಿಯ ಎಂ.ಪಿ. ಸುಲ್ತಾನ್‌ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಮನೆಯಲ್ಲಿ 12 ಕೆ.ಜಿ ಹರಳು ಕಲ್ಲು ಪತ್ತೆಯಾಗಿದೆ. ಇದೇ ಸಂದರ್ಭದಲ್ಲಿ ಸಂಪಾಜೆ ಗ್ರಾಮದ ಈ.ಆರ್.ಅಬ್ದುಲ್ ಕುಂಞತ ಅವರ ಮನೆ ಮೇಲೆ ದಾಳಿ ನಡೆಸಿದಾಗ ಮನೆಯಲ್ಲಿ 106 ಕೆ.ಜಿಯಷ್ಟು ಹರಳು ಕಲ್ಲು ಪತ್ತೆಯಾಗಿದೆ. ಅದನ್ನು ಸುಖ್ಯ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು