ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿತಾಯ ಬಜೆಟ್ ಮಂಡಿಸಿದ ಅನಿತಾ ಪೂವಯ್ಯ

ಮಡಿಕೇರಿ ನಗರಸಭೆ; ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ: ವಿರೋಧ ಪಕ್ಷಗಳ ಸದಸ್ಯರ ಟೀಕೆ
Last Updated 21 ಮಾರ್ಚ್ 2023, 4:14 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಸೋಮವಾರ ₹6.25 ಕೋಟಿ ಮೊತ್ತದ ಉಳಿತಾಯ ಬಜೆಟ್‌ ಮಂಡಿಸಿ, ಸಭೆಯ ಒಪ್ಪಿಗೆ ಪಡೆದರು.

ಸರ್ಕಾರದ ಅನುದಾನಗಳೂ ಸೇರಿದಂತೆ ವಿವಿಧ ಮೂಲಗಳಿಂದ ₹73.13 ಕೋಟಿ ಮೊತ್ತದ ಆದಾಯವನ್ನು ನಿರೀಕ್ಷಿಸಿರುವ ಅವರು, ₹66.88 ಕೋಟಿ ಮೊತ್ತವನ್ನು ವಿವಿಧ ಕಾಮಗಾರಿಗಳು ಹಾಗೂ ಕಾರ್ಯಕ್ರಮಗಳಿಗೆ ಖರ್ಚು ಮಾಡಲು ಅಂದಾಜಿಸಿದ್ದಾರೆ.

ಹೆಚ್ಚಿನ ಹಣವನ್ನು ನಿರ್ಮಾಣ ಕಾಮಗಾರಿಗಳಿಗೆ ಮೀಸಲಿಟ್ಟಿರುವ ಅವರು, ಕಟ್ಟಡಗಳ ದುರಸ್ತಿ, ರಸ್ತೆ, ತಡೆಗೋಡೆ ನಿರ್ಮಾಣ, ಬೀದಿದೀಪ ಗಳು, ನೀರು ಸರಬರಾಜು ಕಟ್ಟಡ, ಸ್ಮಶಾನ ಅಭಿವೃದ್ಧಿ, ಮಾರುಕಟ್ಟೆ, ಉದ್ಯಾನಗಳ ಅಭಿವೃದ್ಧಿಯಂತಹ ಮೂಲ ಸೌಕರ್ಯಗಳಿಗೂ ತಮ್ಮ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದಾರೆ.

ನಿರ್ಮಾಣಗಳ ಪೈಕಿ ಕಾವೇರಿ ಕಲಾಕ್ಷೇತ್ರ ಕಟ್ಟಡ, ಮಾಂಸ ಮಾರುಕಟ್ಟೆ, ವಾಣಿಜ್ಯ ಮಳಿಗೆ, ಸಮುದಾಯ ಭವನಗಳು ಪ್ರಮುಖವಾಗಿವೆ.

ಪ್ರವಾಸಿತಾಣವಾದ ಮಡಿಕೇರಿ
ಯಲ್ಲಿ ಸ್ವಾಗತಕಮಾನು, ರಸ್ತೆಬದಿ ಮಾರ್ಗ ಸೂಚಿ ಫಲಕಗಳ ಅಳ
ವಡಿ ಕೆಗೆ ₹30 ಲಕ್ಷ ಹಣವನ್ನು ತೆಗೆದಿರಿಸಿರುವುದು ಈ ಸಾಲಿನ
ಬಜೆಟ್‌ನ ವಿಶೇಷ ಎನಿಸಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಹಾಯ ಧನ ನೀಡಲು ₹20 ಲಕ್ಷವನ್ನೂ ಮೀಸಲಿರಿಸಲಾಗಿದೆ.

ಆದಾಯದ ಮೂಲಗಳು: ಪ್ರಸಕ್ತ ಸಾಲಿನಲ್ಲಿ ನಗರಸಭೆ ತನ್ನ ಆದಾಯ
ಕ್ಕಿಂತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೀಡುವ ಅನುದಾನವನ್ನೇ ಬಹುಪಾಲು ನೆಚ್ಚಿಕೊಂಡಿದೆ. 15ನೇ ಹಣಕಾಸು ಅನುದಾನ ₹3 ಕೋಟಿ, ಎಸ್‌ಎಫ್‌ಸಿ ಮುಕ್ತನಿಧಿ ₹75 ಲಕ್ಷ, ಎಸ್‌ಎಫ್‌ಸಿ ವೇತನ ಅನುದಾನ ₹5.23 ಕೋಟಿ, ಘನತ್ಯಾಜ್ಯ ವಸ್ತು ನಿರ್ವಹಣೆ ಅನುದಾನ ₹7 ಕೋಟಿ ಹೀಗೆ ಹಲವು ಅನುದಾನಗಳ ಮೇಲೆ ನಿರೀಕ್ಷೆ ಇಡಲಾಗಿದೆ.

ಆರಂಭದಲ್ಲೇ ಆಕ್ಷೇಪ: ಸಭೆ 20 ನಿಮಿಷ ಗಳಷ್ಟು ತಡವಾಗಿ ಆರಂಭವಾಗಿದ್ದಕ್ಕೆ ಎಸ್‌ಡಿಪಿಐ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ‘ಅನಾರೋಗ್ಯದಿಂದ ತಡವಾಗಿ ಸಭೆಗೆ ಬಂದೆ’ ಎಂದು ಅನಿತಾ ಪೂವಯ್ಯ ಅವರು, ‘ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ರಾಜ್ಯ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರ ಭೇಟಿಯಿಂದ ತಡವಾಯಿತು’ ಎಂದು ಪೌರಾಯುಕ್ತ ವಿಜಯ್ ಸಮಜಾಯಿಷಿ ನೀಡಿದರು.

ಬಜೆಟ್‌ನ್ನು ಆಡಳಿತ ಪಕ್ಷದ ಸದಸ್ಯರು ಮುಕ್ತಕಂಠದಿಂದ ಸ್ವಾಗತಿಸಿದರೆ, ಎಸ್‌ಡಿಪಿಐ ಹಾಗೂ ಕಾಂಗ್ರೆಸ್ ಸದಸ್ಯರು ಇದೊಂದು ಅವಾಸ್ತವಿಕ ಬಜೆಟ್ ಎಂದು ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT