ಸೋಮವಾರಪೇಟೆ (ಕೊಡಗು): ಸಮೀಪದ ಐಗೂರು ಗ್ರಾಮದ ಟಾಟಾ ಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿ 9 ಜಾನುವಾರುಗಳ ಕಳೇಬರ ಪತ್ತೆಯಾಗಿದ್ದು ವಿಷಪ್ರಾಶನದ ಶಂಕೆ ವ್ಯಕ್ತವಾಗಿದೆ.
ತೋಟದ ವ್ಯವಸ್ಥಾಪಕರ ಸೂಚನೆಯಂತೆ ಸಿಬ್ಬಂದಿಗಳು, ಜಾನುವಾರುಗಳಿಗೆ ವಿಷ ಹಾಕಿ ಸಾಯಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
‘ಸಂಸ್ಥೆಯ ಸಿಬ್ಬಂದಿಗಳಾದ ದರ್ಶನ್, ಗೋವಿಂದ, ಶ್ರೀನಿವಾಸ, ಮುತ್ತಪ್ಪ ಅವರು ವ್ಯವಸ್ಥಾಪಕರ ನಿರ್ದೇಶನದಂತೆ ತೋಟಕ್ಕೆ ಹೋದ ಜಾನುವಾರುಗಳಿಗೆ ವಿಷವುಣಿಸಿ ಸಾಯಿಸಿದ್ದಾರೆ. ಜಾನುವಾರುಗಳನ್ನು ಕಳೆದುಕೊಂಡಿದ್ದರಿಂದ ತನಗೆ ನಷ್ಟವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿಕಿರಗಂದೂರು ಗ್ರಾಮದ ಕೃಷಿಕ ಎಸ್.ಸಿ.ಗಿರೀಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
‘ತಮ್ಮ ಜಾನುವಾರುಗಳಿಗೂ ಟಾಟಾ ಕಾಫಿ ಎಸ್ಟೇಟ್‌ನವರೇ ವಿಷವುಣಿಸಿರುವ ಸಂಶಯವಿದೆ. ತನಿಖೆ ನಡೆಸಬೇಕು’ ಎಂದು ಐಗೂರು ಗ್ರಾಮದ ಏಳು ಮಂದಿ ಮನವಿ ಮಾಡಿದ್ದಾರೆ.
ಸೋಮವಾರಪೇಟೆ ಪಶು ವೈದ್ಯರು, ಪರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವರದಿ ಬರಬೇಕಿದೆ.
ಎಸ್ಟೇಟ್ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ, ಫೀಲ್ಡ್ ಆಫೀಸರ್, ಟ್ರ್ಯಾಕ್ಟರ್ ಚಾಲಕ ಹಾಗೂ ಮತ್ತೊಬ್ಬ ಸಿಬ್ಬಂದಿಯನ್ನು ಸೋಮವಾರಪೇಟೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.