ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಹುಲಿ ದಾಳಿಗೆ ಹಸು ಬಲಿ

Published 28 ನವೆಂಬರ್ 2023, 6:46 IST
Last Updated 28 ನವೆಂಬರ್ 2023, 6:46 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕಿರುಗೂರು ಮತ್ತೂರಿನ ಕೊಳ್ಳಿಮಾಡ ಕುಟ್ಟಪ್ಪ ಅವರಿಗೆ ಸೇರಿದ ಹಸುವನ್ನು ಸೋಮವಾರ ಹುಲಿ ದಾಳಿ ನಡೆಸಿ ಕೊಂದು ತಿಂದು ಹಾಕಿದೆ.

ಕುಟ್ಟಪ್ಪ ಹಸವನ್ನು ಮೇಯಲೆಂದು ಗದ್ದೆ ಬಯಲಿನಲ್ಲಿ ಕಟ್ಟಿ ಹಾಕಿದ್ದರು. ಅರಣ್ಯದಿಂದ ಬಹಳ ದೂರದಲ್ಲಿರುವ ಕಿರುಗೂರು ಮತ್ತೂರಿನಲ್ಲಿ ಯಾವುದೇ ಹುಲಿ ಭಯವಿರಲಿಲ್ಲ. ಆದರೆ ಕಾಫಿ ತೋಟದ ಒಳಗೆ ನುಸುಳಿ ಬಂದಿರುವ ಹುಲಿ ಹಸುವನ್ನು ಬಲಿ ತಗೆದುಕೊಂಡಿರುವುದು ಈ ಭಾಗದ ಜನತೆಗೆ ತೀವ್ರ ಆತಂಕ ಮೂಡಿಸಿದೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ ಎರಡು ದಿನಗಳ ಅವಧಿಯಲ್ಲಿ ಹುಲಿ ದಾಳಿಗೆ ಎರಡು ಜಾನುವಾರುಗಳನ್ನು ಬಲಿಯಾದಂತಾಗಿದೆ.

ತಿತಿಮತಿ ಆರ್‌ಎಫ್‌ಒ ಗಂಗಾಧರ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿದರು. ಮತ್ತೆ ಎಂದಿನಂತೆ ಈ ಜಾಗದಲ್ಲಿ ಬೋನಿಟ್ಟು, ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಹುಲಿ ಚಲನವಲನವನ್ನು ಪರಿಶೀಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT