ಮಡಿಕೇರಿ: ದಸರಾ ಪ್ರಯುಕ್ತ ನಗರದಲ್ಲಿ ನಡೆದ ಜಿಲ್ಲಾಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಮಡಿಕೇರಿಯ ತಫೀಮಾ ತಾಜ್ ಫ್ರೆಂಡ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಮಂಗಳವಾರ ಸಂಜೆ ನಡೆದಿತ್ತು.
ಕ್ರೀಡಾಕೂಟದಲ್ಲಿ ಮೈಸೂರು, ಮಂಗಳೂರು, ಪುತ್ತೂರು, ಸುಳ್ಯ ಹಾಗೂ ಸ್ಥಳೀಯ ಆಟಗಾರನ್ನೊಳಗೊಂಡಂತೆ 12 ತಂಡಗಳು ಪ್ರಶಸ್ತಿ ಸುತ್ತಿಗಾಗಿ ಸೆಣಸಾಟ ನಡೆಸಿದವು.

ಫೈನಲ್ ಪಂದ್ಯಾದಲ್ಲಿ ತಫೀಮ ತಾಜ ಫ್ರೆಂಡ್ಸ್ ಮಡಿಕೇರಿ ಮತ್ತು ಜೆಬಿಎಸ್‌ಸಿ ಕುಶಾಲನಗರ ತಂಡಗಳು ಪ್ರವೇಶ ಪಡೆಯಿತು.

ಮೊದಲಾರ್ಧದಲ್ಲಿ ಕುಶಾಲನಗರ ತಂಡ 10–1 ಮುನ್ನಡೆ ಸಾಧಿಸಿತು. ನಂತರ, ದ್ವಿತೀಯಾರ್ಧದಲ್ಲಿ ಸೂಪರ್ ರೈಡ್ ಹಾಗೂ ಅತ್ಯತ್ತಮ ಟ್ಯಾಕಲ್‌ಗಳ ಮೂಲಕ ಮಡಿಕೇರಿ ತಂಡ 21–13 ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಆಯಿತು. ಜೆಬಿಎಸ್‌ಸಿ ಕುಶಾಲನಗರ ತಂಡವು, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಶಾಂತಿನಿಕೇತನ(ಎ) ತಂಡ ತೃತೀಯ ಸ್ಥಾನ, ದೇವರಕೊಲ್ಲಿ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡವು. ತೀರ್ಪುಗಾರರಾಗಿ ಆನಂದ್, ಹಂಡ್ಲಿ ಕೃಷ್ಣ, ಪ್ರವೀಣ್, ನಾಗರಾಜು, ತೇಜಸ್, ಪ್ರಸನ್ನ ಕುಮಾರ್, ರಾಘವೇಂದ್ರ ಶೆಟ್ಟಿ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.