ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು | ಕಾಡಾನೆ ಹಾವಳಿ: ಪ್ರತಿಭಟನೆಗೆ ಗ್ರಾಮಸ್ಥರ ನಿರ್ಧಾರ

Published 6 ಜುಲೈ 2024, 6:09 IST
Last Updated 6 ಜುಲೈ 2024, 6:09 IST
ಅಕ್ಷರ ಗಾತ್ರ

ನಾಪೋಕ್ಲು: ಕಾಡಾನೆ ಹಾವಳಿಯಿಂದ ಬೇಸತ್ತ ನರಿಯಂಡಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ಗ್ರಾಮಸ್ಥರು ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಇದೇ 10ಕ್ಕೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಕಾಡಾನೆ ಉಪಟಳದಿಂದ ಪಂಚಾಯತಿ ವ್ಯಾಪ್ತಿಯ ಚೆಯ್ಯಂಡಾಣೆ, ಚೇಲಾವರ, ಕೋಕೇರಿ, ಪಾಲಂಗಾಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು ಕೃಷಿಕರ ಫಸಲು ನಷ್ಟವಾಗುತ್ತಿವೆ.

ಇದೇ ಗ್ರಾಮದ ಪೊಕ್ಕೋಳಂಡ್ರ ಧನೋಜ್ ಅವರ ತೋಟಕ್ಕೆ ನುಗ್ಗಿರುವ ಕಾಡಾನೆಗಳ ಹಿಂಡು ಕೃಷಿ ಪಸಲು ತಿಂದು ಧ್ವಂಸಗೊಳಿಸಿವೆ. ಪದೇಪದೇ ದಾಂದಲೆ ನಡೆಸಿ ಫಸಲು ತುಳಿದು ತಿಂದು ನಷ್ಟ ಉಂಟು ಮಾಡುತ್ತಿವೆ. ನಿರಂತರ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಚೆಯ್ಯಂಡಾಣೆಯಲ್ಲಿ ರಸ್ತೆ ತಡೆ ನಡೆಸಲಿದ್ದಾರೆ.

ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಎಫ್ಒ ಜಗನ್ನಾಥ್ ಕಾಡಾನೆಗಳ ದಾಂದಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಪ್ರತಿಭಟನೆ ಕೈ ಬಿಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದರು.

ನಾಪೋಕ್ಲು ಸಮೀಪದ  ನರಿಯಂದಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆಯ್ಯಂಡಾಣೆಯಲ್ಲಿ ಕಾಡಾನೆಗಳು ಬಾಳೆ ಗಿಡಗಳನ್ನು ಧ್ವಂಸಮಾಡಿರುವುದು.
ನಾಪೋಕ್ಲು ಸಮೀಪದ  ನರಿಯಂದಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆಯ್ಯಂಡಾಣೆಯಲ್ಲಿ ಕಾಡಾನೆಗಳು ಬಾಳೆ ಗಿಡಗಳನ್ನು ಧ್ವಂಸಮಾಡಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT