ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಂಟಿಕೊಪ್ಪ: ಆನೆ ಕಾಡಿಗಟ್ಟಲು ಕಾರ್ಯಾಚರಣೆ

Published 21 ಮೇ 2024, 6:28 IST
Last Updated 21 ಮೇ 2024, 6:28 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ಅಪಾರ‌ ನಷ್ಟ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ನಿರಂತರ ದೂರು ಬಂದ ಹಿನ್ನಲೆ‌ ಸೋಮವಾರ ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯಿತು.

ಸಮೀಪದ ಶಾಂತಿಗೇರಿ, ಅಂದಗೋವೆ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಠಿಕಾಣಿ ಹೂಡಿ ಉಪಟಳ ಕೊಡುತ್ತಿದ್ದ ಏಳು ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯು ಅರಣ್ಯ ಇಲಾಖೆಯಿಂದ ನಡೆಯುತ್ತಿದೆ. ಅಂದಗೋವೆಯ ದೇವರ ಕಾಡಿನೊಳಗೆ ಸೇರಿಕೊಂಡಿರುವ ಕಾಡಾನೆಗಳನ್ನು ಕಲ್ಲೂರು ಮೂಲಕ ಆನೆಕಾಡು ಅಡವಿಗೆ ಅಟ್ಟಲಾಗುತ್ತಿದೆ.

ಈ ಕಾರ್ಯಾಚರಣೆ ನಡೆಯುವ ವ್ಯಾಪ್ತಿಯಲ್ಲಿರುವ ಸ್ಥಳೀಯರು ಎಚ್ಚರ ವಹಿಸುವಂತೆ ಅಂದಗೋವೆ ಬೆಳೆಗಾರರಾದ ದಾಸಂಡ ಲವೀನ್ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT