ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ |ರೈಲ್ವೆ ಬ್ಯಾರಿಕೇಡ್‌ನ ಸಿಮೆಂಟ್ ಪಿಲ್ಲರ್‌ ಪುಡಿಗಟ್ಟಿದ ಕಾಡಾನೆಗಳು!

Published 15 ಮಾರ್ಚ್ 2024, 15:59 IST
Last Updated 15 ಮಾರ್ಚ್ 2024, 15:59 IST
ಅಕ್ಷರ ಗಾತ್ರ

ಸೋಮವಾರಪೇಟೆ (ಕೊಡಗು): ತಾಲ್ಲೂಕಿನ ಕಾಜೂರು ದುರ್ಗಾ ಎಸ್ಟೇಟ್ ಬಳಿಯ ರೈಲ್ವೆ ಬ್ಯಾರಿಕೇಡ್‌ಗೆ ಅಳವಡಿಸಿದ್ದ ಸಿಮೆಂಟ್‌ ಪಿಲ್ಲರ್‌ಗಳನ್ನು ಮುರಿದು 6 ಕಾಡಾನೆಗಳು ಕಾಫಿತೋಟಕ್ಕೆ ದಾಳಿ ನಡೆಸಿವೆ. ಅದನ್ನು ಕಂಡು ತೋಟದ ಕಾರ್ಮಿಕರು ದಿಕ್ಕಾಪಾಲಾಗಿ ಓಡಿ ಜೀವ ಉಳಿಸಿಕೊಂಡಿದ್ದಾರೆ.

ಕಾಜೂರು ಭಾಗದಲ್ಲಿ ಆನೆಕಂದಕ ದಾಟಿ ರಸ್ತೆಗೆ ಬಂದಿದ್ದ ಒಂಟಿ ಸಲಗವು ಕಾಡಿಗಟ್ಟಲು ಪ್ರಯತ್ನಿಸಿದ ಆರ್.ಆರ್.ಟಿ ತಂಡದ ವಾಹನಕ್ಕೆ ತನ್ನ ದಂತದಿಂದ ತಿವಿದು ಹಾನಿಗೊಳಿಸಿದೆ.

ಸೋಮವಾರಪೇಟೆ ಬಳಿಯ ಕಾಜೂರಿನಲ್ಲಿ ಕಂದಕಕ್ಕೆ ದಾಟುತ್ತಿರುವ ಕಾಡಾನೆ
ಸೋಮವಾರಪೇಟೆ ಬಳಿಯ ಕಾಜೂರಿನಲ್ಲಿ ಕಂದಕಕ್ಕೆ ದಾಟುತ್ತಿರುವ ಕಾಡಾನೆ

ಈ ಭಾಗದಲ್ಲಿ ಸೋಲಾರ್ ಬೇಲಿ, ಹ್ಯಾಂಗಿಂಗ್ ಸೋಲಾರ್ ಬೇಲಿ, ಕಂದಕ ಹೀಗೆ ಆನೆ ದಾಳಿ ನಿಯಂತ್ರಣಕ್ಕೆ ಏನೆಲ್ಲ ಕ್ರಮಗಳನ್ನು ಕೈಗೊಂಡರೂ ಆನೆಗಳು ನಿರಂತರವಾಗಿ ಅವುಗಳನ್ನೆಲ್ಲ ಭೇದಿಸಿ ತೋಟಗಳು ಹಾಗೂ ರಸ್ತೆಗೆ ಬರುತ್ತಿದ್ದು, ಜನರ ಆತಂಕವನ್ನು ಹೆಚ್ಚಿಸಿದೆ.

ಸೋಮವಾರಪೇಟೆ ಬಳಿಯ ಕಾಜೂರಿನಲ್ಲಿ ಕಂದಕ ದಾಟಿ ಮುಖ್ಯ ರಸ್ತೆಯತ್ತ ಬರುತ್ತಿರುವ ಕಾಡಾನೆ
ಸೋಮವಾರಪೇಟೆ ಬಳಿಯ ಕಾಜೂರಿನಲ್ಲಿ ಕಂದಕ ದಾಟಿ ಮುಖ್ಯ ರಸ್ತೆಯತ್ತ ಬರುತ್ತಿರುವ ಕಾಡಾನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT