ಮಡಿಕೇರಿ: ವ್ಯಕ್ತಿಯೊಬ್ಬರ ಕಣ್ಣಿನಲ್ಲಿದ್ದ 10 ಸೆಂ.ಮೀ ಉದ್ದದ ಹುಳವೊಂದನ್ನು ಇಲ್ಲಿನ ಇಕ್ಷಾ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎ.ಜಿ.ಚಿಣ್ಣಪ್ಪ ಹಾಗೂ ಡಾ.ಗುರುಪ್ರಸಾದ್ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದೆ.

‘ಕೊಡಗು ಜಿಲ್ಲೆಯ 64 ವರ್ಷದ ಮಾಜಿ ಸೈನಿಕರೊಬ್ಬರಿಗೆ ಎಡಗಣ್ಣಿನಲ್ಲಿ ತುರಿಕೆ ಮತ್ತು ಊತದ ಸಮಸ್ಯೆಯಿತ್ತು. ತಪಾಸಣೆ ವೇಳೆ ಕಣ್ಣಿನ ಹೊರಪದರದಲ್ಲಿ ಹುಳ ಕಾಣಿಸಿತ್ತು.

‘ಲೋವಾ ಲೋವಾ’ ಎಂದು ಕರೆಯಲಾಗುವ ಹುಳ ಪ್ರಾಣಿಗಳ ಮೈಮೇಲಿರುತ್ತದೆ. ಅದರ ಲಾರ್ವಗಳು ಸೊಳ್ಳೆ ಮತ್ತು ನೊಣಗಳ ಮೂಲಕ ಮನುಷ್ಯನ ರಕ್ತ ಸೇರುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರ ರಕ್ತದಲ್ಲಿ ಚಲಿಸಿ ಕಣ್ಣು, ಮಿದುಳು ಸೇರಿ ಬೆಳೆಯಲಿಎ.

‘ಹುಳ ಮಿದುಳನ್ನು ಪ್ರವೇಶಿಸಿದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಸಕಾಲದಲ್ಲಿ ಶಸ್ತ್ರಚಿಕಿತ್ಸೆಯಾಗದೇ ಇದ್ದಿದ್ದರೆ ಕಣ್ಣನ್ನೇ ಕಳೆದುಕೊಳ್ಳುವ ಸಂಭವವಿತ್ತು’ ಎಂದು ಡಾ.ಎ.ಜಿ.ಚಿಣ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.