ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ | ಕಾಫಿ ತೋಟಕ್ಕೆ ಬೆಂಕಿ; ಅಪಾರ ನಷ್ಟ

Published 16 ಏಪ್ರಿಲ್ 2024, 4:28 IST
Last Updated 16 ಏಪ್ರಿಲ್ 2024, 4:28 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸಮೀಪದ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ಕಲ್ಲಾರೆ ಎಂಬಲ್ಲಿ ಕಾಫಿ ತೋಟಕ್ಕೆ ಸೋಮವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದೆ.

ಗ್ರಾಮದ ಮಲ್ಲಿಕಾರ್ಜುನ ಮತ್ತು ಚಂದ್ರು ಅವರ ಕಾಫಿ ತೋಟಕ್ಕೆ ಸೋಮವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಬೆಂಕಿ ತಗುಲಿದೆ. ಮಳೆಯಿಲ್ಲದೆ, ಒಣಗಿ ನಿಂತಿದ್ದ ಮರಗಳಿಗೆ ಒಮ್ಮೆಲೇ ಬೆಂಕಿ ಹತ್ತಿಕೊಂಡಿದ್ದು, ಕಾಫಿ ತೋಟದ ಅಕ್ಕಪಕ್ಕ ಇದ್ದ ಮನೆಗಳಿಗೂ ಬೆಂಕಿಯ ಕಿಡಿಗಳು ತಾಗಿವೆ. ತಕ್ಷಣ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

ಸೋಮವಾರಪೇಟೆ ಸಮೀಪ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ಕಲ್ಲಾರೆ ಎಂಬಲ್ಲಿ ಕಾಫಿ ತೋಟಕ್ಕೆ ಸೋಮವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿಯನ್ನು ಆಗ್ನಿಶಾಮಕ ದಳದವರು ನಂದಿಸಿದರು.
ಸೋಮವಾರಪೇಟೆ ಸಮೀಪ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ಕಲ್ಲಾರೆ ಎಂಬಲ್ಲಿ ಕಾಫಿ ತೋಟಕ್ಕೆ ಸೋಮವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿಯನ್ನು ಆಗ್ನಿಶಾಮಕ ದಳದವರು ನಂದಿಸಿದರು.

ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಅಗ್ನಿಶಾಮಕ ಇಲಾಖೆಯ ಪಿ.ಎಸ್.ಸುರೇಶ್, ಪಿ.ಈಶ್ವರ್, ವಿನಯ್, ನಂದೀಶ್, ಪ್ರಶಾಂತ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT