ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ| ‘ಗಾಂಧೀಜಿ ವಿಚಾರಧಾರೆ ಸ್ಮರಣೀಯ’

ಸುಂಚಿಕೊಪ್ಪದಲ್ಲಿ ಪ್ರಾಚಾರ್ಯ ಕುಮಾರ ಅಭಿಮತ
Published 4 ಅಕ್ಟೋಬರ್ 2023, 6:50 IST
Last Updated 4 ಅಕ್ಟೋಬರ್ 2023, 6:50 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ‘ಮಹಾತ್ಮ ಗಾಂಧೀಜಿ ಕೇವಲ ಪಠ್ಯ ಪುಸ್ತಕದ ಒಂದು ಪಾಠಕ್ಕೆ ಸೀಮಿತವಾಗದೆ ಅವರ ವಿಚಾರ ಧಾರೆಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ದೊಡ್ಡ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹು’ ಎಂದು ಮಡಿಕೇರಿ ಸರಸ್ವತಿ ಡಿಎಡ್ ಕಾಲೇಜಿನ ಪ್ರಾಚಾರ್ಯ ಕುಮಾರ ಹೇಳಿದರು.

ಸಮೀಪದ ಗುಂಡುಗುಟ್ಟಿಯ ಸ್ವರ್ಣಾಲಯದಲ್ಲಿ ಸುಂಟಿಕೊಪ್ಪ ಮಹಾತ್ಮ ಮೆಮೊರಿಯಲ್ ಟ್ರಸ್ಟ್‌‌‌ನಿಂದ ಇತ್ತೀಚೆಗೆ  ಏರ್ಪಿಡಿಸಿದ್ದ  ಗಾಂಧಿ ಜಯಂತಿಯಲ್ಲಿ ಮಾತನಾಡಿದರು.

‘ಮಹಾತ್ಮಗಾಂಧಿ ಕರ್ನಾಟಕಕ್ಕೆ ಬರೋಬರಿ 17 ಬಾರೀ ಭೇಟಿ ನೀಡಿದ್ದು, ಅದರಲ್ಲಿ 5 ಬಾರಿ ಬೆಂಗಳೂರಿಗೆ ಬಂದಿದ್ದರು.  ನಂದಿಬೆಟ್ಟ ಅವರಿಗೆ ಅತ್ಯಂತ ಪ್ರಿಯವಾದ ಜಾಗ. ತಮ್ಮ ಆರೋಗ್ಯ ಸುಧಾರಣೆ ಸಂದರ್ಭದಲ್ಲಿ ಒಂದು ತಿಂಗಳು ಪಶು ಸಾಕಾಣಿಕೆ ಕೈಗೊಂಡು ಅದರ ಮಹತ್ವ ಸಾರಿದ ಆಗ್ರಗಣ್ಯರು.  ಅವರ ಕಾಲದಲ್ಲಿ ಇಂಗ್ಲೆಡಿನ ವಿನ್‌ಸ್ಟನ್ ಚರ್ಚಿಲ್, ಆಮೇರಿಕಾದ ಅಧ್ಯಕ್ಷರಾಗಿದ್ದ ರೂಸವೆಲ್ಟ್, ರಷ್ಯಾದ ನಾಯಕರಾಗಿದ್ದ ಲೆನಿನ್ ಗಾಂಧಿ ಅವರನ್ನು ಸರಿಗಟ್ಟಲು ಆಗಲಿಲ್ಲ. ವಿಶ್ವದ ಸರಿಸುಮಾರು 800 ಕೋಟಿ ಜನ ಇಂದಿಗೂ ಸ್ಮರಿಸುತ್ತಾರೆ ಎಂದರೆ ಅವರು ವಿಶ್ವ ಮಾನವತ್ವ ವ್ಯಕ್ತಿತ್ವ ಹೊಂದಿರುವುದಕ್ಕೆ ಸಾಕ್ಷಿ’ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಮುಕುಲ್ ಮಹೀಂದ್ರ, ‘ಗಾಂಧಿ ಬಂದ ಮತ್ತು ತಂಗಿದ್ದ ಸ್ಥಳವಾದ ಗುಂಡುಗುಟ್ಟಿ ಸ್ವರ್ಣಾಲಯವನ್ನು ಮುಂದಿನ ತಲೆಮಾರಿಗೂ ಪರಿಚಯಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯಪ್ರವೃತ್ತರಾಗಿದ್ದು ಎಲ್ಲರ ಸಹಕಾರ ಮುಖ್ಯ’ ಎಂದು ಹೇಳಿದರು.

ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಪಿ.ಉಷಾ ಮಾತನಾಡಿ, ಗ್ರಾಮ ಪಂಚಾಯಿತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬೆಂಗಳೂರು ಡಿವೈಎಸ್‌ಪಿ ಕರೀಂ ರವಾತರ್ ಮಾತನಾಡಿ, ‘ಈ ಟ್ರಸ್ಟ್ ಉದ್ದೇಶವನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಸ್ಥಳವು ಪ್ರಮುಖ ಗಾಂಧಿ ವಿಚಾರ ಧಾರೆಗಳ ಆಧ್ಯಯನ ಕೇಂದ್ರವಾಗಿ ರೂಪುಗೊಳ್ಳಲಿ’ ಎಂದು ಹಾರೈಸಿದರು.

ಕಾರ್ಯಕ್ರಮದ ಮೊದಲಿಗೆ ಮಾದಾಪುರ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಘುಪತಿ ರಾಘವ ರಾಜರಾಂ ಭಜನೆ ಹಾಡಿದರು.

ಟ್ರಸ್ಟ್ ಸಂಚಾಲಕ ಎಂ.ಇ.ಮೊದ್ದೀನ್, ಕಾರ್ಯದರ್ಶಿ ಡೆನ್ನಿಸ್ ಡಿಸೋಜ ಟ್ರಸ್ಟಿ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಬಿಜಿವಿ ಕುಮಾರ್, ಟ್ರಸ್ಟ್ ಕೋಶಾಧಿಕಾರಿ ರಮೇಶ್ ಪಿಳ್ಳೆ, ಟ್ರಸ್ಟಿ ಜಾಹಿದ್‌ಆಹ್ಮದ್, ಸಾಹಿತಿ ವಹೀದ್ ಜಾನ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಇದ್ದರು.

ಕಾರ್ಯಕ್ರಮದ ಕೊನೆಗೆ ಆಗಮಿಸಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಟ್ರಸ್ಟ್ ಮನವಿ ಸಲ್ಲಿಸಿತು.
ಈ ಬಗ್ಗೆ ಮಾತನಾಡಿದ ಅವರು, ಸರ್ಕಾರದ ಮಟ್ಟದಲ್ಲಿ ಸಾಧ್ಯವಿರುವ ಎಲ್ಲಾ ನೆರವನ್ನು ನೀಡಲು ಪ್ರಯತ್ನಿಸುವುದಾಗಿ ಹೇಳಿದರು.

 ಶಾಸಕರು ಸ್ವರ್ಣಾಲಯ ವೀಕ್ಷೀಸಿದರಲ್ಲದೆ, ಮುಕುಲ್ ಮಹೀಂದ್ರ ಮತ್ತು ಲೆಫ್ಟಿನೆಂಟ್ ಕರ್ನಲ್ ಬಿಜಿವಿ ಕುಮಾರ್ ಅವರಿಂದ ಗಾಂಧೀಜಿ ಭೇಟಿ ನೀಡಿದ ಮನೆ ಕುರಿತು ಮಾಹಿತಿ ಪಡೆದು ಮೆಚ್ಚುಗೆ ಸೂಚಿಸಿದರು.  ಗಾಂಧೀಜಿ ಭಾವಚಿತ್ರಕ್ಕೆ ಪುಷ್ಟಾರ್ಚನೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಸುಂಟಿಕೊಪ್ಪ ಸಮೀಪದ‌ ಗುಂಡುಗುಟ್ಟಿ ಸ್ವರ್ಣಾಲಯಕ್ಕೆ ಭೇಟಿ‌ನೀಡಿದ್ದ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಮಾಹಿತಿಯನ್ನು ಶಾಸಕ ಡಾ.ಮಂತರ್ ಗೌಡ ಪಡೆದುಕೊಂಡರು.
ಸುಂಟಿಕೊಪ್ಪ ಸಮೀಪದ‌ ಗುಂಡುಗುಟ್ಟಿ ಸ್ವರ್ಣಾಲಯಕ್ಕೆ ಭೇಟಿ‌ನೀಡಿದ್ದ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಮಾಹಿತಿಯನ್ನು ಶಾಸಕ ಡಾ.ಮಂತರ್ ಗೌಡ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT