ಗೋಣಿಕೊಪ್ಪಲು (ಮಡಿಕೇರಿ): ಗೋಣಿಕೊಪ್ಪಲು ದಸರೆಯು ಸ್ತಬ್ದಚಿತ್ರ ಮೆರವಣಿಗೆಯೊಂದಿಗೆ ಆರಂಭವಾಗಿದೆ.
ದಸರಾ ಸ್ತಬ್ದಚಿತ್ರ ಮೆರವಣಿಗೆಯಲ್ಲಿ ಒಟ್ಟು 12 ಸ್ತಬ್ದಚಿತ್ರಗಳು ಭಾಗಿಯಾಗಿವೆ. 5 ಶಿಕ್ಷಣ ಇಲಾಖೆ, ಆರೋಗ್ಯ, ನೀರಾವರಿ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ಯೋಜನೆಗಳ ಕುರಿತು ಸ್ತಬ್ಧಚಿತ್ರ ರೂಪಿಸಿವೆ.
ಉಳಿದಂತೆ, 6 ಸ್ತಬ್ದಚಿತ್ರಗಳನ್ನು ವಿವಿಧ ಸಂಘ, ಸಂಸ್ಥೆಗಳು ರೂಪಿಸಿವೆ. ಭಗತ್ ಸಿಂಗ್ ಯುವಕ ಸಂಘವು ಬೆಂಗಳೂರಿನಲ್ಲಿ ಈಚೆಗೆ ನಡೆದ ಪಟಾಕಿ ದುರಂತದ ಭೀಕರ ಚಿತ್ರಣವನ್ನು ಸ್ತಬ್ದಚಿತ್ರದಲ್ಲಿ ತಂದಿದ್ದರೆ, ಸರ್ವಂ ಸಂಘದವರು ಚಂದ್ರಯಾನ –3 ಚಿತ್ರಣವನ್ನು ಸ್ತಬ್ದಚಿತ್ರದಲ್ಲಿ ತಂದಿದೆ. ಜೆಬಿ ಪುರುಷ ಸ್ವಸಹಾಯ ಸಂಘದವು ಬುಡಕಟ್ಟು ಮಕ್ಕಳು ಶಾಲೆಗೆ ಕರೆದು ಕೊಂಡು ಬರುವ ಕುರಿತು ಸ್ತಬ್ದಚಿತ್ರ ರೂಪಿಸಿದೆ.
‘ರುದ್ರ ಬಾಯ್ಸ್ ಚನ್ನಂಗೊಳ್ಳಿ’ ತಂಡವು ಪ್ಲಾಸ್ಟಿಕ್ ದುಷ್ಪರಿಣಾಮ ಕುರಿತು ಪರಿಣಾಮಕಾರಿಯಾಗಿ ಸ್ತಬ್ದಚಿತ್ರ ರೂಪಿಸಿತ್ತು. ಇದರ ಜೊತೆಗೆ ಪುತ್ತೂರಿನ ಗಾರುಡಿ ಬೊಂಬೆಗಳು ಸೇರಿದಂತೆ ಇನ್ನಿತರ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.