ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಜಪೇಟೆ | ಗಣೇಶ ವಿಸರ್ಜನೆ: ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ

Published : 28 ಸೆಪ್ಟೆಂಬರ್ 2023, 6:42 IST
Last Updated : 28 ಸೆಪ್ಟೆಂಬರ್ 2023, 6:42 IST
ಫಾಲೋ ಮಾಡಿ
Comments

ವಿರಾಜಪೇಟೆ: ಪಟ್ಟಣದಲ್ಲಿ‌ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವದ ಅಂಗವಾಗಿ ಸೆ. 28ರಂದು ಶೋಭಾಯಾತ್ರೆ ನಡೆಯಲಿದ್ದು, ಅಂದು ಮಧ್ಯಾಹ್ನ 3 ಗಂಟೆಯಿಂದ ಸೆ.29ರ ಬೆಳಿಗ್ಗೆ 10 ಗಂಟೆಯವರೆಗೆ ಪಟ್ಟಣದ ವ್ಯಾಪ್ತಿಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ.

ಪೆರುಂಬಾಡಿ‌ ಕಡೆಯಿಂದ ಬರುವ ವಾಹನಗಳನ್ನು ತಹಶೀಲ್ದಾರ್ ಕಚೇರಿಯ ಮುಂಭಾಗದಿಂದ ಆರ್ಜಿಯ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ‌ ನಿಲುಗಡೆ ಮಾಡಬೇಕು. ಸಿದ್ದಾಪುರ ಕಡೆಯಿಂದ ಮೆರವಣಿಗೆ ನೋಡಲು ಬರುವ ವಾಹನಗಳು ಮಗ್ಗುಲ ಜಂಕ್ಷನ್ ಹಾಗೂ ರವಿರಾಜ್ ಗ್ಯಾಸ್ ಏಜೆನ್ಸಿ‌ ಬಳಿಯಿಂದ ಐಮಂಗಲಕ್ಕೆ ತೆರಳುವ ರಸ್ತೆಯ ಎಡ ಬದಿಯಲ್ಲಿ ನಿಲುಗಡೆ ಮಾಡಬೇಕು.

ಗೋಣಿಕೊಪ್ಪಲು ಕಡೆಯಿಂದ ಮೆರವಣಿಗೆ ನೋಡಲು ಬರುವವರ ವಾಹನಗಳನ್ನು ಪಟ್ಟಣದ ಪಂಜರುಪೇಟೆಯ ಸರ್ವೋದಯ ವಿದ್ಯಾಸಂಸ್ಥೆಯ ಬಳಿಯಿಂದ ಕಾವೇರಿ ಕಾಲೇಜಿನ ಕಡೆಗೆ ತೆರಳುವ ರಸ್ತೆಯ ಎಡ ಬದಿಯಲ್ಲಿ ಮಾತ್ರ ನಿಲುಗಡೆಗೊಳಿಸಬೇಕು.

ಬೇಟೋಳಿ, ಗುಂಡಿಕೆರೆ, ಚಿಟ್ಟಡೆ ಕಡೆಯಿಂದ ಮಹಿಳಾ ಸಮಾಜ ರಸ್ತೆಯ ಮೂಲಕ ಮೆರವಣಿಗೆ ನೋಡಲು ಬರುವವರ ವಾಹನಗಳನ್ನು ಮಹಿಳಾ ಸಮಾಜ ರಸ್ತೆಯ ಎಡ ಬದಿಯಲ್ಲಿ‌ ಮಾತ್ರ ನಿಲ್ಲಿಸಬೇಕು.

ಮಾಕುಟ್ಟ ಕಡೆಯಿಂದ ಗೋಣಿಕೊಪ್ಪದ ಕಡೆ ಅಥವಾ ಸಿದ್ದಾಪುರ ಕಡೆಗಳಿಗೆ ಹೋಗುವ ವಾಹನಗಳು ಪೆರುಂಬಾಡಿ- ಬಾಳುಗೋಡು- ಬಿಟ್ಟಂಗಾಲ- ಕೈಕೇರಿ ಮೂಲಕ ಪಾಲಿಬೆಟ್ಟ ಹಾಗೂ ಸಿದ್ದಾಪುರಕ್ಕೆ ತೆರಳಬೇಕು. ಸಿದ್ದಾಪುರದ ಕಡೆಯಿಂದ ಮಾಕುಟ್ಟ- ಕೇರಳಕ್ಕೆ ಸಾಗುವ ವಾಹನಗಳು ಕೈಕೇರಿ-ಬಿಟ್ಟಂಗಾಲ-ಬಾಳುಗೋಡು-ಪೆರುಂಬಾಡಿ ಮೂಲಕ ಸಂಚರಿಸಬೇಕು.

ಮಡಿಕೇರಿಯಿಂದ ಮಾಕುಟ್ಟ ಮೂಲಕ ಕೇರಳಕ್ಕೆ ಹೋಗುವ ವಾಹನಗಳು ಸಿದ್ದಾಪುರ-ಕೈಕೇರಿ-ಬಿಟ್ಟಂಗಾಲ-ಬಾಳುಗೋಡು-ಪೆರುಂಬಾಡಿ ಮೂಲಕ ಮಡಿಕೇರಿ ಕಡೆಯಿಂದ ಮೈಸೂರು-ಬೆಂಗಳೂರಿಗೆ ತೆರಳುವ ವಾಹನಗಳು ಸಿದ್ದಾಪುರ ಮಾರ್ಗವಾಗಿ ಗೋಣಿಕೊಪ್ಪಲು ಮೂಲಕ ಸಂಚರಿಸಬೇಕು. ಬೆಂಗಳೂರು-ಮೈಸೂರಿನಿಂದ ಬರುವ ವಾಹನಗಳು ಗೋಣಿಕೊಪ್ಪಲು-ಸಿದ್ದಾಪುರ ಮಾರ್ಗವಾಗಿ ಮಡಿಕೇರಿಯ ಕಡೆ ಸಂಚರಿಸಬೇಕು.

ಪಟ್ಟಣದ ತೆಲುಗರ ಬೀದಿ, ದೊಡ್ಡಟ್ಟಿ ಚೌಕಿ, ಅಪ್ಪಯ್ಯ ಸ್ವಾಮಿ ರಸ್ತೆ, ದಖನಿ ಮೊಹಲ್ಲಾ, ಅರಸು ನಗರ ರಸ್ತೆ, ಎಫ್.ಎಂ.ಸಿ ರಸ್ತೆ, ಗಡಿಯಾರ ಕಂಬ, ಮಲಬಾರ್ ರಸ್ತೆ, ಗೌರಿಕೆರೆ, ಮೀನುಪೇಟೆ, ದೊಡ್ಡಟ್ಟಿ ಚೌಕಿಯಿಂದ ಪಂಜರುಪೇಟೆವರೆಗೆ, ಮಗ್ಗುಲ‌ ಜಂಕ್ಷನ್‌ನಿಂದ ದಖನಿ‌ ಮೊಹಲ್ಲಾದವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT