ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ರಭಸ ಮುಂದುವರಿದಿದೆ.

ಗುರುವಾರ ಮಧ್ಯಾಹ್ನದ ನಂತರ ರಾತ್ರಿಯವರೆಗೂ ಮಳೆ ಮತ್ತು ಗಾಳಿ ಶಾಂತವಾಗಿತ್ತು. ಸದ್ಯಕ್ಕೆ ಮಳೆ ಕಡಿಮೆಯಾಯಿತೆಂದು ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಕೆಲವು ಗಂಟೆಗಳ ಬಿಡುವಿನ ನಂತರ ತಡರಾತ್ರಿ ಮಳೆ ಆರಂಭವಾಯಿತು.

ಶುಕ್ರವಾರ ಬೆಳಿಗ್ಗೆಯಿಂದಲೂ ಮಡಿಕೇರಿಯಲ್ಲಿ ಮಳೆ ಸುರಿಯಲಾರಂಭಿಸಿತು. ಶಾಲೆಗೆ ಮಕ್ಕಳು ಹೋಗುವ ಅವಧಿಯಲ್ಲಿ ಮಳೆ ಇನ್ನಷ್ಟು ಬಿರುಸು ಪಡೆಯಿತು. ನಂತರ, ದಿನವಿಡೀ ಬಿಟ್ಟು ಬಿಟ್ಟು ರಭಸದ ಮಳೆ ಸುರಿಯಿತು. ಸಂಜೆ ಶಾಲೆ ಅವಧಿಯ ಮುಗಿಯುವ ಸಮಯದಲ್ಲಿ ಭಾರಿ ಮಳೆಯೇ ಸುರಿದು ವಿದ್ಯಾರ್ಥಿಗಳು ಪರದಾಡಿದರು.

ಸಂಜೆ ಸುರಿದ ಭಾರಿ ಮಳೆಗೆ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಿತು. ಜೋರಾಗಿ ಬೀಸುತ್ತಿದ್ದ ಗಾಳಿಯಿಂದ ಕೊಡೆಯನ್ನು ಹಿಡಿಲಾರದ ಸ್ಥಿತಿ ಇತ್ತು. ದಿನವಿಡೀ ನಗರದಲ್ಲಿ ಮಂಜು ಮತ್ತು ದಟ್ಟ ಮೋಡ ಕವಿದ ವಾತಾವರಣ ಇತ್ತು. ಮಡಿಕೇರಿಯಲ್ಲಿ ಶುಕ್ರವಾರ ಸಂತೆ ಇತ್ತು. ಸಂತೆ ವ್ಯಾಪಾರಕ್ಕೂ ಮಳೆಯಿಂದ ಅಡ್ಡಿಯಾಯಿತು. ಬೀಸುತ್ತಿರುವ ಶೀತಗಾಳಿಯಿಂದ ಚಳಿ ಮತ್ತಷ್ಟು ಹೆಚ್ಚಿದೆ.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ 3 ಸೆಂ.ಮೀನಷ್ಟು ಸರಾಸರಿ ಮಳೆ ಸುರಿದಿದೆ. ವಿರಾಜಪೇಟೆ, ತಾಲ್ಲೂಕಿನಲ್ಲಿ 1 ಸೆಂ.ಮೀ, ಪೊನ್ನಂಪೇಟೆ ತಾಲ್ಲೂಕಿನಲ್ಲಿ 1.5, ಸೋಮವಾರಪೇಟೆ ತಾಲ್ಲೂಕಿನಲ್ಲಿ 3 ಸೆಂ.ಮೀನಷ್ಟು ಮಳೆಯಾಗಿದೆ.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ: ಮಡಿಕೇರಿ ಕಸಬಾ 3 ಸೆಂ.ಮೀ, ನಾಪೋಕ್ಲು 1, ಸಂಪಾಜೆ 3, ಭಾಗಮಂಡಲ 3.4, ವಿರಾಜಪೇಟೆ 1, ಅಮ್ಮತ್ತಿ 1.2, ಹುದಿಕೇರಿ 2, ಶ್ರೀಮಂಗಲ 1.9, ಬಾಳೆಲೆ 1, ಸೋಮವಾರಪೇಟೆ 2.3, ಶನಿವಾರಸಂತೆ 3, ಶಾಂತಳ್ಳಿ 6, ಕೊಡ್ಲಿಪೇಟೆ 1 ಸೆಂ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.