ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ‌ | ಹೂಳು ತೆಗೆಯದ ಗ್ರಾಮ ಪಂಚಾಯಿತಿ: ಬತ್ತಿದ ಹೆಬ್ಬಾಲೆ ದೊಡ್ಡ ಕೆರೆ

Published 20 ಏಪ್ರಿಲ್ 2024, 3:20 IST
Last Updated 20 ಏಪ್ರಿಲ್ 2024, 3:20 IST
ಅಕ್ಷರ ಗಾತ್ರ

ಕುಶಾಲನಗರ: ಸುತ್ತಮುತ್ತಲ ಗ್ರಾಮಗಳ ರೈತರ ಜಮೀನಿಗೆ ನೀರುಣಿಸುತ್ತಿದ್ದ ದೊಡ್ಡಕೆರೆ ಬತ್ತಿಹೋಗಿದೆ.

ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೆರೆ ಎಂದೇ ಪ್ರಸಿದ್ದಿ ಪಡೆದಿರುವ ಈ ಕೆರೆ ಹೂಳು ತುಂಬಿ ಕೆರೆಯ ಸುತ್ತ ಪೊದೆ ಅವರಿಸಿಕೊಂಡಿದೆ. ಕೆರೆಯಲ್ಲಿ ಜಲ ಬತ್ತಿ ಸುತ್ತಮುತ್ತಲಿನ ರೈತರ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತೆ ಆಗಿದೆ. ಕೆರೆ ತುಂಬ ಹೂಳು ತುಂಬಿದ್ದು, ಗ್ರಾಮ ಪಂಚಾಯಿತಿ ವತಿಯಿಂದಲೂ ಈ ಕೆರೆಯ ಹೂಳು ತೆಗೆಯುತ್ತಿಲ್ಲ. ರೈತರು ಸ್ವಂತ ಖರ್ಚಿನಲ್ಲಿ ನಾವೇ ಊಳು ತೆಗಿತೀವಿ ಎಂದರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ಸಹಕಾರ ನೀಡದೆ ಅಡ್ಡಿಪಡಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕೆರೆ ಹೂಳು ತೆಗೆದು ಅಭಿವೃದ್ಧಿಪಡಿಸುತ್ತೇವೆ ಎಂದು ಮುಂದಾದರೆ ಇದಕ್ಕೂ ಅಸ್ಪದ ನೀಡದೆ ಹೂಳು ತೆಗೆಯುವ ಜೆಸಿಬಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಅಧ್ಯಕ್ಷೆ ಮೀನಾಕುಮಾರಿ ಉಡಾಫೆಯಿಂದ ಮಾತನಾಡುತ್ತಾರೆ ಎಂದು ಹೆಬ್ಬಾಲೆ ನೀರು ಬಳಕೆದಾರರ ಸಂಘದ ನಿರ್ದೇಶಕ ಮಧುಸೂಧನ್ ದೂರಿದರು.

ಈ ದೊಡ್ಡ ಅಕೆರೆಯಲ್ಲಿ ಹಿಂದೆ ವರ್ಷ ಪೂರ್ತಿ ನೀರು ತುಂಬಿರುತ್ತಿತ್ತು. ರೈತರ ಜಮೀನಿಗೆ, ಜಾನುವಾರುಗಳಿಗೆ ಹಾಗೂ ಪಕ್ಷಿ– ಪ್ರಾಣಿಗಳಿಗೆ ಜೀವಸಲೆಯಾಗಿತ್ತು. ಕೆರೆ ಹೂಳು ತೆಗೆಯದ ಹಿನ್ನೆಲೆಯಲ್ಲಿ ಇದೀಗ ದೊಡ್ಡ ಕೆರೆ ಹೋಗಿ ಸಣ್ಣಕೆರೆಯಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಈ ಕೆರೆಯನ್ನು ಅಭಿವೃದ್ಧಿಪಡಿಸಲು ಪಂಚಾಯಿತಿ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ರೈತರಿಗೆ ಹೂಳು ತೆಗೆದು ಅಭಿವೃದ್ಧಿ ಪಡಿಸಲು ಅವಕಾಶ ಮಾಡಿಕೊಡಬೇಕು ಎಂದು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಧುಸೂದನ್ ಎಚ್ಚರಿಕೆ ನೀಡಿದರು.

ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಹದೇವ್, ವಿದ್ಯಾವರ್ಧಕ ಸಂಘದ ನಿರ್ದೇಶಕ ಮಂಜುನಾಥ್, ಗ್ರಾಮದ ರೈತರಾದ ಆನಂದ,ರಾಜು, ತನು ಕುಮಾರ್, ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT