ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿ: ಕುಪ್ಪಂಡ ತಂಡಕ್ಕೆ ಭರ್ಜರಿ ಜಯ

Published 21 ಏಪ್ರಿಲ್ 2024, 5:51 IST
Last Updated 21 ಏಪ್ರಿಲ್ 2024, 5:51 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು ಜಿಲ್ಲೆ): ಗೋಲುಗಳ ಸುರಿಮಳೆಗರೆದ ಕುಪ್ಪಂಡ ತಂಡವು ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯಲ್ಲಿ ಶನಿವಾರ ಮೇರಿಯಂಡ ತಂಡದ ಎದುರು 7–3 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು.

ವಿಜೇತ ತಂಡದ ‍‍ಪರ ಸೋಮಯ್ಯ 4, ಧ್ಯಾನ್ 2 ಹಾಗೂ ಚೆಂಗಪ್ಪ 1 ಗೋಲು ದಾಖಲಿಸಿದರು. ಮೇರಿಯಂಡ ತಂಡದ ಪರ ನಿಖಿಲ್, ಪವನ್ ಹಾಗೂ ಕರುಣ್ ತಲಾ ಒಂದು ಗಳಿಸಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗಲಿಲ್ಲ.

ಮತ್ತೊಂದು ಪಂದ್ಯದಲ್ಲಿ ಕರಿನೆರವಂಡ ತಂಡವು ಪಾಡೆಯಂಡ ವಿರುದ್ಧ 6- 1 ಅಂತರದಿಂದ ಗೆದ್ದು ಬೀಗಿತು.

ದಿನದ ಇತರೆ ಪಂದ್ಯಗಳಲ್ಲಿ ಮೇಚಿಯಂಡ ತಂಡವು ಕುಲ್ಲಚಂಡ ವಿರುದ್ಧ 2-1 ಅಂತರದಿಂದ; ಕಲಿಯಂಡ ತಂಡವು ಕನ್ನಂಡ ವಿರುದ್ಧ 1-0 ಅಂತರದಿಂದ; ಮಾತ್ರಂಡ ತಂಡವು ಕೊಟ್ಟಂಗಡ ವಿರುದ್ಧ 4-0 ಅಂತರದಿಂದ; ಚೇಂದಂಡ ತಂಡವು ಚೀಯಕಪೂವಂಡ ವಿರುದ್ಧ 4-0 ಅಂತರದಿಂದ; ನಾಪಂಡ ತಂಡವು ನಂಬುಡಮಾಡ ವಿರುದ್ಧ 3-0 ಅಂತರದಿಂದ ಗೆಲುವು ಪಡೆಯಿತು.

ಬೊವ್ವೇರಿಯಂಡ ತಂಡವು ಅಪ್ಪನೆರವಂಡ ವಿರುದ್ಧ 4-1 ಅಂತರದಿಂದ; ಚೇಂದಿರ ತಂಡವು ಸಣ್ಣವಂಡ ವಿರುದ್ಧ 3-1 ಅಂತರದಿಂದ; ಐಚೆಟ್ಟಿರ ತಂಡವು ಕೊಳ್ಳಿರ ವಿರುದ್ಧ 3-2 ಅಂತರದಿಂದ; ಕೇಲೆಟಿರ ತಂಡವು ಕಡೇಮಾಡ ವಿರುದ್ಧ 4-2 ಅಂತರದಿಂದ; ಚೋಯಮಾಡಂಡ ತಂಡವು ಚೆರುಮಂದಂಡ ವಿರುದ್ಧ 2–0 ಅಂತರದಿಂದ; ನೆರವಂಡ ತಂಡವು ಬೊಟ್ಟೋಳಂಡ ವಿರುದ್ಧ 3-1 ಅಂತರದಿಂದ ಜಯ ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT