ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂರ್ಗ್ ವಾರಿಯರ್ಸ್, ಎಲೈಟ್ ಕ್ರಿಕೆಟ್ ಕ್ಲಬ್ ತಂಡಗಳಿಗೆ ಭರ್ಜರಿ ಗೆಲುವು

ಮಡಿಕೇರಿಯಲ್ಲಿ ನಡೆಯುತ್ತಿರುವ ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌
Published 19 ಏಪ್ರಿಲ್ 2024, 7:25 IST
Last Updated 19 ಏಪ್ರಿಲ್ 2024, 7:25 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌ (ಜಿಪಿಎಲ್‌ ಸೀಸನ್–2)ನಲ್ಲಿ ಗುರುವಾರ ಕೂರ್ಗ್ ವಾರಿಯರ್ಸ್ ತಂಡವು ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಎಲೈಟ್ ಕ್ರಿಕೆಟ್ ಕ್ಲಬ್ ತಂಡವು ಜಿ ಕಿಂಗ್ಸ್ ಸಿದ್ಲಿಂಗಪುರ ತಂಡದ ಎದುರು 9 ವಿಕಟ್‌ಗಳ ಭರ್ಜರಿ ಜಯ ದಾಖಲಿಸಿತು. 

ದಿನದ ಮೊದಲ ಪಂದ್ಯವು ಕೂರ್ಗ್ ವಾರಿಯರ್ಸ್ ಮತ್ತು ಎಂಸಿಬಿ ತಂಡದ ಮಧ್ಯೆ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಂಸಿಬಿ ತಂಡವು ನಿಗದಿತ 10 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತು. ಗುರಿಯನ್ನು ಬೆನ್ನತ್ತಿದ ಕೂರ್ಗ್ ವಾರಿಯರ್ಸ್ ತಂಡವು 6 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ನಷ್ಟ ಇಲ್ಲದೇ ಗೆಲುವಿನ ನಗೆ ಬೀರಿತು. ಕೂರ್ಗ್ ವಾರಿಯರ್ಸ್ ತಂಡದ ಪರವಾಗಿ ಅನಿಲ್ ಕುಡೆಕಲ್ 21 ಎಸೆತದಲ್ಲಿ 53 ರನ್ ಅನ್ನು ಕಲೆ ಹಾಕಿದರು. ಗೋಪಿತ್ 15 ಎಸೆತದಲ್ಲಿ 26 ರನ್ ಕಲೆಹಾಕಿ ಗೆಲುವಿನ ದಡ ಸೇರಿಸಿದರು. ಎಂಸಿಬಿ ಪರವಾಗಿ ಡಾ.ಕುಶ್ವಂತ್‌ ಕೋಳಿಬೈಲು 29 ರನ್ ಕಲೆ ಹಾಕಿದರು.

ದಿನದ 2ನೇ ಪಂದ್ಯವು ಜಿ ಕಿಂಗ್ಸ್ ಸಿದ್ಲಿಂಗಪುರ ಮತ್ತು ಎಲೈಟ್ ಕ್ರಿಕೆಟ್ ಕ್ಲಬ್‌ಗಳ ನಡುವೆ ನಡೆಯಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿ ಕಿಂಗ್ಸ್‌ ಸಿದ್ಲಿಂಗಪುರ ತಂಡವು ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 81 ರನ್‌ ಗಳಿಸಿತು. ತಂಡದ ಪರವಾಗಿ ಷಿ ಬೋಪಣ್ಣ 48 ರನ್ ಕಲೆ ಹಾಕಿ ಅರ್ಧ ಶತಕಕ್ಕೆ ಮೊದಲು ಪುತ್ತೂರು ಲೋಕೇಶ್‌ಗೆ ವಿಕೆಟ್ ಒಪ್ಪಿಸಿದರು. ಎಲೈಟ್ ಕ್ರಿಕೆಟ್ ಕ್ಲಬ್ ಪರವಾಗಿ ಶರತ್ ಚೊಕ್ಕಾಡಿ 2 ಓವರಿನಲ್ಲಿ 3 ವಿಕೆಟ್ ಮತ್ತು ಪುತ್ತೂರು ಲೋಕೇಶ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಗುರಿಯನ್ನು ಬೆನ್ನತ್ತಿದ ಎಲೈಟ್ ಕ್ರಿಕೆಟ್ ಕ್ಲಬ್ 7.4 ಓವರ್‌ನಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿ ಗೆಲುವು ಸಾಧಿಸಿತು. ಶರತ್ ಚೊಕ್ಕಾಡಿ 24 ಎಸೆತಕ್ಕೆ 28 ರನ್ ಗಳಿಸಿ ಅಜೇಯರಾದರು.

ದಿನದ 3ನೇ ಪಂದ್ಯವು ಕೂರ್ಗ್ ವಾರಿಯರ್ಸ್ ಮತ್ತು ಫೀನಿಕ್ಸ್ ಫ್ಲೈಯರ್ಸ್ ತಂಡದ ನಡುವೆ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿದ ಕೂರ್ಗ್ ವಾರಿಯರ್ಸ್ ನಿಗದಿತ 10 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ಕುಡೇಕಲ್ಲು ಅನಿಲ್ 51 ರನ್ ಹಾಗೂ ಕುಜಲ್ ಕಾರ್ಯಪ್ಪ 32 ರನ್ ಗಳಸಿದರು. ಫೀನಿಕ್ಸ್ ತಂಡದ ಪರ ಚಂದನ್ ರಾಜ್ ಬೇಕಲ್ 3 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಫೀನಿಕ್ಸ್ ತಂಡ ನಿಗದಿತ ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು 103 ರನ್ ಗಳಿಸಲಷ್ಟೇ ಸಾಧ್ಯವಾಯಿತು. ತಂಡದ ಪರ ಚಂದನ್ ರಾಜ್ ಬೇಕಲ್ 35 ರನ್ ಗಳಿಸಿದರು.

ಗಮನ ಸೆಳೆದ ಹ್ಯಾಟ್ರಿಕ್ ಸಿಕ್ಸರ್

ಜಿ ಕಿಂಗ್ಸ್ ಸಿದ್ಲಿಂಗಪುರ ಮತ್ತು ಎಲೈಟ್ ಕ್ರಿಕೆಟ್ ಕ್ಲಬ್‌ಗಳ ನಡುವೆ ನಡೆದ ಪಂದ್ಯದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್‌ನ ಪುತ್ತೂರು ಲೋಕೇಶ್ ಹ್ಯಾಟ್ರಿಕ್ ಸಿಕ್ಸರ್‌ ಗಳಿಸುವ ಮೂಲಕ ಪ್ರೇಕ್ಷಕರ ಭಾರಿ ಮೆಚ್ಚುಗೆಗೆ ಪಾತ್ರರಾದರು. ಅವರು ಕೇವಲ 11 ಎಸೆತಗಳಲ್ಲಿ 38 ರನ್‌ ಗಳಿಸಿದ್ದು ವಿಶೇಷ ಎನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT