ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಹಬ್ಬ ಮುಗಿದರೂ ನಿಲ್ಲದ ಸಾಂಸ್ಕೃತಿಕ ದಿಬ್ಬಣ

Published 25 ನವೆಂಬರ್ 2023, 6:21 IST
Last Updated 25 ನವೆಂಬರ್ 2023, 6:21 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ವಿಶಿಷ್ಟ ಸಂಸ್ಕೃತಿ, ಪದ್ಧತಿ, ಪರಂಪರೆ ಹೊಂದಿರುವ ಹುತ್ತರಿ ಕೊಡಗಿನ ಪ್ರಮುಖ ಹಬ್ಬ. ಇದು ಕೇವಲ ಒಂದು ಆಚರಣೆಯಾಗಿ ಮಾತ್ರವೇ ಉಳಿಯದೇ ಕೊಡಗಿನ ಸಾಂಸ್ಕೃತಿಕ ಪರಂಪರೆಯನ್ನೇ ಒಳಗೊಂಡಿರುವುದರಿಂದ ಜೀವಂತಿಕೆಯ ಹಬ್ಬ ಎನಿಸಿದೆ. 

ಇದು ಒಳಗೊಂಡಿರುವ ಅನೇಕ ಸಾಂಸ್ಕೃತಿಕ ಅಂಶಗಳಲ್ಲಿ ಕೋಲಾಟವೂ ಒಂದು. ಈ ಹಬ್ಬದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ನಡೆಸುವ ಕೋಲಾಟ ಇಂದಿಗೂ ಜನಪ್ರಿಯ.

ಹುತ್ತರಿ ಹಬ್ಬದ ರಾತ್ರಿ ಇಡೀ ಕೊಡಗು ಕಿವಿಗಡಚಿಕ್ಕುವ ಪಟಾಕಿ ಸದ್ದಿನೊಡನೆ ‘ಪೊಲಿಪೊಲಿ ದೇವ’ ಎಂಬ ಶಬ್ದದ ನಿನಾದದೊಂದಿಗೆ ಸಂಭ್ರಮಿಸುತ್ತದೆ. ಗದ್ದೆಯಲ್ಲಿ ಬೆಳೆದ ಹೊಸ ಅಕ್ಕಿಯನ್ನು ಭತ್ತದ ಕದಿರಿನೊಂದಿಗೆ ಶ್ರದ್ಧಾಭಕ್ತಿಯಿಂದ ಮನೆಗೆ ತರುವುದೇ ಹುತ್ತರಿ ಹಬ್ಬದ ವಿಶೇಷ.

ಗದ್ದೆಯಲ್ಲಿ ಕದಿರು ತೆಗೆಯವ ಮೊದಲು ಹುತ್ತರಿ ಕೋಲ್ ಮಂದ್‌ನಲ್ಲಿ ಈಡ್ ಕಾರ್ಯಕ್ರಮ ನಡೆಸಲಾಗುತ್ತದೆ. ಅಂದರೆ ಕೋಲ್ ಮಂದ್‌ನಲ್ಲಿ ಪುತ್ತರಿ ಕೋಲಾಟದ ಅಭ್ಯಾಸ ನಡೆಯುತ್ತದೆ.

ಹುತ್ತರಿ ಕದಿರು ತೆಗೆದ ಮಾರನೆ ದಿನದಿಂದ 3ನೇ ದಿನ ಕೇರಿಮಂದ್‌ನಲ್ಲಿ 5ನೇ ದಿನ ಊರ್‌ಮಂದ್‌ನಲ್ಲಿ, 7ನೇ ದಿನ ನಾಡ್ ಮಂದ್‌ನಲ್ಲಿ ಪುರುಷರೆಲ್ಲ ಸೇರಿ ಕೋಲಾಟ ನಡೆಸುತ್ತಾರೆ. ಗಂಡಸರು ಕೊಡಗಿನ ಸಾಂಪ್ರದಾಯಕ ಉಡುಪಾದ ಕುಪ್ಯಚೇಲೆ ಧರಿಸಿ, ಪೀಚೆಕತ್ತಿಯನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡು, ತಲೆಗೆ ಮಂಡೆತುಣಿ ಕಟ್ಟಿ, ಕೈಯಲ್ಲಿ ಬೆತ್ತದ ಕೋಲು ಹಿಡಿದು (ಚೆಂಡ್ ತೂರ ಕೋಲ್) ಕೋಲ್ ಮಂದ್‌ಗೆ ಕೊಡಗಿನ ವಿಶಿಷ್ಟ ಒಡ್ಡೋಲಗ ಸಮೇತ ಆಗಮಿಸುತ್ತಾರೆ.

ಹಿರಿಯರು ಲಯಬದ್ಧವಾಗಿ ದುಡಿಕೊಟ್ಟ್ ಬಾರಿಸುತ್ತಾ, ಬಾಳೋಪಾಟ್ ಹಾಡುತ್ತಾ ಕೋಲಾಟ ಆಡುವವರನ್ನು ಗೌರವ ಪೂರ್ವಕವಾಗಿ ಮಂದ್‌ಗೆ ಕರೆ ತರುತ್ತಾರೆ.

ಕೋಲಾಟಕ್ಕೆಂದೇ ಪ್ರತಿ ಗ್ರಾಮಗಳಲ್ಲಿಯೂ ಮಂದ್ (ನಿಗದಿಯಾದ ಸ್ಥಳ) ಅನ್ನು ಕಾಯ್ದಿರಿಸಿಕೊಳ್ಳಲಾಗಿದೆ. ಕೋಲಾಟಕ್ಕೆಂದೇ ಹದವಾಗಿ ಬಲಿತ 3 ಅಡಿ ಉದ್ದದ ಬಿದಿರಿನ ಬೆತ್ತವನ್ನು ಕಡಿದು ಚೆನ್ನಾಗಿ ಒಣಗಿಸಿ ಅದನ್ನು ಕೈಯಲ್ಲಿ ಹಿಡಿಯುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಗ್ಗಿಸಿರುತ್ತಾರೆ. ಈ ಕೋಲುಗಳು ಒಂದೇ ತೆರನಾಗಿರುತ್ತವೆ.

ಕೊಡವ ಸಾಂಪ್ರದಾಯಕ ದಿರಿಸು ಧರಿಸಿದ ಪುರುಷರು ಕೈಯಲ್ಲಿ ಕೋಲು ಹಿಡಿದು ಮಂದ್‌ನಲ್ಲಿರುವ ಮರದ ಸುತ್ತ ಲಯಬದ್ಧವಾಗಿ ಕುಣಿಯುತ್ತಾ ಕೋಲಾಟ ಆಡುತ್ತಾರೆ. ಜತೆಗೆ, ವಾಲಗಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಪುತ್ತರಿ ಹಾಡು ಹಾಡುತ್ತಾ ಕುಣಿಯುವುದು ಅತ್ಯಂತ ರಮಣೀಯವಾಗಿರುತ್ತದೆ. ಇಲ್ಲಿ ಹಿರಿಯರು ಕಿರಿಯರು ಎನ್ನುವ ಭೇದ ಭಾವವಿಲ್ಲ. ಹೀಗೆ, ಕೋಲಾಟ ನೆಡೆಸುವಾಗ ದೇವಪರಂಬುಲ್ ಕೋಲ್ ಕಳಿಂಜ ಪೋಯಿಲೇ.. ..ಪೋಯಿಲೇ ಎಂದು ಹಾಡುತ್ತಾ ಕೋಲಾಟ ಆರಂಭಿಸುತ್ತಾರೆ.

ಬಳಿಕ ಬಾಲಂಡ ಕೈಲೆಲ್ಲ ಪಾತುರ ಕೋಲ್ ಪೊಯಿಲೇ... ಪೊಯಿಲೇ,
ಚೆಂಡ್ ತೂರ ಕೋಲ್ ಕ್ ಪಟ್ಟ್ ಡ ಚೆಂಡ್ ಪೊಯಿಲೇ ... ಪೊಯಿಲೇ,

ಪಟ್ಟ್ ಡ ಚೆಂಡ್ ಕ್ ಬೊಳ್ಳಿಮುರಾವು ಪೊಯಿಲೇ ...ಪೊಯಿಲೇ ಮೊದಲಾದ ಹಾಡುಗಳನ್ನು ಸಮಯ ಸಂದರ್ಭಕ್ಕೆ ಅನುಗುಣವಾಗಿ ಹಾಡುತ್ತಾರೆ. ಈ ಹಾಡುಗಳಲ್ಲಿ ಪುತ್ತರಿ ಕೋಲನ್ನು ವರ್ಣನೆ ಮಾಡುವುದೂ ಇದೆ.

ಎನ್ನಂಗ್ ಬಾಲಕಿ ಪಾಡತ್ತಾನಿಂಗ ಪೊಯಿಲೇ.. ಪೊಯಿಲೇ, ಬಾಲಂಡ ಬಾಯಿಲ್ ತಂಬುಟ್ಟ್ ಮುದ್ದೆ ಪೊಯಿಲೇ... ಪೊಯಿಲೇ ಮೊದಲಾದ ಹಾಡುಗಳನ್ನು ಹಾಡುತ್ತಾ ಹಲವು ತೆರನಾದ ಹಾಡುಗಳನ್ನು ಅರ್ಧ ಗಂಟೆಗೂ ಹೆಚ್ಚು ಸಮಯ ಹಾಡಿ, ಆಡಿ ಆನಂದಿಸುತ್ತಾರೆ.

ಕೃಷಿ ಕೆಲಸ ಮುಗಿದು ಸುಗ್ಗಿ ಕಾಲ ಬಂದಾಗ ಕೃಷಿಕರಾದ ಕೊಡಗಿನ ಜನತೆ ಹುತ್ತರಿ ಹಬ್ಬದ ಮೂಲಕ ಒಂದು ವಾರಗಳ ಕಾಲ ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಕೊಡವರ ಸಾಂಪ್ರದಾಯಿಕ ಉಡುಪುಗಳ ಮೂಲಕ ಯಾವ ಊರು ನೋಡಿದರೂ ಹುತ್ತರಿ ಕೋಲಾಟದ್ದೇ ಸಂಭ್ರಮ.

ಮಂದ್‌ಗಳಲ್ಲಿ ಹುತ್ತರಿ ಕೋಲಾಟ ನಡೆದ ಬಳಿಕ ಆಯಾ ಕೊಡವ ಸಮಾಜಗಳಲ್ಲಿಯೂ ಹುತ್ತರಿ ಕೋಲಾಟವನ್ನು ನಡೆಸುವುದಿದೆ. ಇಲ್ಲಿ ಕೋಲಾಟದ ಜತೆಗೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಜರುಗುತ್ತವೆ. ಹುತ್ತರಿ ಹಬ್ಬದ್ದೇ ವಿಶೇಷವಾದ ಊಟೋಪಚಾರವೂ ಇರುತ್ತದೆ. ಕುಂದ ಬಳಿಯ ಮೂಂದ್ ನಾಡಿನ ಕೋಲಾಟ, ಬೆಕ್ಕೆಸೊಡ್ಲೂರಿನ ಮಂದತವ್ವ ಕೋಲಾಟ ವಿಶೇಷವಾದುದು.

ಕೊಡವ ಸಂಸ್ಕೃತಿ ಉಳಿಸುವ ಕೆಲಸ

ಆಧುನಿಕತೆಯ ಅಬ್ಬರದಲ್ಲಿ ಬದಲಾಗುತ್ತಿರುವ ಸಂದರ್ಭದಲ್ಲಿ ವಿಶಿಷ್ಟವಾದ ಕೊಡವ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕೊಡವ ಸಮಾಜಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿವೆ. ಪೊನ್ನಂಪೇಟೆ ಕೊಡವ ಸಮಾಜದಿಂದಲೂ ಪ್ರತಿ ವರ್ಷ ಕೊಡವ ಸಾಂಸ್ಕೃತಿಕ ದಿನವನ್ನು ಆಚರಿಸಿ ಯುವ ಜನಾಂಗಕ್ಕೆ ಪದ್ಧತಿ ಪರಂಪರೆ ಹಾಗೂ ಸಂಸ್ಕೃತಿಯನ್ನು ಕಲಿಸುವ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ.

ಕಳೆದ ವರ್ಷ ಮಡಿಕೇರಿಯ ಓಂಕಾರೇಶ್ವರ ದೇವಾಲಯ ಪಾಂಡೀರ ಕುಟುಂಬಸ್ಥರು ಹಾಗೂ ಕೊಡವ ಸಮಾಜದ ವತಿಯಿಂದ ಮಡಿಕೇರಿಯ ಕೋಟೆ ಆವರಣದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ‘ಹುತ್ತರಿ ಕೋಲಾಟ’ದಲ್ಲಿ ಪುರುಷರು ಕೋಲಾಟ ಪ್ರದರ್ಶಿಸಿದರು
ಕಳೆದ ವರ್ಷ ಮಡಿಕೇರಿಯ ಓಂಕಾರೇಶ್ವರ ದೇವಾಲಯ ಪಾಂಡೀರ ಕುಟುಂಬಸ್ಥರು ಹಾಗೂ ಕೊಡವ ಸಮಾಜದ ವತಿಯಿಂದ ಮಡಿಕೇರಿಯ ಕೋಟೆ ಆವರಣದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ‘ಹುತ್ತರಿ ಕೋಲಾಟ’ದಲ್ಲಿ ಪುರುಷರು ಕೋಲಾಟ ಪ್ರದರ್ಶಿಸಿದರು
ಕಳೆದ ವರ್ಷ ಓಂಕಾರೇಶ್ವರ ದೇವಾಲಯ ಪಾಂಡೀರ ಕುಟುಂಬಸ್ಥರು ಹಾಗೂ ಕೊಡವ ಸಮಾಜದ ವತಿಯಿಂದ ಮಡಿಕೇರಿಯ ಕೋಟೆ ಆವರಣದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ‘ಹುತ್ತರಿ ಕೋಲಾಟ’ದಲ್ಲಿ ಪುರುಷರು ಕೋಲಾಟ ಪ್ರದರ್ಶಿಸಿದರು

ಕುಶಾಲನಗರ ಸಮೀಪದ ಚಿಕ್ಕಬೆಟ್ಟಗೇರಿಯಲ್ಲಿ ಕೊಡವ ನ್ಯಾಷನಲ್‌ ಕೌನ್ಸಿಲ್‌ ಸದಸ್ಯರು ಭತ್ತದ ಕದಿರು ಕೊಯ್ಲು ಮಾಡಿ ಸಾಂಪ್ರದಾಯಿಕ ಕೋಲಾಟ ಪ್ರದರ್ಶಿಸಿದರು (ಸಂಗ್ರಹ ಚಿತ್ರ)
ಕುಶಾಲನಗರ ಸಮೀಪದ ಚಿಕ್ಕಬೆಟ್ಟಗೇರಿಯಲ್ಲಿ ಕೊಡವ ನ್ಯಾಷನಲ್‌ ಕೌನ್ಸಿಲ್‌ ಸದಸ್ಯರು ಭತ್ತದ ಕದಿರು ಕೊಯ್ಲು ಮಾಡಿ ಸಾಂಪ್ರದಾಯಿಕ ಕೋಲಾಟ ಪ್ರದರ್ಶಿಸಿದರು (ಸಂಗ್ರಹ ಚಿತ್ರ)
ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಬಸವೇಶ್ವರ ಕೋಲ್‌ಮಂದ್‌ನಲ್ಲಿ ಹುತ್ತರಿ ಕೋಲಾಟ ಎಲ್ಲರ ಗಮನ ಸೆಳೆಯಿತು
(ಸಂಗ್ರಹ ಚಿತ್ರ)
ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಬಸವೇಶ್ವರ ಕೋಲ್‌ಮಂದ್‌ನಲ್ಲಿ ಹುತ್ತರಿ ಕೋಲಾಟ ಎಲ್ಲರ ಗಮನ ಸೆಳೆಯಿತು (ಸಂಗ್ರಹ ಚಿತ್ರ)

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT