ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ‘ಬಿಜೆಪಿಯಿಂದ ಅಲ್ಪಸಂಖ್ಯಾತರಿಗೆ ಅನ್ಯಾಯ’

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್ ಆರೋಪ
Last Updated 26 ಮಾರ್ಚ್ 2023, 8:35 IST
ಅಕ್ಷರ ಗಾತ್ರ

ಮಡಿಕೇರಿ: ಅಲ್ಪಸಂಖ್ಯಾತ ಸಮುದಾಯ ದವರಿಗೆ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಅನ್ಯಾಯ ಮಾಡಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ಗಣೇಶ್ ದೂರಿದರು.

ಅಲ್ಪಸಂಖ್ಯಾತರಿಗೆ ಈವರೆಗೂ ಇದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ವಂಚನೆ ಮಾಡಲಾಗಿದೆ. ಅವರನ್ನು ಆರ್ಥಿಕವಾಗಿ ದು‌ರ್ಬಲ ವಾಗಿರುವ ಪಟ್ಟಿಗೆ ಸೇರಿಸಲಾಗಿದೆ. ಈ ಮೂಲಕ ಆ ಪಟ್ಟಿಯಲ್ಲಿರುವವರಿಗೂ ಅನ್ಯಾಯ ಮಾಡಲಾಗಿದೆ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಇವೆಲ್ಲವೂ ಚುನಾವಣಾ ಗಿಮಿಕ್. ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡೇ ಈ ಘೋಷಣೆ ಮಾಡಲಾಗಿದೆ. ಮತದಾರರು ಬಿಜೆಪಿಯ ಗಿಮಿಕ್‌ಗಳಿಗೆ ಮಾರು ಹೋಗಬಾರದು ಎಂದರು.

ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕುರಿತು ನೀಡಿರುವ ಹೇಳಿಕೆ ಸರಿಯಲ್ಲ ಎಂದು ಖಂಡಿಸಿದರು.

ಅಡ್ಡಂಡ ಕಾರ್ಯಪ್ಪ ಅವರು ಕಲಾವಿದರು. ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಕಲಾವಿದರು ಮಾಡಬೇಕೇ ಹೊರತು ಒಡಕು ಮೂಡಿಸುವ, ಮತ್ತೊಬ್ಬರನ್ನು ನಿಂದಿಸುವ ಕೆಲಸ ಮಾಡಬಾರದು ಎಂದರು.

ಜೆಡಿಎಸ್‌ನ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಕೊಡಗು ಜಿಲ್ಲೆಯಿಂದ 20 ಬಸ್‌ಗಳಲ್ಲಿ ಪಕ್ಷದ ಕಾರ್ಯಕರ್ತರು ತೆರಳುವರು ಎಂದರು.

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್‌ಖಾನ್ ಮಾತನಾಡಿ, ‘ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಂ ಸಮುದಾಯದ ಮೇಲೆ ದಬ್ಬಾಳಿಕೆ ಹೆಚ್ಚು ತ್ತಿದೆ. ಇವೆಲ್ಲವನ್ನೂ ಖಂಡಿಸಿ ಸಮು ದಾಯದವರು ಪ್ರತಿಭಟನೆ ನಡೆ ಸುವ ಮೊದಲು ಕಿತ್ತುಕೊಂಡಿರುವ ಮೀಸಲಾತಿ ಯನ್ನು ಮರಳಿ ನೀಡಬೇಕು. ಒಂದು ವೇಳೆ ಈ ಕುರಿತು ಪ್ರತಿಭಟನೆಗಳು ನಡೆ ದರೆ ಅದಕ್ಕೆ ಬೊಮ್ಮಾಯಿ ಸರ್ಕಾರವೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ರಾಜ್ಯ ಸಂಘಟನಾ ಕಾರ್ಯ ದರ್ಶಿ ಮನ್ಸೂರ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಮೌರ್ಯ, ಮಹಿಳಾ ಘಟಕದ ಪ್ರಧಾನ ಕಾರ್ಯ ದರ್ಶಿ ಲೀಲಾಶೇಷಮ್ಮ, ಜಿಲ್ಲಾ ಕಾರ್ಯ ದರ್ಶಿ ಎನ್.ಸಿ.ಸುನೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT