ಕೊಡಗು ಜಿಲ್ಲೆಯಲ್ಲಿ ಸಂಭ್ರಮದ ಕೈಲ್ ಮುಹೂರ್ತ

ಮಡಿಕೇರಿ: ಕೊಡವರ ಪ್ರಮುಖ ಹಬ್ಬಗಳಲ್ಲಿ ಒಂದಾದ ಕೈಲ್ ಮುಹೂರ್ತವನ್ನು (ಕೈಲ್ ಪೋಳ್ದ್) ಗುರುವಾರ ಜಿಲ್ಲೆಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಕೊಡವ ಭಾಷೆಯಲ್ಲಿ ಕೈಲ್ ಎಂದರೆ ಆಯುಧ, ಪೋಳ್ದ್ ಎಂದರೆ ಪೂಜೆ ಎಂಬ ಅರ್ಥವಿದೆ.
ಭತ್ತ ಬೆಳೆಯುವ ಎಲ್ಲ ಕೆಲಸಗಳು ಮುಗಿಯುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ಅಂಗವಾಗಿ ತಂಬಿಟ್ಟು, ಕಡುಂಬಿಟ್ಟು, ರೊಟ್ಟಿ, ಹೋಳಿಗೆ, ಕೇಸರಿಬಾತ್, ಮಾಂಸದ ಅಡುಗೆ ಮಾಡಿ ಸವಿದರು. ಐನ್ ಮನೆಯಲ್ಲೂ ಹಬ್ಬದ ಆಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಕುಟುಂಬಸ್ಥರು ನಡುಬಾಡೆಯಲ್ಲಿ ದೇವರ ದೀಪಕ್ಕೆ ನಮಸ್ಕರಿಸಿ ಹಿರಿಯರ ಆಶೀರ್ವಾದ ಪಡೆದರು. ನಂತರ ಹಬ್ಬದ ವಿಶೇಷ ಭೋಜನವನ್ನು ಎಲ್ಲರೂ ಸವಿದರು.
ಕೊಡವರ ಸಾಂಪ್ರದಾಯಿಕ ಆಯುಧವಾದ ಕೋವಿ, ಒಡಿಕತ್ತಿ ಹಾಗೂ ಇನ್ನಿತರ ಆಯುಧಗಳನ್ನು ಇಟ್ಟು ಅದಕ್ಕೆ ವಿಶೇಷ ಪಟ್ಟ ತೋಕ್ ಪೂಗಂಧದ ಬೊಟ್ಟನ್ನಿಟ್ಟು, ಅದರ ಮುಂದೆ ಹಬ್ಬದ ಅಂಗವಾಗಿ ತಯಾರಿಸಿದ ವಿಶೇಷ ಭೋಜನವನ್ನಿಟ್ಟು ಕುಟುಂಬದ ಹಿರಿಯರು ಪೂಜೆ ಸಲ್ಲಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.